ಆರ್‌ಸಿಬಿ ಅಭಿಮಾನಿಗಳ ಬೆಂಬಲ ಅತ್ಯದ್ಭುತ: ತಾರಾ ಕ್ರಿಕೆಟಿಗ ದಿನೇಶ್‌ ಕಾರ್ತಿಕ್‌

KannadaprabhaNewsNetwork |  
Published : Feb 01, 2024, 02:00 AM IST
ದಿನೇಶ್‌ ಕಾರ್ತಿಕ್‌ | Kannada Prabha

ಸಾರಾಂಶ

ಐಪಿಎಲ್‌ ಆಡುವಾಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ತಂಡದ ಅಭಿಮಾನಿಗಳ ಬೆಂಬಲ ಅಪಾರವಾದದ್ದು. ತವರಿನಲ್ಲಿ ಆಡುವಾಗ ನಮಗೆ ಅತ್ಯದ್ಭುತ ಬೆಂಬಲ ಸಿಗುತ್ತದೆ ಎಂದು ಕ್ರಿಕೆಟಿಗ ದಿನೇಶ್‌ ಕಾರ್ತಿಕ್‌ ಹೇಳಿದ್ದಾರೆ.

ಬೆಂಗಳೂರು: ಐಪಿಎಲ್‌ ಆಡುವಾಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ತಂಡದ ಅಭಿಮಾನಿಗಳ ಬೆಂಬಲ ಅಪಾರವಾದದ್ದು. ತವರಿನಲ್ಲಿ ಆಡುವಾಗ ನಮಗೆ ಅತ್ಯದ್ಭುತ ಬೆಂಬಲ ಸಿಗುತ್ತದೆ ಎಂದು ಭಾರತ ಹಾಗೂ ಆರ್‌ಸಿಬಿಯ ತಾರಾ ಕ್ರಿಕೆಟಿಗ ದಿನೇಶ್‌ ಕಾರ್ತಿಕ್‌ ಹೇಳಿದರು.ಇತ್ತೀಚೆಗೆ ನಗರದ ಖಾಸಗಿ ಮಾಲ್‌ನಲ್ಲಿ ನಡೆದ ಸ್ಟಾರ್ ಟಾಕ್ ಕಾರ್ಯಕ್ರಮದಲ್ಲಿ ಅವರು ತಮ್ಮ ಕ್ರಿಕೆಟ್‌ ಬದುಕು, ಐಪಿಎಲ್‌ ಹಾಗೂ ಕೋಚಿಂಗ್‌ ಬಗ್ಗೆ ಮುಕ್ತವಾಗಿ ಮಾತನಾಡಿದರು. ಈ ವೇಳೆ ಅವರ ಆರ್‌ಸಿಬಿ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಜೊತೆ ಚರ್ಚಿಸಿದರು. ತರಬೇತಿಯ ಸವಾಲುಗಳ ಬಗ್ಗೆಯೂ ಅನುಭವ ಹಂಚಿಕೊಂಡ ಕಾರ್ತಿಕ್ ಅಭಿಮಾನಿಗಳೊಂದಿಗೆ ಫೋಟೋಗಳನ್ನೂ ತೆಗೆಸಿಕೊಂಡರು. ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾಧ್ಯಮದವರೊಂದಗೂ ಸಂವಾದ ನಡೆಸಿದರು. ಆಟದ ವೇಳೆ ಪ್ರದರ್ಶನದ ಒತ್ತಡ ನಿಭಾಯಿಸಲು ಕ್ರೀಡಾಪಟುಗಳು ಬಳಸಿಕೊಳ್ಳುವ ಕಾರ್ಯತಂತ್ರಗಳ ಬಗ್ಗೆಯೂ ಮುಕ್ತವಾಗಿ ಮಾತನಾಡಿದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!