ಮ್ಯಾಕ್ಸಿ 5ನೇ ಟಿ20 ಶತಕ: ಆಸೀಸ್‌ಗೆ ಭರ್ಜರಿ ಗೆಲುವು

KannadaprabhaNewsNetwork | Updated : Feb 12 2024, 12:10 PM IST

ಸಾರಾಂಶ

ಗ್ಲೆನ್‌ ಮಾಕ್ಸ್‌ವೆಲ್‌ರ 5ನೇ ಅಂತಾರಾಷ್ಟ್ರೀಯ ಟಿ20 ಶತಕದ ನೆರವಿನಿಂದ ವೆಸ್ಟ್‌ಇಂಡೀಸ್ ವಿರುದ್ಧ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 34 ರನ್‌ ಜಯಗಳಿಸಿದೆ.

ಅಡಿಲೇಡ್‌: ಗ್ಲೆನ್‌ ಮಾಕ್ಸ್‌ವೆಲ್‌ರ 5ನೇ ಅಂತಾರಾಷ್ಟ್ರೀಯ ಟಿ20 ಶತಕದ ನೆರವಿನಿಂದ ವೆಸ್ಟ್‌ಇಂಡೀಸ್ ವಿರುದ್ಧ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 34 ರನ್‌ ಜಯಗಳಿಸಿದೆ. 

ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 4 ವಿಕೆಟ್‌ಗೆ 241 ರನ್‌ ಗಳಿಸಿತು. ಬೃಹತ್‌ ಗುರಿ ಬೆನ್ನತ್ತಿದ ವಿಂಡೀಸ್‌ 9 ವಿಕೆಟ್‌ಗೆ 207 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಸರಣಿಯಿಂದ ಹೊರಬಿದ್ದಇಂಗ್ಲೆಂಡ್‌ ಸ್ಪಿನ್ನರ್‌ ಲೀಚ್‌
ಲಂಡನ್‌: ಭಾರತ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್‌ ಸರಣಿಯಿಂದ ಇಂಗ್ಲೆಂಡ್‌ನ ಪ್ರಮುಖ ಸ್ಪಿನ್ನರ್‌ ಜ್ಯಾಕ್‌ ಲೀಚ್‌ ಹೊರಬಿದ್ದಿದ್ದಾರೆ.

 ಎಡಗಾಲಿನ ಮಂಡಿ ಗಾಯಕ್ಕೆ ತುತ್ತಾಗಿರುವ ಲೀಚ್‌ ಮುಂದಿನ 3 ಪಂದ್ಯಗಳಿಗೆ ಗೈರಾಗಲಿದ್ದಾರೆ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಭಾನುವಾರ ಪ್ರಕಟಿಸಿದೆ. 

ಆದರೆ ಯಾವುದೇ ಬದಲಿ ಆಟಗಾರನನ್ನು ಘೋಷಿಸಿಲ್ಲ. ಲೀಚ್‌ ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ ವೇಳೆ ಗಾಯಗೊಂಡಿದ್ದರು.

 ಹೀಗಾಗಿ ಅವರು 2ನೇ ಪಂದ್ಯದಿಂದ ಹೊರಗುಳಿದಿದ್ದರು. 3ನೇ ಟೆಸ್ಟ್‌ ರಾಜ್‌ಕೋಟ್‌ನಲ್ಲಿ ಫೆ.15ರಿಂದ ಆರಂಭಗೊಳ್ಳಲಿದೆ.

Share this article