ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿ: ಬೋಪಣ್ಣ-ಎಬ್ಡೆನ್‌ ಫೈನಲ್‌ಗೆ

KannadaprabhaNewsNetwork |  
Published : Mar 30, 2024, 12:48 AM IST
ಮಯಾಮಿ ಓಪನ್‌ ಫೈನಲ್‌ ಪ್ರವೇಶಿಸಿರುವ ಭಾರತದ ರೋಹನ್‌ ಬೋಪಣ್ಣ-ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌.  | Kannada Prabha

ಸಾರಾಂಶ

ಟೆನಿಸ್‌ ತಾರೆ ರೋಹನ್‌ ಬೋಪಣ್ಣಗೆ ವಯಸ್ಸು ಎನ್ನುವುದು ಕೇವಲ ನಂಬರ್‌ ಮಾತ್ರ. 44 ವರ್ಷದ ಬೋಪಣ್ಣ ತಮ್ಮ ಜೊತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಮಿಯಾಮಿ ಓಪನ್‌ ಪುರುಷರ ಡಬಲ್ಸ್‌ ಫೈನಲ್‌ಗೇರಿದ್ದು, ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಫ್ಲೋರಿಡಾ(ಅಮೆರಿಕ): ಭಾರತದ ಹಿರಿಯ ಟೆನಿಸಿಗ ರೋಹನ್‌ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಮಿಯಾಮಿ ಓಪನ್‌ ಎಟಿಪಿ 1000 ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಈ ಮೂಲಕ ಎಲ್ಲಾ 9 ಎಟಿಪಿ ಮಾಸ್ಟರ್ಸ್‌ ಟೂರ್ನಿಗಳಲ್ಲಿ ಫೈನಲ್‌ಗೇರಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಬೋಪಣ್ಣ ಪಾತ್ರರಾದರು. ಲಿಯಾಂಡರ್‌ ಪೇಸ್‌ ಈ ಸಾಧನೆ ಮಾಡಿದ ಮೊದಲಿಗರು.ಗುರುವಾರ ರಾತ್ರಿ ನಡೆದ ಪುರುಷರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಇಂಡೋ-ಆಸೀಸ್‌ ಜೋಡಿ, ಸ್ಪೇನ್‌ನ ಗ್ರಾನೊಲೆರ್ಸ್‌ ಹಾಗೂ ಅರ್ಜೆಂಟೀನಾದ ಜೆಬಲ್ಲೊಸ್‌ ವಿರುದ್ಧ 6-1, 6-4 ಅಂತರದಲ್ಲಿ ಗೆಲುವು ಸಾಧಿಸಿತು. ಹಾಲಿ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಂ ಚಾಂಪಿಯನ್‌ ಬೋಪಣ್ಣ-ಎಬ್ಡೆನ್‌ ಶನಿವಾರ ಫೈನಲ್‌ನಲ್ಲಿ ಕ್ರೊವೇಷಿಯಾದ ಇವಾನ್‌ ಡೊಡಿಗ್‌-ಅಮೆರಿಕದ ಆಸ್ಟಿನ್‌ ಕ್ರಾಜಿಕೆಕ್‌ ವಿರುದ್ಧ ಸೆಣಸಲಿದ್ದಾರೆ. ಬೋಪಣ್ಣಗೆ ಇದು ಮಿಯಾಮಿ ಓಪನ್‌ನಲ್ಲಿ ಮೊದಲ, ಒಟ್ಟಾರೆ 14ನೇ ಎಟಿಪಿ ಮಾಸ್ಟರ್ಸ್‌ 1000 ಫೈನಲ್‌ ಆಗಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!
ಹರಿಣ ಪಡೆಗೆ ಶರಣಾದ ಟೀಂ ಇಂಡಿಯಾ