ಏಷ್ಯನ್‌ ಕಿರಿಯರ ಅಥ್ಲೆಟಿಕ್ಸ್‌ ಕೂಟಕ್ಕೆ ರಾಜ್ಯದ ಮೂವರು

KannadaprabhaNewsNetwork |  
Published : Mar 11, 2024, 01:18 AM ISTUpdated : Mar 11, 2024, 07:06 AM IST
ಕರ್ನಾಟಕದ ಶ್ರೀಯಾ ರಾಜೇಶ್‌.  | Kannada Prabha

ಸಾರಾಂಶ

ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವುದರ ಜೊತೆಗೆ ಮುಂಬರುವ ಏಷ್ಯನ್‌ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದ ಕರ್ನಾಟಕದ ಶ್ರೀಯಾ ರಾಜೇಶ್‌, ಪಾವನಾ ನಾಗರಾಜ್‌, ಉನ್ನತಿ ಬೋಳಂಡ.

ಲಖನೌ: ಈ ವರ್ಷ ಯುಎಇನಲ್ಲಿ ನಡೆಯಲಿರುವ ಏಷ್ಯನ್‌ ಕಿರಿಯರ ಅಥ್ಲೆಟಿಕ್ಸ್‌ ಕೂಟಕ್ಕೆ ಕರ್ನಾಟಕದ ಮೂವರು ಆಯ್ಕೆಯಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂಡರ್‌-20 ಚಾಂಪಿಯನ್‌ಶಿಪ್‌ನ ಮಹಿಳೆಯರ 400 ಮೀ. ಹರ್ಡಲ್ಸ್‌ ಓಟವನ್ನು ರಾಜ್ಯದ ಶ್ರೀಯಾ ರಾಜೇಶ್‌ 59.30 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.

ಉನ್ನತಿ ಬೋಲಂಡ 59.86 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 3ನೇ ಸ್ಥಾನ ಪಡೆದರು. ಏಷ್ಯನ್‌ ಕೂಟಕ್ಕೆ ಅರ್ಹತೆ ಪಡೆಯಲು 1 ನಿಮಿಷ 1.13 ಸೆಕೆಂಡ್‌ ಸಮಯ ನಿಗದಿಪಡಿಸಲಾಗಿತ್ತು.

ಇನ್ನು ಹೆಪ್ಟಥ್ಲಾನ್‌ (7 ಸ್ಪರ್ಧೆ)ನಲ್ಲಿ 5076 ಅಂಕ ಪಡೆದ ಪಾವನಾ ನಾಗರಾಜ್‌ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಲ್ಲದೇ ಏಷ್ಯನ್‌ ಕೂಟಕ್ಕೂ ಅರ್ಹತೆ ಗಿಟ್ಟಿಸಿದರು.

ಉನ್ನತಿ ಹಾಗೂ ಪಾವನಾಗೆ ಇದು ಕೂಟದಲ್ಲಿ 2ನೇ ಪದಕ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ವಿಶ್ವಕಪ್‌ ಪಂದ್ಯ ಬಹಿಷ್ಕಾರಕ್ಕಿದೆ ದೀರ್ಘ ಇತಿಹಾಸ
ರೋಲರ್‌ ಸ್ಕೇಟಿಂಗ್‌: ಮಂಗಳೂರು ಮೂಲದ ಅಹ್ಯಾನ್ ಅನ್ವರ್‌ಗೆ ಚಿನ್ನ