ಖುಷಿಯ ಅಲೆಯಲ್ಲಿ ತೇಲಾಡಿದ ಆರ್‌ಸಿಬಿ ಆಟಗಾರರು

Published : Jun 02, 2026, 12:54 PM IST
RCB

ಸಾರಾಂಶ

ಭಾನುವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ಐಪಿಎಲ್‌ ಫೈನಲ್‌ ಗೆಲುವಿನ ಬಳಿಕ ಚಾಂಪಿಯನ್‌ ಆರ್‌ಸಿಬಿ ತಂಡದ ಆಟಗಾರರು ಖುಷಿಯ ಅಲೆಯಲ್ಲಿ ತೇಲಾಡಿದ್ದಾರೆ. ಈವರೆಗೂ ಕಂಡಿರದ ರೀತಿ ವಿರಾಟ್‌ ಕೊಹ್ಲಿ ಸೇರಿ ಕೆಲ ಆಟಗಾರರು ಡ್ಯಾನ್ಸ್‌ ಮಾಡಿದ್ದು, ಅಭಿಮಾನಿಗಳು ಮನಸೋತಿದ್ದಾರೆ.

 ಅಹಮದಾಬಾದ್‌: ಭಾನುವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ಐಪಿಎಲ್‌ ಫೈನಲ್‌ ಗೆಲುವಿನ ಬಳಿಕ ಚಾಂಪಿಯನ್‌ ಆರ್‌ಸಿಬಿ ತಂಡದ ಆಟಗಾರರು ಖುಷಿಯ ಅಲೆಯಲ್ಲಿ ತೇಲಾಡಿದ್ದಾರೆ. ಈವರೆಗೂ ಕಂಡಿರದ ರೀತಿ ವಿರಾಟ್‌ ಕೊಹ್ಲಿ ಸೇರಿ ಕೆಲ ಆಟಗಾರರು ಡ್ಯಾನ್ಸ್‌ ಮಾಡಿದ್ದು, ಅಭಿಮಾನಿಗಳು ಮನಸೋತಿದ್ದಾರೆ.

ಕಪ್‌ ಗೆಲುವಿನ ಬಳಿಕ ಆರ್‌ಸಿಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ತಾರಾ ಆಟಗಾರ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ, ತಂಡದ ಕೋಚ್‌ ದಿನೇಶ್ ಕಾರ್ತಿಕ್ ಹಾಗೂ ಇತರ ಸದಸ್ಯರೊಂದಿಗೆ ಅತ್ಯಂತ ಉತ್ಸಾಹದಿಂದ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಕೊಹ್ಲಿಯ ಅನಿರೀಕ್ಷಿತ ಸ್ಟೆಪ್‌ಗಳನ್ನು ನೋಡಿ ಅನುಷ್ಕಾ ಅವರೇ ದಂಗಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಕಪ್‌ ಹಿಡಿದುಕೊಂಡೇ ಡ್ಯಾನ್ಸ್‌

ಇನ್ನು ಹೋಟೆಲ್‌ನ ಹೊರಭಾಗದಲ್ಲಿ ಆಟಗಾರರನ್ನು ಸ್ವಾಗತಿಸಲು ಕೆಲವರು ಡೋಲು ಬಾರಿಸುತ್ತಿದ್ದರು. ಡೋಲಿನ ಶಬ್ಧಕ್ಕೆ ಕೃನಾಲ್‌ ಪಾಂಡ್ಯ ಕಪ್‌ ಹಿಡಿದುಕೊಂಡೇ ಡ್ಯಾನ್ಸ್‌ ಮಾಡಿದ್ದಾರೆ. ಬಳಿಕ ಅವರಿಗೆ ಕೊಹ್ಲಿಯೂ ಜೊತೆಯಾಗಿದ್ದು, ಇಬ್ಬರೂ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಕೂಡಾ ಭಾರೀ ಟ್ರೆಂಡ್‌ ಆಗುತ್ತಿದೆ.

ದೇಶ-ವಿದೇಶದಲ್ಲಿ ಫ್ಯಾನ್ಸ್‌ ಭಾರೀ ಸಂಭ್ರಮಾಚರಣೆ

ಆರ್‌ಸಿಬಿ ಗೆಲುವಿನ ಬಳಿಕ ಅಭಿಮಾನಿಗಳು ಕರ್ನಾಟಕ ಮಾತ್ರವಲ್ಲದೇ ದೇಶದ ವಿವಿಧ ಭಾಗಗಳಲ್ಲೂ ಸಂಭ್ರಮಿಸಿದ್ದಾರೆ. ರಾತ್ರಿ ವೇಳೆ ಪಟಾಕಿ ಸಿಡಿಸಿ, ಡ್ಯಾನ್ಸ್‌ ಮಾಡಿ ತಮ್ಮ ನೆಚ್ಚಿನ ತಂಡದ ಗೆಲುವಿಗೆ ಖುಷಿಪಟ್ಟಿದ್ದಾರೆ. ಇನ್ನು, ವಿದೇಶದಲ್ಲೂ ಕೆಲ ಕಡೆಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಪಾಕಿಸ್ತಾನದಲ್ಲೂ ಆರ್‌ಸಿಬಿ ಜೆರ್ಸಿ ಧರಿಸಿ ತಂಡದ ಗೆಲುವಿನ ಬಳಿಕ ಕುಣಿದಾಡುತ್ತಿರುವ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಕೇವಲ 5 ದಿನಗಳಲ್ಲಿ 4 ಹಿಮಾಲಯ ಶಿಖರ ಏರಿದ ‘ಬ್ಯಾಡ್‌ನೀಸ್‌ಗುರು’ ಸಿದ್ಧಾರ್ಥ್ ಉನಿಯಾಲ್‌
ಕಪ್‌ ಮೇಲೆ ಕಪ್‌ ಗೆದ್ದ ಆರ್‌ಸಿಬಿ!