ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದು ಪ್ರಜ್ಞೆ ಕಳೆದುಕೊಂಡ ಮ್ಯಾಕ್ಸ್‌ವೆಲ್‌!

KannadaprabhaNewsNetwork | Updated : Jan 24 2024, 11:26 AM IST

ಸಾರಾಂಶ

ಪಾರ್ಟಿಯಲ್ಲಿ ಅತಿಯಾಗಿ ಕುಡಿದ ಕಾರಣ ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಪ್ರಜ್ಞೆ ಕಳೆದುಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ

ಸಿಡ್ನಿ: ಪಾರ್ಟಿಯಲ್ಲಿ ಅತಿಯಾಗಿ ಕುಡಿದ ಕಾರಣ ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಪ್ರಜ್ಞೆ ಕಳೆದುಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ವರದಿಗಳ ಪ್ರಕಾರ, ಅಡಿಲೇಡ್‌ನಲ್ಲಿ ಕಳೆದ ವಾರ ನಡೆದಿದ್ದ ಪಾರ್ಟಿಯಲ್ಲಿ ಮ್ಯಾಕ್ಸ್‌ವೆಲ್‌ ಕುಡಿದು ಕಾರಣ ಪ್ರಜ್ಞೆ ತಪ್ಪಿದ್ದು, ಎಬ್ಬಿಸಲು ಪ್ರಯತ್ನಿಸಿದರೂ ಎಚ್ಚರಗೊಳ್ಳದ ಕಾರಣ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. 

ಮಾರ್ಗ ಮಧ್ಯೆ ಅವರು ಎದ್ದು ಕೂತಿದ್ದಾರೆ ಎಂದು ತಿಳಿದುಬಂದಿದೆ. ಇದೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಪ್ಯಾಟ್‌ ಕಮಿನ್ಸ್‌ ಅವರು ಮ್ಯಾಕ್ಸ್‌ವೆಲ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ತಾವೇನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಅರಿವಿರಬೇಕು ಎಂದಿದ್ದಾರೆ. ಪ್ರಕರಣದ ಬಗ್ಗೆ ಕ್ರಿಕೆಟ್‌ ಆಸ್ಟ್ರೇಲಿಯಾ ತನಿಖೆ ನಡೆಸುತ್ತಿದೆ.

ಪ್ರೊ ಕಬಡ್ಡಿ: ಯು ಮುಂಬಾ-ಪುಣೆ ಪಂದ್ಯ ಟೈ

ಹೈದರಾಬಾದ್‌: ಯು ಮುಂಬಾ ಹಾಗೂ ಪುಣೇರಿ ಪಲ್ಟನ್‌ ನಡುವಿನ 10ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ ಮಂಗಳವಾರದ ಪಂದ್ಯ 32-32 ಅಂಕಗಳಿಂದ ಟೈ ಆಗಿದೆ. ಇದರೊಂದಿಗೆ ಪುಣೆ 14 ಪಂದ್ಯಗಳಲ್ಲಿ 11 ಜಯ, 2 ಸೋಲು, 1 ಟೈಯೊಂದಿಗೆ 60 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಮುಂಬಾ 14ರಲ್ಲಿ ತಲಾ 6 ಜಯ, ಸೋಲು, 2 ಟೈನೊಂದಿಗೆ 40 ಅಂಕ ಗಳಿಸಿ 6ನೇ ಸ್ಥಾನದಲ್ಲಿದೆ. ಆರಂಭದಿಂದಲೂ ಜಿದ್ದಾಜಿದ್ದಿನ ಹೋರಾಟ ಪ್ರದರ್ಶಿಸಿದ ಇತ್ತಂಡಗಳು, ಕೊನೆವರೆಗೂ ರೋಚಕತೆ ಉಳಿಸಿಕೊಂಡವು. ಮುಂಬಾದ ಗುಮಾನ್‌ ಸಿಂಗ್ 15 ರೈಡ್‌ ಅಂಕ ಗಳಿಸಿದರೆ, ಪುಣೆರಿ ಅಸ್ಲಂ 8, ಮೋಹಿತ್‌ 7 ಅಂಕ ಸಂಪಾದಿಸಿದರು.

ಇಂದಿನ ಪಂದ್ಯಗಳು: ಹರ್ಯಾಣ-ಡೆಲ್ಲಿ, ರಾತ್ರಿ 8ಕ್ಕೆ, ಟೈಟಾನ್ಸ್‌-ತಲೈವಾಸ್‌, ರಾತ್ರಿ 9ಕ್ಕೆ

Share this article