ಕೆಲ ತಿಂಗಳುಗಳ ಹಿಂದೆಯೇ ಶೋಯೆಬ್‌ ಮಲಿಕ್‌ - ಸಾನಿಯಾ ಮಿರ್ಜಾ ವಿಚ್ಛೇದನ!

KannadaprabhaNewsNetwork |  
Published : Jan 22, 2024, 02:16 AM ISTUpdated : Jan 22, 2024, 01:24 PM IST
Sania Mirza

ಸಾರಾಂಶ

ಸಾನಿಯಾ-ಮಲಿಕ್‌ ದಂಪತಿ ನಡುವಿನ ವಿಚ್ಛೇದನ ಬಗ್ಗೆ ಕಳೆದೆರಡು ವರ್ಷಗಳಿಂದಲೂ ವದಂತಿ ಇದ್ದರೂ ಅಧಿಕೃತವಾಗಿರಲಿಲ್ಲ. ಇದೀಗ ಸಾನಿಯಾ ಕುಟುಂಬಸ್ಥರು ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿ: ಭಾರತದ ಖ್ಯಾತ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್‌ ಮಲಿಕ್‌ ಕೆಲ ತಿಂಗಳುಗಳ ಹಿಂದೆಯೇ ವಿಚ್ಛೇದನ ಪಡೆದಿದ್ದರು ಎಂದು ಸಾನಿಯಾರ ಕುಟುಂಬಸ್ಥರು ಭಾನುವಾರ ಸ್ಪಷ್ಟಪಡಿಸಿದ್ದಾರೆ.

2010ರಲ್ಲಿ ವಿವಾಹವಾಗಿದ್ದ ಸಾನಿಯಾ-ಮಲಿಕ್‌ ದಂಪತಿ ನಡುವಿನ ವಿಚ್ಛೇದನ ಬಗ್ಗೆ ಕಳೆದೆರಡು ವರ್ಷಗಳಿಂದಲೂ ವದಂತಿ ಹಬ್ಬುತ್ತಿದ್ದರೂ, ಇಬ್ಬರೂ ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ. 

ಈ ನಡುವೆ ಶನಿವಾರ ಮಲಿಕ್‌ ಬೇರೊಂದು ಮದುವೆಯಾಗಿದ್ದರು. ಇದರ ಬೆನ್ನಲ್ಲೇ ಸಾನಿಯಾ ಕುಟುಂಬಸ್ಥರು ಸಾಮಾಜಿಕ ಜಾಲತಾಣ ಮೂಲಕ ಸ್ಪಷ್ಟನೆ ನೀಡಿದ್ದು, ‘ಇಬ್ಬರೂ ಕೆಲ ತಿಂಗಳ ಹಿಂದೆಯೇ ವಿಚ್ಛೇದಿತರಾಗಿದ್ದಾರೆ. 

ಮಲಿಕ್‌ರ ಭವಿಷ್ಯಕ್ಕೆ ಸಾನಿಯಾ ಶುಭ ಹಾರೈಸಿದ್ದಾರೆ’ ಎಂದಿದೆ. ಅಲ್ಲದೆ, ಸಾನಿಯಾ ತಮ್ಮ ವೈಯಕ್ತಿಕ ಬದುಕನ್ನು ಯಾವತ್ತೂ ಸಾರ್ವಜನಿಕ ವಲಯದಿಂದ ದೂರವಿರಿಸಿದ್ದಾರೆ.

ಸದ್ಯದ ಸೂಕ್ಷ್ಮ ಪರಿಸ್ಥಿತಿಯಲ್ಲೂ ಸಾನಿಯಾರ ಖಾಸಗಿತನವನ್ನು ಎಲ್ಲರೂ ಗೌರವಿಸಬೇಕು’ ಎಂದು ವಿನಂತಿಸಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕ್ರಿಕೆಟ್‌ ‘ವಿಶ್ವ’ ಯುದ್ಧ ಗೆಲ್ಲೋರ್‍ಯಾರು..?
ಫೈನಲ್‌ ಟಿಕೆಟ್‌ಗಾಗಿ ಇಂದು ಕಿವೀಸ್‌ vs ದ.ಆಫ್ರಿಕಾ