ಕೊಡವ ಕೌಟುಂಬಿಕ ಹಾಕಿ: ನೆರವಂಡ, ಕುಪ್ಪಂಡ, ನೆಲ್ಲಮಕ್ಕಡಕ್ಕೆ ಗೆಲುವು

KannadaprabhaNewsNetwork |  
Published : Apr 24, 2024, 02:22 AM ISTUpdated : Apr 24, 2024, 02:23 AM IST
ಹಾಕಿ ಪಂದ್ಯಾವಳಿ | Kannada Prabha

ಸಾರಾಂಶ

ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿ. ಮಂಗಳವಾರದ ಪಂದ್ಯಗಳಲ್ಲಿ ಬಿರುಸಿನ ಪೈಪೋಟಿ.

ದುಗ್ಗಳ ಸದಾನಂದಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಮಂಗಳವಾರದ ಪಂದ್ಯಗಳಲ್ಲಿ ಬಿರುಸಿನ ಪೈಪೋಟಿ ನಡೆದವು.

ಮುಕ್ಕಾಟಿರ (ಬೋಂದ) ಮತ್ತು ನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದವು. ನಂತರ ನಡೆದ ಟೈ ಬ್ರೇಕರ್ ನಲ್ಲಿ ನೆರವಂಡ ತಂಡ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಕುಪ್ಪಂಡ (ಕೈಕೇರಿ) ಮತ್ತು ಕಲಿಯಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಟೈ ಬ್ರೇಕರ್ ನಲ್ಲಿ ಕುಪ್ಪಂಡ (ಕೈಕೇರಿ) ತಂಡವು ಕಲಿಯಂಡ ಎದುರು ಜಯ ಸಾಧಿಸಿತು.

ಉಳಿದಂತೆ ನೆಲ್ಲ ಮಕ್ಕಡ ತಂಡವು ಅಂಜಪರವಂಡ ತಂಡದ ವಿರುದ್ಧ 4-0 ಅಂತರದ ಜಯ ಸಾಧಿಸಿದರೆ ಪುದಿಯೋಕ್ಕಡ ಕೂತಂಡ ತಂಡದ ವಿರುದ್ಧ 3-1 ಅಂತರದ ಜಯ ಸಾಧಿಸಿತು.

ಇಂದಿನ ಪಂದ್ಯಗಳು9:30 ಗಂಟೆಗೆ ಕುಲ್ಲೇಟಿರ -ಐನಂಡ

10:30 ಗಂಟೆಗೆ ಚೆಪ್ಪುಡಿರ- ಚೆಕ್ಕೆದ

12 ಗಂಟೆಗೆ ಚೇಂದಂಡ-ಕರಿನೆರವಂಡ

1 ಗಂಟೆಗೆ ಬೋವೇರಿಯಂಡ -ಐಚ್ಚಿಟ್ಟಿರ

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಐಪಿಎಲ್‌ ಸಮರಕ್ಕೆ ಸಿದ್ಧತೆ ಶುರು - ಬಹುತೇಕ ಎಲ್ಲಾ ತಂಡಗಳಿಂದಲೂ ಶಿಬಿರ ಆರಂಭ
ಅನುಮತಿ ಗೊಂದಲಗಳಿಗೆ ಬ್ರೇಕ್‌ : ಬೆಂಗಳೂರಿನಲ್ಲಿ ಐಪಿಎಲ್‌ ಖಚಿತ