5ನೇ ಟೆಸ್ಟ್‌ನಿಂದ ರಾಹುಲ್‌ ಔಟ್‌: ಲಂಡನ್‌ನಲ್ಲಿ ಚಿಕಿತ್ಸೆ

KannadaprabhaNewsNetwork |  
Published : Mar 01, 2024, 02:18 AM ISTUpdated : Mar 01, 2024, 08:13 AM IST
5ನೇ ಟೆಸ್ಟ್‌ನಿಂದ ರಾಹುಲ್‌ ಔಟ್‌: ಲಂಡನ್‌ನಲ್ಲಿ ಚಿಕಿತ್ಸೆ | Kannada Prabha

ಸಾರಾಂಶ

ಗಾಯಾಳು ಕೆ.ಎಲ್‌.ರಾಹುಲ್‌ ಇಂಗ್ಲೆಂಡ್‌ ವಿರುದ್ಧದ 5ನೇ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ.

ನವದೆಹಲಿ: ಗಾಯಾಳು ಕೆ.ಎಲ್‌.ರಾಹುಲ್‌ ಇಂಗ್ಲೆಂಡ್‌ ವಿರುದ್ಧದ 5ನೇ ಟೆಸ್ಟ್‌ನಿಂದ ಹೊರಬಿದ್ದಿದ್ದು, ತಜ್ಞ ವೈದ್ಯರ ಸಲಹೆ ಪಡೆಯಲು ಲಂಡನ್‌ಗೆ ತೆರಳಿರುವುದಾಗಿ ಬಿಸಿಸಿಐ ತಿಳಿಸಿದೆ. ಇದೇ ವೇಳೆ ಬೂಮ್ರಾ 5ನೇ ಟೆಸ್ಟ್‌ಗೆ ಆಯ್ಕೆಗೆ ಲಭ್ಯರಿದ್ದಾರೆ ಎಂದೂ ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಬೀಜಿಂಗ್‌ನಲ್ಲಿ 2027ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌

ಬೀಜಿಂಗ್‌: 2027ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಚೀನಾದ ಬೀಜಿಂಗ್‌ನಲ್ಲಿ ಆಯೋಜನೆಗೊಳ್ಳಲಿದೆ ಎಂದು ವಿಶ್ವ ಅಥ್ಲೆಟಿಕ್ಸ್‌ ಫೆಡರೇಶನ್‌ ಗುರುವಾರ ತಿಳಿಸಿದೆ. 

ಇಟಲಿ ಸರ್ಕಾರ ರೋಮ್‌ನಲ್ಲಿ ಈ ಕೂಟದ ಆಯೋಜನೆಗೆ 92 ಮಿಲಿಯನ್‌ ಡಾಲರ್‌ ಹಣ ನೀಡಲು ನಿರಾಕರಿಸಿದ ಹಿನ್ನೆಲೆ ಇಟಾಲಿಯನ್‌ ಟ್ರ್ಯಾಕ್‌ ಫೆಡರೇಶನ್‌ ಸಲ್ಲಿಸಿದ್ದ ಬಿಡ್‌ ಅನ್ನು ಹಿಂಪಡೆದಿತ್ತು. 

ಈ ಕೂಟವನ್ನು 2015ರಲ್ಲಿ ಕೂಡಾ ಚೀನಾವೇ ಆಯೋಜಿಸಿತ್ತು. ಮುಂದಿನ ವರ್ಷ ನಡೆಯಲಿರುವ ವಿಶ್ವ ಒಳಾಂಗಣ ಚಾಂಪಿಯನ್‌ಶಿಪ್‌ ಕೂಡಾ ಚೀನಾದ ನಾನ್‌ಜಿಂಗ್‌ನಲ್ಲಿ ಆಯೋಜನೆಗೊಳ್ಳಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಆರ್‌ಸಿಬಿ ಖರೀದಿಗೆ ಮ್ಯಾಂಚೆಸ್ಟರ್‌ ಯುನೈಟೆಡ್‌ ಆಸಕ್ತಿ!
ಭಾರತ 6ನೇ ಬಾರಿಗೆ ಅಂಡರ್‌-19 ವಿಶ್ವ ಚಾಂಪಿಯನ್‌