19ರ ಕಾನ್ಸ್ಟಾಸ್‌ ಭುಜಕ್ಕೆ ಡಿಕ್ಕಿ ಹೊಡೆದ ಕೊಹ್ಲಿ : ವ್ಯಾಪಕ ಟೀಕೆ, ವಿರಾಟ್‌ಗೆ ₹3 ಲಕ್ಷ ದಂಡ

KannadaprabhaNewsNetwork |  
Published : Dec 27, 2024, 12:47 AM ISTUpdated : Dec 27, 2024, 04:06 AM IST
ಡಿಕ್ಕಿ ಹೊಡೆದ ಕೊಹ್ಲಿ | Kannada Prabha

ಸಾರಾಂಶ

ಕೊಹ್ಲಿ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ, ಪಂದ್ಯದ ಸಂಭಾವನೆಯ ಶೇ.20ರಷ್ಟು(₹3 ಲಕ್ಷ ) ದಂಡ ವಿಧಿಸಿ, 1 ಋಣಾತ್ಮಕ ಅಂಕ ನೀಡಿದೆ. ಇದು 2019ರ ಬಳಿಕ ಕೊಹ್ಲಿ ಸಿಕ್ಕ ಮೊದಲ ಋಣಾತ್ಮಕ ಅಂಕ.

ಮೆಲ್ಬರ್ನ್‌: 4ನೇ ಟೆಸ್ಟ್‌ನ ಮೊದಲ ದಿನ ಅಬ್ಬರದ ಆಟವಾಡುತ್ತಿದ್ದ ಆಸ್ಟ್ರೇಲಿಯಾದ 19 ವರ್ಷದ ಯುವ ಬ್ಯಾಟರ್‌ ಸ್ಯಾಮ್‌ ಕಾನ್ಸ್ಟಾಸ್‌ರನ್ನು ಕೆಣಕಿದ ವಿರಾಟ್‌ ಕೊಹ್ಲಿ, ಆತನ ಭುಜಕ್ಕೆ ಡಿಕ್ಕಿ ಹೊಡೆದ ಘಟನೆ ನಡೆಯಿತು.

10ನೇ ಓವರ್‌ ವೇಳೆ ಕ್ರೀಸ್‌ ಬಳಿ ಕಾನ್ಸ್ಟಾಸ್‌ ನಡೆದುಕೊಂಡು ಹೋಗುತ್ತಿದ್ದಾಗ ಕೊಹ್ಲಿ ಭುಜ ತಾಗಿಸಿದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಇಬ್ಬರನ್ನು ಮತ್ತೋರ್ವ ಬ್ಯಾಟರ್‌ ಖವಾಜ ಹಾಗೂ ಅಂಪೈರ್‌ಗಳು ಸಮಾಧಾನ ಪಡಿಸಿದರು. ಕೊಹ್ಲಿ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ, ಪಂದ್ಯದ ಸಂಭಾವನೆಯ ಶೇ.20ರಷ್ಟು(₹3 ಲಕ್ಷ ) ದಂಡ ವಿಧಿಸಿ, 1 ಋಣಾತ್ಮಕ ಅಂಕ ನೀಡಿದೆ. ಇದು 2019ರ ಬಳಿಕ ಕೊಹ್ಲಿ ಸಿಕ್ಕ ಮೊದಲ ಋಣಾತ್ಮಕ ಅಂಕ. 2 ವರ್ಷದ ಅವಧಿಯಲ್ಲಿ 4 ಋಣಾತ್ಮಕ ಅಂಕ ಲಭಿಸಿದರೆ, ಅವರಿಗೆ ಒಂದು ಪಂದ್ಯ ನಿಷೇಧ ಹೇರಲಾಗುತ್ತದೆ. 

ವಿರಾಟ್‌ ನಡೆಗೆ ಅಚ್ಚರಿ: ಕಾನ್ಸ್ಟಾಸ್‌ ಜೊತೆ ಕೊಹ್ಲಿ ನಡೆದುಕೊಂಡ ರೀತಿಗೆ ರಿಕಿ ಪಾಂಟಿಂಗ್‌, ಭಾರತದ ಮಾಜಿ ಕೋಚ್‌ ರವಿ ಶಾಸ್ತ್ರಿ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದು, ಹಿರಿಯ ಆಟಗಾರನಿಂದ ಈ ರೀತಿ ನಡವಳಿಕೆ ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. 

ಕಾನ್ಸ್ಟಾಸ್‌ರ ನೆಚ್ಚಿನ ಕ್ರಿಕೆಟಿಗ ವಿರಾಟ್‌!

ಕಾನ್ಸ್ಟಾಸ್‌ಗೆ ಕೊಹ್ಲಿಯೇ ತಮ್ಮ ನೆಚ್ಚಿನ ಆಟಗಾರ. ನಿಮ್ಮ ಮೊಬೈಲ್‌ಗೆ ಯಾವುದಾದರೂ 3 ಜನ ಸಂದೇಶ ಕಳುಹಿಸುವುದಾದರೆ ಅವರು ಯಾರಾಗಿರಲು ಬಯಸುತ್ತೀರಿ ಎಂದು ಇತ್ತೀಚೆಗಷ್ಟೇ ಕಾನ್ಸ್ಟಾಸ್‌ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಕಾನ್ಸ್ಟಾಸ್‌, ‘ಶೇನ್‌ ವಾಟ್ಸನ್‌, ತಮ್ಮ ತಂದೆ ಹಾಗೂ ಕೊಹ್ಲಿ’ ಎಂದು ಉತ್ತರಿಸಿದ್ದರು. ಅಲ್ಲದೆ, ಭಾರತೀಯರಲ್ಲಿ ನಿಮ್ಮ ನೆಚ್ಚಿನ ಆಟಗಾರ ಯಾರು ಎಂದು ಪ್ರಶ್ನಿಸಿದ್ದಕ್ಕೂ, ಕೊಹ್ಲಿ ಎಂದೆ ಕಾನ್ಸ್ಟಾಸ್‌ ಉತ್ತರ ನೀಡಿದ್ದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ವಿಶ್ವಕಪ್‌ ಪಂದ್ಯ ಬಹಿಷ್ಕಾರಕ್ಕಿದೆ ದೀರ್ಘ ಇತಿಹಾಸ
ರೋಲರ್‌ ಸ್ಕೇಟಿಂಗ್‌: ಮಂಗಳೂರು ಮೂಲದ ಅಹ್ಯಾನ್ ಅನ್ವರ್‌ಗೆ ಚಿನ್ನ