ಪ್ರೊ ಕಬಡ್ಡಿ: ತಲೈವಾಸ್‌ಗೆ ಮಣಿದ ಬೆಂಗಳೂರು ಬುಲ್ಸ್‌

KannadaprabhaNewsNetwork |  
Published : Jan 22, 2024, 02:21 AM ISTUpdated : Jan 22, 2024, 01:52 PM IST
Banglore Bulls

ಸಾರಾಂಶ

10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ ಗೆ 9ನೇ ಸೋಲು ಎದುರಾಯಿತು. ಭಾನುವಾರದ ತಮಿಳ್‌ ತಲೈವಾಸ್‌ ವಿರುದ್ಧದ ಪಂದ್ಯದಲ್ಲಿ ಬುಲ್ಸ್‌ 28-45 ಅಂಕಗಳಿಂದ ಸೋಲನುಭವಿಸಿತು.

ಹೈದರಾಬಾದ್‌: ರೇಡರ್‌ ಅಕ್ಷಿತ್‌ ಅವರ ಸೂಪರ್‌ ಟೆನ್‌ ಸಾಹಸದ ಹೊರತಾಗಿಯೂ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯ 82ನೇ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ ವಿರುದ್ಧ ಪರಾಭವಗೊಂಡಿತು.ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಬುಲ್ಸ್‌ 28-45 ಅಂಕಗಳಿಂದ ತಲೈವಾಸ್‌ಗೆ ಮಂಡಿಯೂರಿತು. 

ಬುಲ್ಸ್‌ ಪರ ಏಕಾಂಗಿ ಹೋರಾಟ ನಡೆಸಿದ ಅಕ್ಷಿತ್‌ 12 ಅಂಕ ಗಳಿಸಿ ತಂಡದ ಹೋರಾಟಕ್ಕೆ ಸಾಕ್ಷಿಯಾದರೆ, ಭರತ್‌ ಹಾಗೂ ಇತರರ ವೈಫಲ್ಯ ತಂಡವನ್ನು ಕಾಡಿತು.ಅತ್ತ ನರೇಂದರ್‌ ಮತ್ತು ಅಜಿಂಕ್ಯ ಪವಾರ್‌ ಕ್ರಮವಾಗಿ 14 ಮತ್ತು 11 ಅಂಕ ಗಳಿಸಿ ತಲೈವಾಸ್‌ ಜಯದಲ್ಲಿ ನಿರ್ಣಾಯಕ ಪಾತ್ರವಹಿಸಿದರು. 

ಇದರೊಂದಿಗೆ ತಲೈವಾಸ್‌ ಸತತ 2ನೇ ಜಯ ಗಳಿಸಿದರೆ, ಬುಲ್ಸ್‌ 9ನೇ ಸೋಲಿಗೆ ತುತ್ತಾಯಿತು.ಹಿನ್ನಡೆ ತಗ್ಗಿಸುವ ವಿಶ್ವಾಸದೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಬುಲ್ಸ್‌ ಆಟಗಾರರು, ನಿಧಾನವಾಗಿ ಆಲ್‌ರೌಂಡ್‌ ಪ್ರದರ್ಶನಕ್ಕೆ ಒತ್ತು ನೀಡಿದರು. 

ಹೊಂದಾಣಿಕೆ ಆಟದೊಂದಿಗೆ ಎದುರಾಳಿ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದರು. ಹೀಗಾಗಿ 25ನೇ ನಿಮಿಷಕ್ಕೆ 16-26ರಲ್ಲಿಹಿನ್ನಡೆಯಲ್ಲಿದ್ದ ಬುಲ್ಸ್‌, ಕೊನೆಯ ಹತ್ತು ನಿಮಿಷಗಳಿರುವಾಗ ಹಿನ್ನಡೆಯನ್ನು 24-32 ಅಂಕಗಳಿಗೆ ಕಡಿಮೆ ಮಾಡಿತು. 

29ನೇ ನಿಮಿಷದಲ್ಲಿತಲೈವಾಸ್‌ ಆಟಗಾರರನ್ನು ಆಲೌಟ್‌ ಮಾಡಿದ್ದು, ಬುಲ್ಸ್‌ ಪಾಳಯದಲ್ಲಿಹೊಸ ಹುರುಪು ನೀಡಿತು.ಮೊದಲ ಅವಧಿಯಲ್ಲಿಅಬ್ಬರಿಸದ ನರೇಂದರ್‌, ದ್ವಿತೀಯಾರ್ಧದಲ್ಲಿಬುಲ್ಸ್‌ ಆಟಗಾರರಿಗೆ ಸಿಂಹಸ್ವಪ್ನವಾದರು. 

ಸೂಪರ್‌ ಟೆನ್‌ ಮೂಲಕ ಅಬ್ಬರಿಸಿದ ನರೇಂದರ್‌, ತಲೈವಾಸ್‌ ತಂಡ ಸುಮಾರು 10 ಅಂಕಗಳ ಮುನ್ನಡೆಯನ್ನು ಕಾಯ್ದುಕೊಳ್ಳುವಂತೆ ನೋಡಿಕೊಂಡರು. 35ನೇ ನಿಮಿಷದಲ್ಲಿಬುಲ್ಸ್‌ ತಂಡವನ್ನು ಎರಡನೇ ಬಾರಿ ಕಟ್ಟಿಹಾಕಿದ ತಲೈವಾಸ್‌ ಪಂದ್ಯ ಮುಗಿಸುವ ಮುನ್ನವೇ ಗೆಲುವಿನ ಸುಳಿವು ನೀಡಿತು. 

