ನವದೆಹಲಿ: 2024ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡ ಇದೇ ವಾರದಿಂದ 2026ರ ಟಿ20 ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಲಿದೆ. ಹಿರಿಯ ಆಟಗಾರರಾದ ರೋಹಿತ್, ಕೊಹ್ಲಿ, ಜಡೇಜಾ ನಿವೃತ್ತಿಯಿಂದಾಗಿ, ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮುಂದಿನ ಟಿ20 ವಿಶ್ವಕಪ್‌ಗೆ ಹೊಸ ತಂಡ ಕಟ್ಟುವ ಸವಾಲು ಎದುರಾಗಿದ್ದು, ಸೂಕ್ತ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಸಿದ್ಧಗೊಳಿಸುವ ಕೆಲಸ ಆಗಬೇಕಿದೆ.
2024-26ರ ವರೆಗಿನ ವೇಳಾಪಟ್ಟಿ (ಟಿ20)
* ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಸರಣಿ (ತವರಿನಾಚೆ) - ಜುಲೈ 2024* ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಸರಣಿ (ತವರಿನಾಚೆ) - ಜುಲೈ 2024* ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಸರಣಿ (ತವರಿನಲ್ಲಿ)- ಸೆಪ್ಟೆಂಬರ್ 2024* ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಸರಣಿ (ತವರಿನಲ್ಲಿ) - ಜನವರಿ-ಫೆಬ್ರವರಿ 2025
* ದ.ಆಫ್ರಿಕಾ ವಿರುದ್ಧ 5 ಪಂದ್ಯಗಳ ಸರಣಿ (ತವರಿನಲ್ಲಿ) - ನವೆಂಬರ್ 2025* ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಸರಣಿ (ತವರಿನಲ್ಲಿ) - ಜನವರಿ 2026