ಬೆಂಗಳೂರು,: ವಿಶ್ವ ಟೆನಿಸ್ನ ಪ್ರಮುಖ ಆಟಗಾರರನ್ನು ಬೆಂಗಳೂರಿಗೆ ಕರೆತರುತ್ತಿರುವ ವರ್ಲ್ಡ್ ಟೆನಿಸ್ ಲೀಗ್ (ಡಬ್ಲ್ಯುಟಿಎಲ್) ತನ್ನ ಐದನೇ ಆವೃತ್ತಿಗೆ ಸಜ್ಜಾಗಿದೆ. ಮಾಜಿ ವಿಶ್ವ ನಂ. 3 ಆಟಗಾರ್ತಿ ಎಲಿನಾ ಸ್ವಿಟೋಲಿನಾ, ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಬೆಲಿಂಡಾ ಬೆನ್ಸಿಕ್, ಮಾಜಿ ವಿಶ್ವ ನಂ. 1 ಆಟಗಾರ್ತಿ ಕರೋಲಿನಾ ಪ್ಲಿಸ್ಕೋವಾ, ವಿಂಬಲ್ಡನ್ ಸಿಂಗಲ್ಸ್ ಫೈನಲಿಸ್ಟ್ ನಿಕ್ ಕಿರ್ಗಿಯೋಸ್ ಹಾಗೂ ಎರಡು ಬಾರಿ ವಿಂಬಲ್ಡನ್ ಪುರುಷರ ಡಬಲ್ಸ್ ಚಾಂಪಿಯನ್ ಆಗಿರುವ ಹರಿ ಹೆಲಿಯೊವಾರಾ ಸೇರಿದಂತೆ ಒಟ್ಟು 16 ಅಂತರರಾಷ್ಟ್ರೀಯ ಮತ್ತು ಭಾರತೀಯ ಆಟಗಾರರು ಈ ಬಾರಿಯ ಲೀಗ್ನಲ್ಲಿ ಭಾಗವಹಿಸಲಿದ್ದಾರೆ.ಐಕಾನಿಕ್ ಸ್ಪೋರ್ಟ್ಸ್ ಆ್ಯಂಡ್ ಈವೆಂಟ್ಸ್ ನಿರ್ವಹಣೆ ಮತ್ತು ಆಯೋಜನೆಯ ಜವಾಬ್ದಾರಿ ಹೊಂದಿರುವ ಈ ಲೀಗ್ ಡಿಸೆಂಬರ್ 17ರಿಂದ 20ರವರೆಗೆ ಬೆಂಗಳೂರಿನ ಕೆಎಸ್ಎಲ್ಟಿಎಯ ಎಸ್.ಎಂ. ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.ಐದನೇ ಆವೃತ್ತಿಯಲ್ಲಿ ಎಕ್ರಿಕ್ಸ್ ಈಗಲ್ಸ್, ಗೇಮ್ ಚೇಂಜರ್ಸ್ ಫಾಲ್ಕನ್ಸ್, ಆಸಿ ಮ್ಯಾವೆರಿಕ್ಸ್ ಕೈಟ್ಸ್ ಮತ್ತು ವಿ.ಬಿ. ರಿಯಾಲ್ಟಿ ಹಾಕ್ಸ್ ಸೇರಿದಂತೆ ನಾಲ್ಕು ತಂಡಗಳು ಸ್ಪರ್ಧಿಸಲಿವೆ. ಪ್ರತಿ ತಂಡದಲ್ಲಿ ಇಬ್ಬರು ಅಂತರರಾಷ್ಟ್ರೀಯ ಆಟಗಾರರು ಹಾಗೂ ಇಬ್ಬರು ಭಾರತೀಯ ಆಟಗಾರರು ಇರಲಿದ್ದು, ಒಟ್ಟು ಎಂಟು ಅಂತರರಾಷ್ಟ್ರೀಯ ಮತ್ತು ಎಂಟು ಭಾರತೀಯ ಆಟಗಾರರು ಕಣಕ್ಕಿಳಿಯಲಿದ್ದಾರೆ. ಅನುಭವಿ ಆಟಗಾರರು ಮತ್ತು ಯುವ ಪ್ರತಿಭೆಗಳನ್ನೊಳಗೊಂಡ ಈ ತಂಡಗಳು ನಾಲ್ಕು ದಿನಗಳ ಕಾಲ ಅಭಿಮಾನಿಗಳಿಗೆ ಉನ್ನತ ಮಟ್ಟದ ಟೆನಿಸ್ ಪಂದ್ಯಗಳ ರಸದೌತಣ ನೀಡಲಿವೆ.