ಆರ್‌ಸಿಬಿ, ಚೆನ್ನೈ ಸೇರಿ ಐಪಿಎಲ್‌ ತಂಡಗಳ ಮೌಲ್ಯ ಭಾರೀ ಕುಸಿತ!

Published : Dec 10, 2025, 08:30 AM IST
RCB

ಸಾರಾಂಶ

ವಿಶ್ವದ ಅತಿ ಶ್ರೀಮಂತ ಕ್ರೀಡಾ ಲೀಗ್‌ಗಳಲ್ಲಿ ಒಂದಾಗಿರುವ ಐಪಿಎಲ್‌ ತನ್ನ ಜನಪ್ರಿಯತೆ ಕಳೆದು ಕೊಳ್ಳುತ್ತಿದೆಯೇ ಎಂಬ ಅನುಮಾನ ಶುರುವಾಗಿದೆ. ವರದಿಗಳ ಪ್ರಕಾರ, ಐಪಿಎಲ್‌ನ ಬ್ರಾಂಡ್ ಮೌಲ್ಯ ಗಣನೀಯವಾಗಿ ಕುಸಿದಿದ್ದು, ತಂಡಗಳ ಮೌಲ್ಯದಲ್ಲೂ ಭಾರೀ ಕುಸಿತ ಕಂಡಿದೆ.

ನವದೆಹಲಿ: ವಿಶ್ವದ ಅತಿ ಶ್ರೀಮಂತ ಕ್ರೀಡಾ ಲೀಗ್‌ಗಳಲ್ಲಿ ಒಂದಾಗಿರುವ ಐಪಿಎಲ್‌ ತನ್ನ ಜನಪ್ರಿಯತೆ ಕಳೆದು ಕೊಳ್ಳುತ್ತಿದೆಯೇ ಎಂಬ ಅನುಮಾನ ಶುರುವಾಗಿದೆ. ವರದಿಗಳ ಪ್ರಕಾರ, ಐಪಿಎಲ್‌ನ ಬ್ರಾಂಡ್ ಮೌಲ್ಯ ಗಣನೀಯವಾಗಿ ಕುಸಿದಿದ್ದು, ತಂಡಗಳ ಮೌಲ್ಯದಲ್ಲೂ ಭಾರೀ ಕುಸಿತ ಕಂಡಿದೆ.

ಬ್ರಾಂಡ್ ಫೈನಾನ್ಸ್ ವರದಿ

ವಿಶ್ವದ ಪ್ರಮುಖ ಬ್ರ್ಯಾಂಡ್ ಮೌಲ್ಯಮಾಪನ ಸಲಹಾ ಸಂಸ್ಥೆಯಾಗಿರುವ ಬ್ರಾಂಡ್ ಫೈನಾನ್ಸ್ ವರದಿ ಪ್ರಕಾರ, ಹಾಲಿ ಚಾಂಪಿಯನ್‌ ಆರ್‌ಸಿಬಿ ಸೇರಿದಂತೆ ಬಹುತೇಕ ಎಲ್ಲಾ ತಂಡಗಳ ಮೌಲ್ಯ ಕುಸಿದಿದೆ. ಆರ್‌ಸಿಬಿ ಮೌಲ್ಯ ಕಳೆದ ಬಾರಿಗಿಂದ ಶೇ.10ರಷ್ಟು ಕುಸಿತ ಕಂಡಿದೆ. ಗರಿಷ್ಠ ಪ್ರಮಾಣದಲ್ಲಿ ಮೌಲ್ಯ ಕುಸಿತ ಕಂಡ ತಂಡ ರಾಜಸ್ಥಾನ ರಾಯಲ್ಸ್‌. ತಂಡದ ಮೌಲ್ಯ ಶೇ.35ರಷ್ಟು ಕುಸಿದಿದೆ. 

ಸನ್‌ರೈಸರ್ಸ್‌ ಹೈದರಾಬಾದ್‌ನ ಮೌಲ್ಯ ಶೇ.34 ಕುಸಿತ

ಉಳಿದಂತೆ ಸನ್‌ರೈಸರ್ಸ್‌ ಹೈದರಾಬಾದ್‌ನ ಮೌಲ್ಯ ಶೇ.34, ಕೆಕೆಆರ್‌ ಮೌಲ್ಯ ಶೇ.33, ಡೆಲ್ಲಿ ಮೌಲ್ಯ ಶೇ.26, ಚೆನ್ನೈ ಶೇ.24, ಮುಂಬೈ ಶೇ.9, ಪಂಜಾಬ್‌ ಶೇ.3, ಲಖನೌ ಮೌಲ್ಯ ಶೇ.2ರಷ್ಟು ಕುಸಿತ ಕಂಡಿದೆ. 10 ತಂಡಗಳ ಪೈಕಿ ಗುಜರಾತ್‌ ಟೈಟಾನ್ಸ್ ಮೌಲ್ಯ ಮಾತ್ರ ಏರಿಕೆಕಂಡಿದ್ದು, ಶೇ.2ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.

ಒಟ್ಟಾರೆ ಐಪಿಎಲ್‌ನ ಬ್ರಾಂಡ್ ಮೌಲ್ಯವೂ ಕುಸಿದಿದ್ದು, 2024ಕ್ಕೆ ಹೋಲಿಸಿದರೆ ಶೇ.20ರಷ್ಟು ಕುಸಿತವಾಗಿದೆ ಎಂದು ಬ್ರಾಂಡ್ ಫೈನಾನ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿಮೊನ್ ಫ್ರಾನ್ಸಿಸ್ ಹೇಳಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಭಾರತಕ್ಕೆ 101 ರನ್‌ ಗೆಲುವು - 1ನೇ ಟಿ20 : ದ.ಆಫ್ರಿಕಾ ಮೇಲೆ ಭಾರತ ಸವಾರಿ
ಸೊಗಸಾದ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನು ಗ್ಯಾಲಕ್ಸಿ ಎ17 5ಜಿ