ಅಂತಿಮ ಕ್ಷ ಣದಲ್ಲಿರೇಡಿಂಗ್‌ ಮತ್ತು ಟ್ಯಾಕಲ್‌ ಎರಡರಲ್ಲೂಬುಲ್ಸ್‌ ಆಟಗಾರರು ಸೊರಗಿದರು. ಹೀಗಾಗಿ ತಲೈವಾಸ್‌ ತಂಡ ಸಹಜವಾಗಿ ಮೇಲುಗೈ ಸಾಧಿಸಿತು.

ಎಡ ಬದಿಯ ರೇಡರ್‌ ಅಕ್ಷಿತ್‌ ಅವರ ಮಿಂಚಿನ ಆಟದ ಬಲದಿಂದ ರೇಡಿಂಗ್‌ ವಿಭಾಗದಲ್ಲಿಸಮಬಲದ ಹೋರಾಟ ನೀಡಿದ ಹೊರತಾಗಿಯೂ ಟ್ಯಾಕಲ್‌ನಲ್ಲಿಸಂಪೂರ್ಣ ವೈಫಲ್ಯ ಅನುಭವಿಸಿದ ಬೆಂಗಳೂರು ಬುಲ್ಸ್‌ ತಂಡ ಪಂದ್ಯದ ಮೊದಲ ಅವಧಿಯ ಅಂತ್ಯಕ್ಕೆ 14-25 ಅಂಕಗಳ ಅಂತರದಲ್ಲಿಹಿನ್ನಡೆ ಅನುಭವಿಸಿತು.

ಹಿಂದಿನ ಪಂದ್ಯದಲ್ಲಿತೆಲುಗು ಟೈಟನ್ಸ್‌ ವಿರುದ್ಧ ಗೆದ್ದು ಫಾರ್ಮ್‌ ಕಂಡುಕೊಂಡಿದ್ದ ಬುಲ್ಸ್‌, ತಲೈವಾಸ್‌ ವಿರುದ್ಧವು ಅದೇ ಲಯ ಮುಂದುವರಿಸುವ ವಿಶ್ವಾಸದಲ್ಲಿತ್ತು. ಆದರೆ ತಂಡದ ಸ್ಟಾರ್‌ ರೇಡರ್‌ ಭರತ್‌ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಪಂದ್ಯ ಆರಂಭದಿಂದಲೂ ಹಿನ್ನಡೆಗೆ ಗುರಿಯಾದ ಬುಲ್ಸ್‌, 14ನೇ ನಿಮಿಷದಲ್ಲಿಆಲೌಟ್‌ ಬಲೆಗೆ ಬಿದ್ದಿತು. ಎದುರಾಳಿಯ ಅಜಿಂಕ್ಯ ಪವಾರ್‌ ಅವರ ಅರ್ಭಟದಿಂದ ಕುಗ್ಗಿದ ಬುಲ್ಸ್‌ ಆಟಗಾರರು ವಿರಾಮದವರೆಗೂ ಮುನ್ನಡೆ ಪಡೆಯಲು ಸಾಧ್ಯವಾಗಲಿಲ್ಲ. 

ಪ್ರಥಮಾರ್ಧಕ್ಕೆ ತಲೈವಾಸ್‌ ಆಟಗಾರರು, 14 ರೇಡಿಂಗ್‌, 8 ಟ್ಯಾಕಲ್‌ ಮತ್ತು 2 ಆಲೌಟ್‌ ಜತೆಗೆ 1 ಬೋನಸ್‌ ಅಂಕ ಗಳಿಸಿದರೆ, ಬೆಂಗಳೂರು ಬುಲ್ಸ್‌ ಆಟಗಾರರು 13 ರೇಡಿಂಗ್‌ ಮತ್ತು ಕೇವಲ 1 ಟ್ಯಾಕಲ್‌ ಅಂಕಕ್ಕೆ ಸೀಮಿತರಾದರು. 

ಬೆಂಗಳೂರು ಬುಲ್ಸ್‌ ತನ್ನ ಮುಂದಿನ ಪಂದ್ಯದಲ್ಲಿಜನವರಿ 28ರಂದು ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಎದುರಿಸಲಿದೆ.ಭಾನುವಾರದ ಮತ್ತೊಂದು ಪಂದ್ಯದಲ್ಲಿ ಗುಜರಾತ್‌ ವಿರುದ್ಧ ಪುಣೇರಿ ಪಲ್ಟನ್‌ 34-24 ಅಂಕಗಳಿಂದ ಗೆಲುವು ಸಾಧಿಸಿತು.

ಇಂದಿನ ಪಂದ್ಯಗಳು
ಬೆಂಗಾಲ್‌-ಜೈಪುರ, ರಾತ್ರಿ 8ಕ್ಕೆ
ಟೈಟಾನ್ಸ್-ಹರ್ಯಾಣ, ರಾತ್ರಿ 9ಕ್ಕೆ

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಬೆಂಗಳೂರಲ್ಲೇ ಐಪಿಎಲ್‌ ಉದ್ಘಾಟನೆ : ಮಾ.28ಕ್ಕೆ ಆರ್‌ಸಿಬಿ vs ಸನ್‌ರೈಸರ್ಸ್‌
ಟಿ20 ವಿಶ್ವಕಪ್‌ ವಿಜೇತ ಭಾರತಕ್ಕೆ ಬಿಸಿಸಿಐ ₹ 131 ಕೋಟಿ ಬಂಪರ್‌!