ಪ್ಯಾರಿಸ್‌ ಒಲಿಂಪಿಕ್ಸ್‌ ಬಾಕ್ಸಿಂಗ್‌ ಅರ್ಹತಾ ಟೂರ್ನಿ: ನಿಶಾಂತ್‌ ಪ್ರಿ ಕ್ವಾರ್ಟರ್‌ಗೆ ಲಗ್ಗೆ

KannadaprabhaNewsNetwork |  
Published : Mar 09, 2024, 01:38 AM IST
ನಿಶಾಂತ್‌ ದೇವ್‌ | Kannada Prabha

ಸಾರಾಂಶ

ಪುರುಷರ 71 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ನಿಶಾಂತ್‌, ಜಾರ್ಜಿಯಾದ ಮ್ಯಾಡೀವ್ ಎಸ್ಕೆರ್‌ಖಾನ್‌ ವಿರುದ್ಧ 5-0 ವಿರುದ್ಧ ಗೆಲುವು ಸಾಧಿಸಿದರು. ಪುರುಷರ 92 ಕೆ.ಜಿ. ವಿಭಾಗದಲ್ಲಿ ಸಂಜೀತ್‌ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.

ಬುಸ್ಟೊ ಅರ್ಸಿಜಿಯೊ(ಇಟಲಿ): ವಿಶ್ವ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತ ಭಾರತದ ತಾರಾ ಬಾಕ್ಸರ್‌ ನಿಶಾಂತ್‌ ದೇವ್‌ ಒಲಿಂಪಿಕ್‌ ಅರ್ಹತಾ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ರಾತ್ರಿ ನಡೆದ ಪುರುಷರ 71 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ನಿಶಾಂತ್‌, ಜಾರ್ಜಿಯಾದ ಮ್ಯಾಡೀವ್ ಎಸ್ಕೆರ್‌ಖಾನ್‌ ವಿರುದ್ಧ 5-0 ವಿರುದ್ಧ ಗೆಲುವು ಸಾಧಿಸಿದರು. ನಿಶಾಂತ್‌ರ ಆಕ್ರಮಣಕಾರಿ ಆಟದ ಮುಂದೆ ನಿರುತ್ತರವಾದ ಮ್ಯಾಡೀವ್‌ ಯಾವುದೇ ಪ್ರತಿರೋಧ ತೋರದೆ ಸೋಲೊಪ್ಪಿಕೊಂಡರು. ಈ ಗೆಲುವಿನೊಂದಿಗೆ ನಿಶಾಂತ್‌ ಒಲಿಂಪಿಕ್ಸ್‌ಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದರೆ ಒಲಿಂಪಿಕ್ಸ್‌ ಟಿಕೆಟ್‌ ಸಿಗಲಿದೆ.ಇದೇ ವೇಳೆ ಪುರುಷರ 92 ಕೆ.ಜಿ. ವಿಭಾಗದಲ್ಲಿ ಸಂಜೀತ್‌ ಮೊದಲ ಸುತ್ತಿನಲ್ಲೇ ಕಜಕಸ್ತಾನದ ಐಬೆಕ್‌ ವಿರುದ್ಧ 0-5 ಅಂತರದಲ್ಲಿ ಸೋತು ಹೊರಬಿದ್ದರು.ಭಾರತದಿಂದ ಈಗಾಗಲೇ ನಿಖಾತ್‌ ಜರೀನ್‌(50 ಕೆ.ಜಿ.), ಪ್ರೀತಿ(54 ಕೆ.ಜಿ.), ಪರ್ವೀನ್‌ ಹೂಡಾ(57 ಕೆ.ಜಿ.) ಹಾಗೂ ಲವ್ಲೀನಾ ಬೊರ್ಗೊಹೈನ್‌(75 ಕೆ.ಜಿ.) ಏಷ್ಯನ್‌ ಗೇಮ್ಸ್‌ ಗೆಲುವಿನ ಮೂಲಕ ಒಲಿಂಪಿಕ್ಸ್‌ ಪ್ರವೇಶಿಸಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ವಿಶ್ವಕಪ್‌ ಪಂದ್ಯ ಬಹಿಷ್ಕಾರಕ್ಕಿದೆ ದೀರ್ಘ ಇತಿಹಾಸ
ರೋಲರ್‌ ಸ್ಕೇಟಿಂಗ್‌: ಮಂಗಳೂರು ಮೂಲದ ಅಹ್ಯಾನ್ ಅನ್ವರ್‌ಗೆ ಚಿನ್ನ