ಲಖನೌ ವಿರುದ್ಧ ಸೇಡಿಗೆ ಚಾಂಪಿಯನ್‌ ಚೆನ್ನೈ ಕಾತರ

KannadaprabhaNewsNetwork |  
Published : Apr 23, 2024, 12:53 AM ISTUpdated : Apr 23, 2024, 04:55 AM IST
ಗಾಯಕ್ವಾಡ್‌ | Kannada Prabha

ಸಾರಾಂಶ

ಕಳೆದ ವಾರ ಲಖನೌ ವಿರುದ್ಧ ಸೋತಿದ್ದ ಸಿಎಸ್‌ಕೆಗೆ ಜಯದ ಹಳಿಗೆ ಮರಳುವ ಗುರಿ. ಎರಡೂ ತಂಡಗಳು ಈ ಬಾರಿ ಟೂರ್ನಿಯಲ್ಲಿ ತಲಾ 7 ಪಂದ್ಯಗಳನ್ನಾಡಿದ್ದು, ತಲಾ 4 ಗೆಲುವು ದಾಖಲಿಸಿವೆ.

ಚೆನ್ನೈ: 4 ದಿನಗಳ ಹಿಂದಷ್ಟೇ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಪರಾಭವಗೊಂಡಿದ್ದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ ಈ ಬಾರಿ ತವರಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ. 

ಜೊತೆಗೆ ಅಂಕಪಟ್ಟಿಯಲ್ಲಿ ಮೇಲೇರಲು ಕಾಯುತ್ತಿದೆ.ಕನ್ನಡಿಗ ಕೆ.ಎಲ್‌.ರಾಹುಲ್‌ ನಾಯಕತ್ವದ ಲಖನೌ ಹಾಗೂ ಋತುರಾಜ್‌ ಗಾಯಕ್ವಾಡ್‌ ಮುನ್ನಡೆಸುತ್ತಿರುವ ಚೆನ್ನೈ ತಂಡಗಳು ಈ ಬಾರಿ ಟೂರ್ನಿಯಲ್ಲಿ ತಲಾ 7 ಪಂದ್ಯಗಳನ್ನಾಡಿದ್ದು, ತಲಾ 4 ಗೆಲುವು ದಾಖಲಿಸಿವೆ. 

ಆದರೆ ನೆಟ್ ರನ್‌ ರೇಟ್‌ ಆಧಾರದಲ್ಲಿ ಚೆನ್ನೈ ತಂಡ ಲಖನೌಗಿಂದ ಮೇಲಿದೆ.ಚೆನ್ನೈ ತಂಡ ಈ ಬಾರಿ ತವರಿನಲ್ಲಿ 3 ಪಂದ್ಯಗಳನ್ನಾಡಿದ್ದು, ಮೂರರಲ್ಲೂ ಗೆದ್ದಿದೆ. ಋತುರಾಜ್‌ ಹಾಗೂ ಶಿವಂ ದುಬೆ ಮಾತ್ರ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಇತರರಿಂದ ಇನ್ನಷ್ಟೇ ದೊಡ್ಡ ಮೊತ್ತ ಹರಿದುಬರಬೇಕಿದೆ. ರಚಿನ್‌ ರವೀಂದ್ರ ಲಯ ಕಳೆದುಕೊಂಡಿರುವುದು ತಂಡದ ತಲೆನೋವಿಗೆ ಕಾರಣವಾಗಿದೆ. ಜಡೇಜಾ ಆಲ್ರೌಂಡ್‌ ಪ್ರದರ್ಶನ, ಧೋನಿಯ ಸ್ಫೋಟಕ ಬ್ಯಾಟಿಂಗ್‌ ತಂಡದ ಪ್ಲಸ್ ಪಾಯಿಂಟ್‌. ಇನ್ನು, ಬೌಲಿಂಗ್‌ ವಿಭಾಗ ಮೊನಚು ದಾಳಿ ಸಂಘಟಿಸಬೇಕಿದ್ದು, ಮುಸ್ತಾಫಿಜುರ್‌, ಪತಿರನ ಜೊತೆ ದೀಪಕ್‌, ತುಷಾರ್‌ ಲಖನೌ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಿದೆ.

ಮತ್ತೊಂದೆಡೆ, ಕಳೆದ ಪಂದ್ಯದಲ್ಲಿ ಚೆನ್ನೈ ಬೌಲರ್‌ಗಳ ಮೇಲೆ ಸವಾರಿ ಮಾಡಿದ್ದ ಲಖನೌ ಈಗ ಮತ್ತೊಂದು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ ಚೆನ್ನೈ ಕ್ರೀಡಾಂಗಣದಲ್ಲಿ ಗೆಲ್ಲುವುದು ಎಷ್ಟು ಕಷ್ಟ ಎಂಬುದು ಲಖನೌಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಸೂಕ್ತ ಯೋಜನೆಯೊಂದಿಗೆ ಕಣಕ್ಕಿಳಿಯಬೇಕಿದೆ.

ಒಟ್ಟು ಮುಖಾಮುಖಿ: 04

ಚೆನ್ನೈ: 01

ಲಖನೌ: 02

ಫಲಿತಾಂಶವಿಲ್ಲ: 01ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಋತುರಾಜ್‌(ನಾಯಕ), ರಚಿನ್‌, ರಹಾನೆ, ಮೊಯೀನ್‌, ದುಬೆ, ಜಡೇಜಾ, ಧೋನಿ, ದೀಪಕ್‌, ದೇಶಪಾಂಡೆ, ಮುಸ್ತಾಫಿಜುರ್‌, ಪತಿರನ.

ಲಖನೌ: ಡಿ ಕಾಕ್‌, ರಾಹುಲ್‌(ನಾಯಕ), ಹೂಡಾ, ಬದೋನಿ, ಸ್ಟೋಯ್ನಿಸ್‌, ಪೂರನ್‌, ಕೃನಾಲ್‌, ಬಿಷ್ಣೋಯ್‌, ಮೊಹ್ಸಿನ್‌, ಮ್ಯಾಟ್‌ ಹೆನ್ರಿ, ಯಶ್‌.

ಪಂದ್ಯ: ಸಂಜೆ 7.30ಕ್ಕೆ

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಐಪಿಎಲ್‌ ಸಮರಕ್ಕೆ ಸಿದ್ಧತೆ ಶುರು - ಬಹುತೇಕ ಎಲ್ಲಾ ತಂಡಗಳಿಂದಲೂ ಶಿಬಿರ ಆರಂಭ
ಅನುಮತಿ ಗೊಂದಲಗಳಿಗೆ ಬ್ರೇಕ್‌ : ಬೆಂಗಳೂರಿನಲ್ಲಿ ಐಪಿಎಲ್‌ ಖಚಿತ