ಭಾರತದ ಬಾಕ್ಸರ್‌ ನಿಶಾಂತ್‌ ದೇವ್‌ಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌

KannadaprabhaNewsNetwork |  
Published : Jun 01, 2024, 12:47 AM ISTUpdated : Jun 01, 2024, 04:18 AM IST
ನಿಶಾಂತ್‌ ದೇವ್‌ | Kannada Prabha

ಸಾರಾಂಶ

ವಿಶ್ವ ಅರ್ಹತಾ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶ. ಈ ಬಾರಿ ಒಲಿಂಪಿಕ್ಸ್‌ ಟಿಕೆಟ್‌ ಗಿಟ್ಟಿಸಿಕೊಂಡ ಮೊದಲ ಪುರುಷ ಬಾಕ್ಸರ್‌ ಮತ್ತು ಒಟ್ಟಾರೆ 4ನೇ ಭಾರತೀಯ ಎಂಬ ಖ್ಯಾತಿ.

ಬ್ಯಾಂಕಾಕ್‌: ವಿಶ್ವ ಒಲಿಂಪಿಕ್ಸ್‌ ಅರ್ಹತಾ ಬಾಕ್ಸಿಂಗ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಭಾರತದ ನಿಶಾಂತ್‌ ದೇವ್‌ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. 

ಭಾರತದಿಂದ ಈ ಬಾರಿ ಒಲಿಂಪಿಕ್ಸ್‌ ಟಿಕೆಟ್‌ ಗಿಟ್ಟಿಸಿಕೊಂಡ ಮೊದಲ ಪುರುಷ ಬಾಕ್ಸರ್‌ ಮತ್ತು ಒಟ್ಟಾರೆ 4ನೇ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ನಿಶಾಂತ್‌ ಶುಕ್ರವಾರ ಪುರುಷರ ವಿಭಾಗದ 71 ಕೆ.ಜಿ. ಸ್ಪರ್ಧೆಯಲ್ಲಿ ಮೊಲ್ಡೋವಾ ದೇಶದ ವ್ಯಾಸಿಲ್‌ ಕೆಬೊಟರಿ ವಿರುದ್ಧ 5-0 ಅಂತರದಲ್ಲಿ ಜಯಭೇರಿ ಬಾರಿಸಿದರು. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡರು.

ಭಾರತದಿಂದ ಈಗಾಗಲೇ ನಿಖಾತ್‌ ಜರೀನ್‌(50 ಕೆ.ಜಿ.), ಪ್ರೀತಿ ಪವಾರ್‌(54 ಕೆ.ಜಿ.) ಹಾಗೂ ಲೊವ್ಲಿನಾ ಬೊರ್ಗೋಹೈನ್‌(75 ಕೆ.ಜಿ.) ಒಲಿಂಪಿಕ್ಸ್‌ ಪ್ರವೇಶಿಸಿದ್ದಾರೆ. ಈ ಮೂವರೂ ಮಹಿಳಾ ವಿಭಾಗದಲ್ಲಿ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ.

ಸಚಿನ್ ಸೆಮಿಗೆ: ಇದೇ ವೇಳೆ ಪುರುಷರ 57 ಕೆ.ಜಿ. ವಿಭಾಗದ ಸಚಿನ್‌ ಸಿವಾಚ್‌ ಸೆಮಿಫೈನಲ್‌ ಪ್ರವೇಶಿಸಿದರೆ, ಕಾಮನ್‌ವೆಲ್ತ್ ಗೇಮ್ಸ್‌ ಚಿನ್ನ ವಿಜೇತ ಅಮಿತ್‌ ಪಂಘಲ್‌ 51 ಕೆ.ಜಿ. ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ಗೇರಿದರು. ಮಹಿಳೆಯರ 60 ಕೆ.ಜಿ. ಸ್ಪರ್ಧೆಯಲ್ಲಿ ಅಂಕುಶಿತಾ ಹಾಗೂ 66 ಕೆ.ಜಿ. ವಿಭಾಗದಲ್ಲಿ ಅರುಂಧತಿ ಸೋತು ಹೊರಬಿದ್ದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಫೈನಲ್‌ ಟಿಕೆಟ್‌ಗಾಗಿ ಇಂದು ಕಿವೀಸ್‌ vs ದ.ಆಫ್ರಿಕಾ
ಅಂತೂ ಬೆಂಗಳೂರಿಗೆ ಐಪಿಎಲ್‌ ಬಂತು- ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಉದ್ಘಾಟನಾ ಪಂದ್ಯ