ಭಾರತದ ಪರ ಕಮ್‌ಬ್ಯಾಕ್‌ ಪಂದ್ಯದಲ್ಲಿ ರಿಷಭ್‌ ಪಂತ್‌ ಅಬ್ಬರ!

KannadaprabhaNewsNetwork |  
Published : Jun 02, 2024, 01:45 AM ISTUpdated : Jun 02, 2024, 04:10 AM IST
ರಿಷಭ್‌ ಪಂತ್‌ | Kannada Prabha

ಸಾರಾಂಶ

ವಿಶ್ವಕಪ್‌ನ ಆಡುವ 11ರಲ್ಲಿ ರಿಷಭ್‌ ಪಂತ್‌ಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಅತ್ತ ಕಡೆ ಸಂಜು ಸ್ಯಾಮ್ಸನ್‌ ಕೂಡಾ ವಿಫಲರಾಗಿದ್ದಾರೆ. ಪಂದ್ಯದಲ್ಲಿ ವಿರಾಟ್‌ ಹೊರತುಪಡಿಸಿ 14 ಮಂದಿ ಆಡಿದರು.

ನ್ಯೂಯಾರ್ಕ್‌: ಭೀಕರ ಕಾರು ಅಪಘಾತಕ್ಕೆ ತುತ್ತಾಗಿ ಕಳೆದ 17 ತಿಂಗಳುಗಳಿಂದ ಭಾರತ ಕ್ರಿಕೆಟ್‌ ತಂಡದಿಂದ ದೂರವುಳಿದಿದ್ದ ರಿಷಭ್‌ ಪಂತ್‌, ರಾಷ್ಟ್ರೀಯ ತಂಡದ ಪರ ಕಮ್‌ಬ್ಯಾಕ್‌ ಪಂದ್ಯದಲ್ಲಿ ಅಬ್ಬರಿಸಿದ್ದಾರೆ.

 ಈ ಮೂಲಕ ಟಿ20 ವಿಶ್ವಕಪ್‌ಗ ಆಡುವ 11ರ ಬಳಗದಲ್ಲಿ ಸ್ಥಾನವನ್ನು ಬಹುತೇಕ ಖಚಿತಗೊಳಿಸಿದ್ದಾರೆ.ಶನಿವಾರ ಬಾಂಗ್ಲಾದೇಶ ವಿರುದ್ಧದ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ರಿಷಭ್‌ ಸ್ಫೋಟಕ ಆಟವಾಡಿದರು. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅವರು 32 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ನೊಂದಿಗೆ 54 ರನ್‌ ಸಿಡಿಸಿ ನಿವೃತ್ತಿ ಪಡೆದರು. 

ತಮ್ಮ ಆಕರ್ಷಕ ಹೊಡೆತಗಳ ಮೂಲಕ ರಂಜಿಸಿದ ರಿಷಭ್‌, ಟೂರ್ನಿಯಲ್ಲಿ ಭಾರತದ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗುವ ನಿರೀಕ್ಷೆಯಿದೆ.

ಮತ್ತೆ ಕೈಕೊಟ್ಟ ಸಂಜು: ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 1 ರನ್‌ ಗಳಿಸಲು 6 ಎಸೆತಗಳನ್ನು ತೆಗೆದುಕೊಂಡರು. ಮತ್ತೊಂದೆಡೆ ರಿಷಭ್‌ ಪಂತ್ ಅಬ್ಬರಿಸಿದ್ದರಿಂದ ವಿಶ್ವಕಪ್‌ನ ಮುಖ್ಯ ಸುತ್ತಿನ ಪಂದ್ಯಗಳಲ್ಲಿ ಸಂಜು ಬದಲು ರಿಷಭ್‌ಗೆ ಮಣೆ ಹಾಕುವ ಸಾಧ್ಯತೆಯಿದೆ.

ವಿರಾಟ್‌ ಕೊಹ್ಲಿ ಗೈರು

ಶುಕ್ರವಾರ ಅಮೆರಿಕಕ್ಕೆ ತೆರಳಿ ತಂಡ ಕೂಡಿಕೊಂಡಿದ್ದ ವಿರಾಟ್‌ ಕೊಹ್ಲಿ ಶನಿವಾರ ನಡೆದ ಅಭ್ಯಾಸ ಪಂದ್ಯದಿಂದ ಹೊರಗುಳಿದರು. ಇತರ 14 ಮಂದಿ ಭಾರತದ ಪರ ಕಣಕ್ಕಿಳಿದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಬೆಂಗಳೂರಲ್ಲೇ ಐಪಿಎಲ್‌ ಉದ್ಘಾಟನೆ : ಮಾ.28ಕ್ಕೆ ಆರ್‌ಸಿಬಿ vs ಸನ್‌ರೈಸರ್ಸ್‌
ಟಿ20 ವಿಶ್ವಕಪ್‌ ವಿಜೇತ ಭಾರತಕ್ಕೆ ಬಿಸಿಸಿಐ ₹ 131 ಕೋಟಿ ಬಂಪರ್‌!