ಕನ್ನಡಪ್ರಭ ವಾರ್ತೆ ಬೆಂಗಳೂರು
ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷ್ಯನ್ ಗೇಮ್ಸ್, ಪ್ಯಾರಾ ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಹುದ್ದೆ ನೀಡುವುದಾಗಿ ಕಳೆದ ವರ್ಷ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಇತ್ತೀಚೆಗಷ್ಟೇ ಕ್ರೀಡಾ ಇಲಾಖೆಯು ವಿವಿಧ ಸಂಸ್ಥೆಗಳಿಗೆ ಪತ್ರ ಬರೆದು ಕಳೆದ 8 ಆವೃತ್ತಿಗಳ ಕ್ರೀಡಾಕೂಟಗಳಲ್ಲಿ ಪದಕ ಸಾಧನೆ ಮಾಡಿದ ಅರ್ಹರ ಹೆಸರು ಸೂಚಿಸುವಂತೆ ಕೋರಿದೆ. ಶೀಘ್ರದಲ್ಲೇ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್ ಸಂಸ್ಥೆಗಳು ಸಾಧಕರ ಹೆಸರನ್ನು ಕ್ರೀಡಾ ಇಲಾಖೆಗೆ ಸಲ್ಲಿಸುವ ನಿರೀಕ್ಷೆಯಿದೆ.
ಪ್ಯಾರಾ ಅಥ್ಲೀಟ್‌ಗಳಾದ ಎಚ್.ಎನ್.ಗಿರೀಶ್, ರಕ್ಷಿತಾ ರಾಜು, ರಾಧಾ ವೆಂಕಟೇಶ್, ಶಕೀನಾ ಖಾತೂನ್ ಸೇರಿದಂತೆ ಹಲವರಿಗೆ ಹುದ್ದೆ ಸಿಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕೋಟ್ಸ್ಜಾಗತಿಕ ಮಟ್ಟದ ಕ್ರೀಡಾಕೂಟಗಳ ಪದಕ ಸಾಧನೆ ಮಾಡಿದವರ ಹೆಸರುಗಳನ್ನು ಸರ್ಕಾರಿ ಹುದ್ದೆಗೆ ಸೂಚಿಸುವಂತೆ ಕ್ರೀಡಾ ಇಲಾಖೆ ಪತ್ರ ನೀಡಿದ ಬಗ್ಗೆ ನನೆ ಗೊತ್ತಿಲ್ಲ. ಪತ್ರ ಇನ್ನೂ ನಮ್ಮ ಕೈ ಸೇರಿಲ್ಲ. ಪತ್ರ ಬಂದ ಬಳಿಕ ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ.
ಸಾಧಕರ ಹೆಸರನ್ನು ಸೂಚಿಸುವಂತೆ ನಮಗೆ ಕ್ರೀಡಾ ಇಲಾಖೆಯಿಂದ ಪತ್ರ ಬಂದಿದೆ. ಆದರೆ ಸಾಧಕರ ಹೆಸರು ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ ರಾಷ್ಟ್ರೀಯ ಸಮಿತಿ ನಮಗೆ ಸೂಚನೆ ನೀಡಬೇಕು. ಆ ಬಳಿಕ ಪರಿಶೀಲನೆ ನಡೆಸಿ, ಹೆಸರು ಸೂಚಿಸುತ್ತೇವೆ.