ಎಸ್‌ಎಫ್‌ಎ ಕೂಟ: 5ನೇ ದಿನ 500ಕ್ಕೂ ಹೆಚ್ಚು ಮಹಿಳಾ ಪಟುಗಳು ಭಾಗಿ

KannadaprabhaNewsNetwork |  
Published : Jan 21, 2024, 01:31 AM IST
ಎಸ್ಎಫ್‌ಅ | Kannada Prabha

ಸಾರಾಂಶ

ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ (PDCSE) ನಲ್ಲಿ ನಡೆಯುತ್ತಿರುವ ಎಸ್‌ಎಫ್‌ಎ ಚಾಂಪಿಯನ್‌ಶಿಪನ್‌ ಟೆನಿಸ್, ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್ ಸೇರಿದಂತೆ ಕ್ರೀಡಾ ವಿಭಾಗಗಳಲ್ಲಿ 500ಕ್ಕೂ ಹೆಚ್ಚು ಪ್ರತಿಭಾವಂತ ಮಹಿಳಾ ಕ್ರೀಡಾಪಟುಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದರು.

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಎಸ್‌ಎಫ್‌ಎ ಚಾಂಪಿಯನ್‌ಶಿಪ್‌ನ 5 ನೇ ದಿನವು ಮಹಿಳಾ ಅಥ್ಲೀಟ್‌ಗಳನ್ನು ಅಭಿನಂದಿಸುವುದರ ಅವರು ಕ್ರೀಡೆಗಳನ್ನು ಆಡಲು ಪ್ರೇರೇಪಿಸಿತು. "ಶೀ ಇಸ್ ಗೋಲ್ಡ್ " ಎಂಬ ಘೋಷವಾಕ್ಯದ ಮೂಲಕ ಮಹಿಳಾ ಕ್ರೀಡಾಪಟುಗಳ ಸಾಮರ್ಥ್ಯ, ಕೌಶಲ್ಯ ಮತ್ತು ನಿರ್ಣಯವನ್ನು ಗೌರವಿಸಲಾಯಿತು.

ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ (PDCSE) ನಲ್ಲಿ ಟೆನಿಸ್, ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್ ಸೇರಿದಂತೆ ಕ್ರೀಡಾ ವಿಭಾಗಗಳಲ್ಲಿ 500ಕ್ಕೂ ಹೆಚ್ಚು ಪ್ರತಿಭಾವಂತ ಮಹಿಳಾ ಕ್ರೀಡಾಪಟುಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದರು. ಇದರ ಮಧ್ಯೆ ಫೋರ್ಸ್ 1 ಸ್ಕೇಟಿಂಗ್ ರಿಂಕ್ ಸ್ಕೇಟಿಂಗ್‌ಗಾಗಿ ರೋಮಾಂಚನಕಾರಿ ಫೈನಲ್‌ಗೆ ಸಾಕ್ಷಿಯಾಯಿತು.

ಟೆನಿಸ್ ಅಖಾಡದಲ್ಲಿ, U-10 ರಿಂದ U-18 ವರೆಗಿನ ವಿಭಾಗಗಳ ಹುಡುಗಿಯರು ತಮ್ಮ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿಸುವ ಮೂಲಕ ಅಂಕಣಗಳಲ್ಲಿ ಗೆಲುವಿಗಾಗಿ ಪೈಪೋಟಿ ನಡೆಸಿದರು.

“ಟೆನಿಸ್ ನನಗೆ ಕೇವಲ ಒಂದು ಕ್ರೀಡೆಯಲ್ಲ, ಇದು ಮೋಜಿನ ಮೂಲವಾಗಿದೆ, ಏಕೆಂದರೆ ನಾನು ಕೋರ್ಟ್‌ನಲ್ಲಿರುವಾಗ ನಾನು ಅದನ್ನು ನಿಜವಾಗಿಯೂ ಆನಂದಿಸುತ್ತೇನೆ. ನಾನು 5 ವರ್ಷಗಳಿಂದ ಟೆನಿಸ್ ಆಡುತ್ತಿದ್ದೇನೆ ಮತ್ತು ವಾರದಲ್ಲಿ 3 ದಿನ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತೇನೆ. ನನ್ನ ಪ್ರಯಾಣದುದ್ದಕ್ಕೂ, ನನ್ನ ಕುಟುಂಬವು ಸಂಪೂರ್ಣ ಬೆಂಬಲವನ್ನು ನೀಡಿದೆ ಮತ್ತು ಕ್ರೀಡೆಯಲ್ಲಿ ಇದುವರೆಗಿನ ನನ್ನ ಸಾಧನೆಗಳ ಬಗ್ಗೆ ನನಗೆಹೆಮ್ಮೆಯಿದೆ. ನನ್ನ ಶಾಲೆಯ ಮೂಲಕ ಎಸ್‌ಎಫ್‌ಎ ಚಾಂಪಿಯನ್‌ಶಿಪ್ ಬಗ್ಗೆ ತಿಳಿದುಕೊಂಡು ಇಲ್ಲಿ ಭಾಗವಹಿಸಲು ಬಂದಿದ್ದೇನೆ. ನಾನು ಮೊದಲ ಸುತ್ತಿನಲ್ಲಿ ಗೆದ್ದಿದ್ದೇನೆ ಮತ್ತು ಮುಂಬರುವ ಸುತ್ತುಗಳಲ್ಲಿನಸವಾಲುಗಳನ್ನುಎದುರಿಸಲು ಉತ್ಸುಕಳಾಗಿದ್ದೇನೆ ಎಂದು ಓಕ್ರಿಡ್ಜ್ ಇಂಟರ್‌ನ್ಯಾಶನಲ್ ಸ್ಕೂಲ್‌ನ 12 ವರ್ಷದ ಟೆನಿಸ್ ಆಟಗಾರ್ತಿ ವನಿಕಾ ಹೇಳಿದರು.

