ಟಿ20 ವಿಶ್ವಕಪ್‌: ಲಂಕಾಕ್ಕೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನೇಪಾಳ ಚಾಲೆಂಜ್‌

KannadaprabhaNewsNetwork |  
Published : Jun 12, 2024, 12:35 AM IST
ಡು ಆರ್‌ ಡೈ ಪಂದ್ಯದಲ್ಲಿ ಶ್ರೀಲಂಕಾಕ್ಕೆ ಎದುರಾಗಲಿದೆ ನೇಪಾಳ ಸವಾಲು.  | Kannada Prabha

ಸಾರಾಂಶ

ಮಾಜಿ ಚಾಂಪಿಯನ್‌ ಶ್ರೀಲಂಕಾಗೆ ಶಾಕ್‌ ನೀಡುತ್ತಾ ನೇಪಾಳ? ಟಿ20 ವಿಶ್ವಕಪ್‌ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಲಂಕಾಕ್ಕೆ ಎದುರಾಗಲಿದೆ ನೇಪಾಳ ಸವಾಲು.

ಲಾಡರ್‌ಹಿಲ್‌ (ಫ್ಲೋರಿಡಾ): ಮೊದಲೆರಡು ಪಂದ್ಯಗಳಲ್ಲಿ ದ.ಆಫ್ರಿಕಾ ಹಾಗೂ ಶ್ರೀಲಂಕಾ ವಿರುದ್ಧ ಸೋಲುಂಡು ಸಂಕಷ್ಟಕ್ಕೆ ಸಿಲುಕಿರುವ ಮಾಜಿ ಚಾಂಪಿಯನ್‌ ಶ್ರೀಲಂಕಾಕ್ಕೆ ಬುಧವಾರ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನೇಪಾಳ ಸವಾಲು ಎದುರಾಗಲಿದೆ. ಲಂಕಾಕ್ಕೆ ನೇಪಾಳ ಹಾಗೂ ನೆದರ್‌ಲೆಂಡ್ಸ್‌ ವಿರುದ್ಧ ಪಂದ್ಯಗಳು ಬಾಕಿ ಇದ್ದು, ಈ ಎರಡೂ ಪಂದ್ಯಗಳನ್ನು ಗೆದ್ದರೂ ತಂಡದ ಸೂಪರ್‌-8 ಹಾದಿ ಸುಗಮಗೊಳ್ಳುವುದಿಲ್ಲ. ಈ ಎರಡು ತಂಡಗಳ ಪೈಕಿ ಒಂದು ತಂಡ ಬಾಂಗ್ಲಾದೇಶವನ್ನು ಸೋಲಿಸಲಿ ಎಂದು ಲಂಕನ್ನರು ಪ್ರಾರ್ಥಿಸುತ್ತಿದ್ದಾರೆ. ಇನ್ನು ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯೂ ಇದ್ದು, ಪಂದ್ಯ ರದ್ದಾರೆ ಲಂಕಾ ಗುಂಪು ಹಂತದಲ್ಲೇ ಹೊರಬೀಳಲಿದೆ.

ನೇಪಾಳ ಟಿ20 ಕ್ರಿಕೆಟ್‌ನಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದ್ದು, ದೊಡ್ಡ ತಂಡಗಳನ್ನು ಎದುರಿಸಿದ ಅನುಭವ ಹೊಂದಿದೆ. ಈ ವಿಶ್ವಕಪ್‌ನಲ್ಲಿ ಮೊದಲ ಪಂದ್ಯವನ್ನು ನೆದರ್‌ಲೆಂಡ್ಸ್‌ ವಿರುದ್ಧ ಸೋತಿದ್ದ ನೇಪಾಳ, ಮೊದಲ ಜಯಕ್ಕಾಗಿ ಕಾತರಿಸುತ್ತಿದೆ.

ಪಂದ್ಯ ಆರಂಭ: ಬೆಳಗ್ಗೆ 5ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಆರ್‌ಸಿಬಿ vs ಸಿಎಸ್‌ಕೆ ಟಿಕೆಟ್‌ ಒಂದೇ ನಿಮಿಷದಲ್ಲಿ ಸೋಲ್ಡೌಟ್‌
ರಾಯಲ್ಸ್‌ ಆರ್ಭಟಕ್ಕೆ ತತ್ತರಿಸಿದ ಚೆನ್ನೈ ಕಿಂಗ್ಸ್‌