ಟಿ20 ವಿಶ್ವಕಪ್‌ ವಿಜೇತ ಭಾರತಕ್ಕೆ ಬಿಸಿಸಿಐ ₹ 131 ಕೋಟಿ ಬಂಪರ್‌!

Published : Mar 11, 2026, 01:18 PM IST
Team India World Cup Trophy

ಸಾರಾಂಶ

3ನೇ ಬಾರಿ ಐಸಿಸಿ ಟಿ20 ವಿಶ್ವಕಪ್‌ ಗೆದ್ದು ದಾಖಲೆ ಬರೆದ ಭಾರತ ತಂಡಕ್ಕೆ ಬಿಸಿಸಿಐ ಬರೋಬ್ಬರಿ ₹131 ಕೋಟಿ ನಗದು ಬಹುಮಾನ ಘೋಷಿಸಿದೆ. 2024ರಲ್ಲಿ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ವಿಶ್ವಕಪ್‌ ಗೆದ್ದಿದ್ದ ತಂಡಕ್ಕೆ ಮಂಡಳಿಯಿಂದ ₹125 ಕೋಟಿ ನಗದು ಬಹುಮಾನ ಲಭಿಸಿತ್ತು.

ನವದೆಹಲಿ: 3ನೇ ಬಾರಿ ಐಸಿಸಿ ಟಿ20 ವಿಶ್ವಕಪ್‌ ಗೆದ್ದು ದಾಖಲೆ ಬರೆದ ಭಾರತ ತಂಡಕ್ಕೆ ಬಿಸಿಸಿಐ ಬರೋಬ್ಬರಿ ₹131 ಕೋಟಿ ನಗದು ಬಹುಮಾನ ಘೋಷಿಸಿದೆ. 2024ರಲ್ಲಿ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ವಿಶ್ವಕಪ್‌ ಗೆದ್ದಿದ್ದ ತಂಡಕ್ಕೆ ಮಂಡಳಿಯಿಂದ ₹125 ಕೋಟಿ ನಗದು ಬಹುಮಾನ ಲಭಿಸಿತ್ತು. 

ಈ ಬಾರಿ ಮೊತ್ತದಲ್ಲಿ ₹6 ಕೋಟಿ ಹೆಚ್ಚಳವಾಗಿದೆ.‘2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ₹131 ಕೋಟಿ ನಗದು ಬಹುಮಾನ ಘೋಷಿಸಿದೆ. ಐತಿಹಾಸಿಕ ಸಾಧನೆ ಮಾಡಿದ ಭಾರತ ತಂಡದ ಆಟಗಾರರು, ಕೋಚ್‌, ಸಹಾಯಕ ಸಿಬ್ಬಂದಿ ಹಾಗೂ ಆಯ್ಕೆ ಸಮಿತಿ ಸದಸ್ಯರಿಗೆ ಮಂಡಳಿ ವತಿಯಿಂದ ಅಭಿನಂದನೆಗಳು’ ಎಂದು ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

2024ರಲ್ಲಿ ಟಿ20 ವಿಶ್ವಕಪ್‌ ಗೆದ್ದಾಗ ಮುಂಬೈನಲ್ಲಿ ಬೃಹತ್‌ ವಿಜಯಯಾತ್ರೆ ಕೈಗೊಳ್ಳಲಾಗಿತ್ತು. ಈ ಬಾರಿ ಅದೇ ರೀತಿ ಸಂಭ್ರಮಾಚರಣೆ ನಡೆಯಲಿದೆಯೇ ಎಂಬುದರ ಬಗ್ಗೆ ಬಿಸಿಸಿಐ ಇನ್ನೂ ಮಾಹಿತಿ ನೀಡಿಲ್ಲ.

ತಲಾ ₹6 ಕೋಟಿ:

ವರದಿಗಳ ಪ್ರಕಾರ ₹131 ಕೋಟಿ ಮೊತ್ತದಲ್ಲಿ ಪ್ರತಿ ಆಟಗಾರರಿಗೆ ತಲಾ ₹6 ಕೋಟಿ ಸಿಗಲಿದೆ. ಅಂದರೆ 15 ಆಟಗಾರರಿಗೆ ಒಟ್ಟು ₹90 ಕೋಟಿ ಸಿಗಲಿದೆ. ಉಳಿದ 41 ಕೋಟಿ ರು. ಕೋಚ್‌ಗಳು, ಸಹಾಯಕ ಸಿಬ್ಬಂದಿ, ಆಯ್ಕೆ ಸಮಿತಿಗೆ ಹಂಚಲಾಗುವುದು ಎಂದು ತಿಳಿದುಬಂದಿದೆ.

1 ವರ್ಷದಲ್ಲಿ ಐಸಿಸಿ ಟ್ರೋಫಿ ಗೆದ್ದ 5 ತಂಡಗಳಿಗೆ ಸನ್ಮಾನ

ಮಾ.15ರಂದು ನವದೆಹಲಿಯಲ್ಲಿ ಕಾರ್ಯಕ್ರಮ

ಕಳೆದ ಒಂದು ವರ್ಷದ ಅವಧಿಯಲ್ಲಿ ಐಸಿಸಿ ಟ್ರೋಫಿ ಗೆದ್ದ ಭಾರತ 5 ತಂಡಗಳಿಗೆ ಸನ್ಮಾನ ಮಾಡಲು ಬಿಸಿಸಿಐ ನಿರ್ಧರಿಸಿದೆ. ಮಾ.15ರಂದು ನವದೆಹಲಿಯಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಕ್ರಿಕೆಟಿಗರನ್ನು ಸನ್ಮಾನಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಹೇಳಿದ್ದಾರೆ.

‘ಮಾ.15ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಳೆದ 1 ವರ್ಷದ ಅವಧಿಯಲ್ಲಿ ಐಸಿಸಿ ಟ್ರೋಫಿ ಗೆದ್ದ ಭಾರತದ 5 ತಂಡಗಳನ್ನೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ. ಭಾರತ 2025 ಫೆಬ್ರವರಿಯಿಂದ ಅಂಡರ್‌-19 ಮಹಿಳಾ ವಿಶ್ವಕಪ್‌, ಐಸಿಸಿ ಚಾಂಪಿಯನ್ಸ್‌ ಟ್ರೋಫಿ, ಅಂಡರ್‌-19 ಪುರುಷರ ವಿಶ್ವಕಪ್‌, ಮಹಿಳಾ ಏಕದಿನ ವಿಶ್ವಕಪ್‌ ಹಾಗೂ ಪುರುಷರ ಟಿ20 ವಿಶ್ವಕಪ್‌ ಗೆದ್ದಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಕ್ರಿಕೆಟ್‌ ‘ವಿಶ್ವ’ ಯುದ್ಧ ಗೆಲ್ಲೋರ್‍ಯಾರು..?
ಫೈನಲ್‌ ಟಿಕೆಟ್‌ಗಾಗಿ ಇಂದು ಕಿವೀಸ್‌ vs ದ.ಆಫ್ರಿಕಾ