ಬ್ಯಾಸ್ಕೆಟ್‌ಬಾಲ್ ಅಂಕಣವು U-14 ಮತ್ತು U-16 ಹುಡುಗಿಯರ ಆಟದೊಂದಿಗೆ ರಂಗೇರಿತು.ಎಲ್ಲಾ ಆಟಗಾರರು ತೀವ್ರ ಪೈಪೋಟಿಯಿಂದ ಕೂಡಿದ ಪಂದ್ಯಗಳಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಲು ಕೌಶಲ್ಯ ಮತ್ತು ದೃಢತೆ ಪ್ರದರ್ಶಿಸಿದರು.

ಬೆಳೆಯುತ್ತಿರುವಾಗ, ಕೋಬ್ ಬ್ರ್ಯಾಂಟ್ ಆಟವನ್ನು ನೋಡುವುದು ನನ್ನನ್ನು ಬ್ಯಾಸ್ಕೆಟ್‌ಬಾಲ್ ಆಟಗಾರನಾಗಲು ಪ್ರೇರೇಪಿಸಿತು. ಕಳೆದ ಒಂದು ವರ್ಷದಿಂದ ನಾನು ಪ್ರತಿದಿನ ಅಭ್ಯಾಸ ಮಾಡುತ್ತಿದ್ದೇನೆ ಮತ್ತು ಈ ಪ್ರಯಾಣದಲ್ಲಿ ನನ್ನ ತಂದೆ ನನ್ನ ದೊಡ್ಡ ಬೆಂಬಲಿಗರಾಗಿದ್ದಾರೆ. ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲು ಮತ್ತು ನನ್ನ ದೇಶವನ್ನು ಹೆಮ್ಮೆಪಡುವಂತೆ ಮಾಡಲು ನಾನು ಬಯಸುತ್ತೇನೆ ಎಂದು ಬ್ಯಾಸ್ಕೆಟ್‌ಬಾಲ್ ಆಟಗಾರ, ಡಿಪಿಎಸ್ (ಪೂರ್ವ) ಪ್ರಸನ್ನ ಕುಮಾರ್ ಹೇಳಿದರು.

U-14 ಬ್ಯಾಸ್ಕೆಟ್‌ಬಾಲ್‌ನ ತೀವ್ರ ಮುಖಾಮುಖಿಯಲ್ಲಿ, ಬೇಗೂರಿನ ಕ್ಯಾಂಡರ್ ಇಂಟರ್‌ನ್ಯಾಶನಲ್ ಸ್ಕೂಲ್, ವೈಟ್‌ಫೀಲ್ಡ್‌ನ ಗ್ಲೋಬಲ್ ಇಂಡಿಯನ್ ಇಂಟರ್‌ನ್ಯಾಶನಲ್ ಸ್ಕೂಲ್ ವಿರುದ್ಧ 16-0 ಅಂಕಗಳನ್ನು ಗಳಿಸಿ ಗೆಲುವು ಸಾಧಿಸಿತು. ಸ್ಕೇಟಿಂಗ್ನ 200ಮೀ, 500ಮೀ ಮತ್ತು 1000ಮೀ (ಇನ್‌ಲೈನ್ ಸ್ಕೇಟಿಂಗ್) ನಲ್ಲಿ U-7 ರಿಂದ U-17 ವಿಭಾಗದ ಫೈನಲ್‌ ಗಮನ ಸೆಳೆದವು

ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ U-11 ರಿಂದ U-17 ವಿಭಾಗಗಳಲ್ಲಿ ಹುಡುಗಿಯರು ತಮ್ಮ ಚುರುಕುತನ ಮತ್ತು ಸಮರ್ಪಣಾ ಮನೋಭಾವವನ್ನು ಪ್ರದರ್ಶಿಸಿದರು. ವಾಲಿಬಾಲ್ ಅಂಕಣದಲ್ಲಿ, U-14 ರಿಂದ U-18 ವಿಭಾಗಗಳ ಫೈನಲ್‌ ಕದನ ರೋಮಾಂಚನವಾಗಿದ್ದವು.

6 ಈಜು, ಟೇಬಲ್ ಟೆನಿಸ್ ಮತ್ತು ಕರಾಟೆ, ಟೆನಿಸ್ ಮತ್ತು ವಾಲಿಬಾಲ್‌ನ ಫೈನಲ್‌ಗಳು ನಡೆಯಲಿವೆ.

PREV

Recommended Stories

ವಿಶ್ವ ಗೆದ್ದ ಭಾರತದ ಮಹಿಳಾ ಕ್ರಿಕೆಟಿಗರಿಗೆ ಭಾರಿ ಬಹುಮಾನ - ಬಿಸಿಸಿಐನಿಂದ 51 ಕೋಟಿ
ಭಾರತದ ದಿಟ್ಟೆಯರ ಹಿಂದಿದೆ ರೋಚಕ ಕಹಾನಿ