ಕೋಲ್ಹಾಪುರ: ರೋಹಿತ್ ಶರ್ಮಾ ವಿಕೆಟ್ ಬಿದ್ದಾಗ ಸಂಭ್ರಮಿಸಿದ್ದಕ್ಕೆ ಇಬ್ಬರು ಯುವಕರು ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೆ 65ರ ವೃದ್ಧ ಶನಿವಾರ ಮೃತಪಟ್ಟಿದ್ದಾರೆ. ಬುಧವಾರ ಮುಂಬೈ-ಹೈದರಾಬಾದ್ ನಡುವಿನ ಪಂದ್ಯದ ವೇಳೆ ಯುವಕರಿಬ್ಬರು ಬಂಡೂಪಂತ್ ಎಂಬವರ ಮೇಲೆ ಕೋಲುಗಳಿಂದ ಹಲ್ಲೆ ಮಾಡಿದ್ದಾರೆ.ಅವರ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಹಲ್ಲೆಗೈದಿದ್ದ ಬಲ್ವಂತ್, ಸಾಗರ್ ಎಂಬವರನ್ನು ಬಂಧಿಸಲಾಗಿದೆ.
ಹಸರಂಗ ಐಪಿಎಲ್‌ಗಿಲ್ಲ: ಸನ್‌ರೈಸರ್ಸ್‌ಗೆ ಹಿನ್ನಡೆ
ಹೈದರಾಬಾದ್: ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಶ್ರೀಲಂಕಾದ ಆಲ್ರೌಂಡರ್ ವಾನಿಂಡು ಹಸರಂಗ 17ನೇ ಆವೃತ್ತಿ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಇದರಿಂದ ಸನ್‌ರೈಸರ್ಸ್ ಹೈದರಬಾದ್‌ಗೆ ತೀವ್ರ ಹಿನ್ನಡೆಯುಂಟಾಗುವ ಸಾಧ್ಯತೆಯಿದೆ. ಕಳೆದ ಬಾರಿ ಆರ್‌ಸಿಬಿ ತಂಡದಲ್ಲಿದ್ದ ಹರಸಂಗರನ್ನು ಈ ಬಾರಿ ಹರಾಜಿನಲ್ಲಿ ಸನ್‌ರೈಸರ್ಸ್ ಫ್ರಾಂಚೈಸಿಯು ₹1.5 ಕೋಟಿ ರನೀಡಿ ಖರೀದಿಸಿತ್ತು. ಇತ್ತೀಚೆಗೆ ಬಾಂಗ್ಲಾ ವಿರುದ್ಧ ಏಕದಿನ ಸರಣಿಯಲ್ಲಿ ಹಸರಂಗ ಗಾಯದ ನಡುವೆಯೇ ಆಡಿದ್ದರು.
ಗಂಟೆಗೆ 156 ಕಿ.ಮೀ. ವೇಗದಲ್ಲಿ ಬೌಲ್ ಮಾಡಿದ ಲಖನೌ ಟೀಂನ ಮಯಾಂಕ್
ಲಖನೌ: ಐಪಿಎಲ್ ಮತ್ತೊಬ್ಬ ‘ಎಕ್ಸ್‌ಪ್ರೆಸ್ ವೇಗಿ’ಯ ಅನಾವರಣಕ್ಕೆ ಸಾಕ್ಷಿಯಾಗಿದೆ. ಶನಿವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಮಯಾಂಕ್ ಯಾದವ್ ಗಂಟೆಗೆ 155.8 ಕಿ.ಮೀ. ವೇಗದಲ್ಲಿ ಬೌಲ್ ಮಾಡಿ ಕ್ರಿಕೆಟ್ ಜಗತ್ತಿಗೆ ಅಚ್ಚರಿ ಮೂಡಿಸಿದ್ದಾರೆ.
ಇದು ಈ ಐಪಿಎಲ್‌ನ ಅತಿ ವೇಗದ ಎಸೆತ ಎನಿಸಿದೆ. ಐಪಿಎಲ್‌ನಲ್ಲಿ 155 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡಿದ ಭಾರತದ 2ನೇ ವೇಗಿ ಎನ್ನುವ ಹಿರಿಮೆಗೆ ಡೆಲ್ಲಿಯ 21 ವರ್ಷದ ಮಯಾಂಕ್ ಪಾತ್ರರಾಗಿದ್ದಾರೆ. ಈ ಮೊದಲು ಜಮ್ಮು-ಕಾಶ್ಮೀರ್ ಉಮ್ರಾನ್ ಮಲಿಕ್ ಈ ಸಾಧನೆ ಮಾಡಿದ್ದರು. ಮಯಾಂಕ್ ತಾವು ದ.ಆಫ್ರಿಕಾದ ದಿಗ್ಗಜ ವೇಗಿ ಡೇಲ್ ಸ್ಟೈನ್‌ರ ಅಪ್ಪಟ ಅಭಿಮಾನಿ ಎಂದು ಹೇಳಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ವೇಗವಾಗಿ ಬೌಲ್ ಮಾಡುವ ಗುರಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.