ಜೊತೆಯಾಗಿ ಕ್ರಿಕೆಟ್‌ ಆಡಲಿದ್ದಾರೆ ಸಚಿನ್‌ ಮತ್ತು ಗವಾಸ್ಕರ್‌: ಲೀಗ್‌ ಯಾವುದು ಗೊತ್ತಾ?

KannadaprabhaNewsNetwork |  
Published : Oct 01, 2024, 01:19 AM ISTUpdated : Oct 01, 2024, 04:18 AM IST
ಸಚಿನ್‌ ಮತ್ತು ಗವಾಸ್ಕರ್‌ | Kannada Prabha

ಸಾರಾಂಶ

6 ತಂಡ ಪಾಲ್ಗೊಳ್ಳಲಿರುವ ಟಿ20 ಟೂರ್ನಿ. ವರ್ಷಾಂತ್ಯಕ್ಕೆ ಭಾರತದಲ್ಲೇ ಆಯೋಜನೆ. ಈ ಟೂರ್ನಿ ಇನ್ನು ಪ್ರತಿವರ್ಷ ನಡೆಯಲಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

ಮುಂಬೈ: ಈ ವರ್ಷಾಂತ್ಯಕ್ಕೆ ನಡೆಯಲಿರುವ ಚೊಚ್ಚಲ ಆವೃತ್ತಿಯ ಇಂಟರ್‌ನ್ಯಾಷನಲ್‌ ಮಾಸ್ಟರ್ಸ್‌ ಲೀಗ್‌(ಐಎಂಎಲ್‌) ಟಿ20 ಟೂರ್ನಿಯಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗರಾದ ಸಚಿನ್‌ ತೆಂಡುಲ್ಕರ್‌, ಸುನಿಲ್‌ ಗವಾಸ್ಕರ್‌ ಸೇರಿ ಪ್ರಮುಖರು ಆಡಲಿದ್ದಾರೆ.

 ಇವರಿಬ್ಬರೂ ಲೀಗ್‌ನ ಕಮಿಷನರ್‌ಗಳಾಗಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್‌, ಇಂಗ್ಲೆಂಡ್‌ ಹಾಗೂ ಶ್ರೀಲಂಕಾ ತಂಡಗಳು ಪಾಲ್ಗೊಳ್ಳಲಿವೆ. ಟೂರ್ನಿಯ ಪಂದ್ಯಗಳು ಮುಂಬೈ, ಲಖನೌ, ರಾಯ್ಪುರಲ್ಲಿ ನಡೆಯಲಿವೆ. ಈ ಟೂರ್ನಿ ಇನ್ನು ಪ್ರತಿವರ್ಷ ನಡೆಯಲಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

 ಲೀಗ್‌ ಬಗ್ಗೆ ಮಾತನಾಡಿರುವ ಸಚಿನ್‌, ‘ಕ್ರೀಡಾಪಟುಗಳು ಎಂದಿಗೂ ಹೃದಯದಿಂದ ನಿವೃತ್ತಿ ಹೊಂದುವುದಿಲ್ಲ. ಮತ್ತೆ ಕ್ರಿಕೆಟ್‌ ಅಂಗಳಕ್ಕೆ ಮರಳಲು ಕಾಯುತ್ತಿದ್ದೇನೆ. ಭಾರತವನ್ನು ಪ್ರತಿನಿಧಿಸುವಾಗ ಅತ್ಯುತ್ತಮವಾಗಿ ಕ್ರಿಕೆಟ್‌ ಆಡಲು ಮತ್ತು ದೇಶಕ್ಕಾಗಿ ಗೆಲ್ಲಲು ಪ್ರಯತ್ನಿಸುತ್ತೇವೆ’ ಎಂದಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ

ಬ್ರಿಸ್ಟೋಲ್‌(ಇಂಗ್ಲೆಂಡ್‌): ಆತಿಥೇಯ ಇಂಗ್ಲೆಂಡ್‌ ತಂಡ ತವರಿನಲ್ಲೇ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಸೋಲನುಭವಿಸಿದೆ. ಭಾನುವಾರ ರಾತ್ರಿ ನಡೆದ 5ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 49 ರನ್‌ ಜಯಗಳಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯನ್ನು 3-2 ಅಂತರದಲ್ಲಿ ಕೈವಶಪಡಿಸಿಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 49.2 ಓವರ್‌ಗಳಲ್ಲಿ 309 ರನ್‌ಗೆ ಆಲೌಟಾಯಿತು. 

ಬೆನ್‌ ಡಕೆಟ್‌ 107, ಹ್ಯಾರಿ ಬ್ರೂಕ್‌ 72 ರನ್‌ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ಆಸೀಸ್‌ 20.4 ಓವರ್‌ಗಳಲ್ಲಿ 2 ವಿಕೆಟ್‌ಗೆ 165 ರನ್‌ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಡಿಎಲ್‌ಎಸ್‌ ನಿಯಮದ ಪ್ರಕಾರ 49 ರನ್ ಮುಂದಿದ್ದ ಕಾರಣ ಆಸೀಸ್‌ ಗೆಲುವು ತನ್ನದಾಗಿಸಿಕೊಂಡಿತು.

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