ಮಹಿಳಾ ವಿಭಾಗದಲ್ಲಿ ಉಕ್ರೇನ್ನ ಎಲಿನಾ ಸ್ವಿಟೋಲಿನಾ ಪ್ರಮುಖ ಆಕರ್ಷಣೆಯಾಗಿದ್ದಾರೆ. ಡಬ್ಲ್ಯುಟಿಎ ಸಿಂಗಲ್ಸ್ ವಿಭಾಗದಲ್ಲಿ 20 ಪ್ರಶಸ್ತಿಗಳನ್ನು ಗೆದ್ದಿರುವ ಅವರು, 2018ರ ಡಬ್ಲ್ಯುಟಿಎ ಫೈನಲ್ಸ್ ಚಾಂಪಿಯನ್ ಕೂಡ ಆಗಿದ್ದಾರೆ. ಈ ವರ್ಷದ ಆಸ್ಟ್ರೇಲಿಯನ್ ಓಪನ್ನ ಸೆಮಿಫೈನಲ್ ಹಂತಕ್ಕೂ ಅವರು ತಲುಪಿದ್ದರು.ಸ್ವಿಟ್ಜರ್ಲೆಂಡ್ನ ಬೆಲಿಂಡಾ ಬೆನ್ಸಿಕ್ ಕೂಡ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಟೋಕಿಯೊದಲ್ಲಿ ನಡೆದ 2020ರ ಒಲಿಂಪಿಕ್ಸ್ನಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಅವರು, 2025ರ ವಿಂಬಲ್ಡನ್ ಟೂರ್ನಿಯ ಸೆಮಿಫೈನಲ್ ಹಂತಕ್ಕೂ ತಲುಪಿದ್ದರು.ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ಕೂಡ ಈ ಬಾರಿ ಲೀಗ್ನಲ್ಲಿ ಆಡಲಿದ್ದಾರೆ. ಮಾಜಿ ವಿಶ್ವ ನಂ. 1 ಆಟಗಾರ್ತಿಯಾಗಿರುವ ಅವರು, 2016ರ ಯುಎಸ್ ಓಪನ್ ಮತ್ತು 2021ರ ವಿಂಬಲ್ಡನ್ ಟೂರ್ನಿಗಳಲ್ಲಿ ಫೈನಲ್ ತಲುಪಿದ್ದರು.ಸ್ಪೇನ್ನ ಪೌಲಾ ಬಡೋಸಾ ಕೂಡ ಮಹಿಳಾ ವಿಭಾಗದ ಪ್ರಮುಖ ಆಟಗಾರ್ತಿಯಾಗಿದ್ದಾರೆ. ಮಾಜಿ ವಿಶ್ವ ನಂ. 2 ಆಟಗಾರ್ತಿಯಾಗಿರುವ ಅವರು, 2021ರ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. ಕಳೆದ ಆವೃತ್ತಿಯಲ್ಲೂ ಭಾಗವಹಿಸಿದ್ದ ಅವರು, ಈ ಬಾರಿಯೂ ಲೀಗ್ಗೆ ಮರಳಿದ್ದಾರೆ.ಪುರುಷರ ವಿಭಾಗದಲ್ಲೂ ಹಲವು ಪ್ರಮುಖ ಆಟಗಾರರು ಕಣಕ್ಕಿಳಿಯಲಿದ್ದಾರೆ. ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ 2022ರ ವಿಂಬಲ್ಡನ್ ಸಿಂಗಲ್ಸ್ ಟೂರ್ನಿಯ ಫೈನಲಿಸ್ಟ್ ಆಗಿದ್ದು, ಅದೇ ವರ್ಷ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿಯನ್ನೂ ಗೆದ್ದಿದ್ದಾರೆ.ಕಜಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಕೂಡ ಕಣಕ್ಕಿಳಿಯಲಿದ್ದು, ಅವರು ಒಂಬತ್ತು ಎಟಿಪಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2026ರ ಜನವರಿಯಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ 10ನೇ ಸ್ಥಾನಕ್ಕೇರಿದ್ದರು.ಬೆಲ್ಜಿಯಂನ ಜಿಜೌ ಬರ್ಗ್ಸ್ ಈ ವರ್ಷ ಈಸ್ಟ್ಬೋರ್ನ್ನಲ್ಲಿ ತಮ್ಮ ಚೊಚ್ಚಲ ಎಟಿಪಿ ಪ್ರಶಸ್ತಿ ಗೆದ್ದಿದ್ದಾರೆ. ಫಿನ್ಲ್ಯಾಂಡ್ನ ಹರಿ ಹೆಲಿಯೊವಾರಾ 2024 ಮತ್ತು 2026ರಲ್ಲಿ ವಿಂಬಲ್ಡನ್ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದು, ಅಂತರರಾಷ್ಟ್ರೀಯ ಆಟಗಾರರ ತಂಡಕ್ಕೆ ಮತ್ತಷ್ಟು ಬಲ ತುಂಬಲಿದ್ದಾರೆ.ಭಾರತದ ಆಟಗಾರರ ತಂಡದಲ್ಲಿ ಅನುಭವಿ ಆಟಗಾರರು ಹಾಗೂ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮಣ್ಣಿನ ಅಂಕಣದಲ್ಲಿ ನಡೆದ ಎಟಿಪಿ ಮಾಸ್ಟರ್ಸ್ 1000 ಟೂರ್ನಿಯಲ್ಲಿ ಪಂದ್ಯ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸುಮಿತ್ ನಾಗಲ್ ಮತ್ತೆ ಲೀಗ್ಗೆ ಮರಳಿದ್ದಾರೆ.ಭಾರತದ ಪ್ರಮುಖ ಡಬಲ್ಸ್ ಆಟಗಾರ ಯೂಕಿ ಭಾಂಬ್ರಿ ಕೂಡ ತಂಡದಲ್ಲಿದ್ದು, ತಮ್ಮ ವೃತ್ತಿಜೀವನದ ಅತ್ಯುತ್ತಮ 18ನೇ ವಿಶ್ವ ರ್ಯಾಂಕಿಂಗ್ ಸಾಧಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಬೆಂಗಳೂರಿನಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಡೇವಿಸ್ ಕಪ್ ಪಂದ್ಯದಲ್ಲಿ ಮೂರು ಪಂದ್ಯಗಳನ್ನು ಗೆದ್ದು ಗಮನ ಸೆಳೆದಿದ್ದ ದಕ್ಷಿಣೇಶ್ವರ್ ಸುರೇಶ್ ಕೂಡ ಮತ್ತೆ ಕಣಕ್ಕಿಳಿಯಲಿದ್ದಾರೆ. ಮಾಜಿ ಎಟಿಪಿ ಸಿಂಗಲ್ಸ್ ಫೈನಲಿಸ್ಟ್ ಹಾಗೂ ಎರಡು ಬಾರಿ ಎಟಿಪಿ 250 ಡಬಲ್ಸ್ ಪ್ರಶಸ್ತಿ ಗೆದ್ದಿರುವ ರಾಮ್ಕುಮಾರ್ ರಾಮನಾಥನ್ ಭಾರತದ ಪುರುಷರ ತಂಡದ ಮತ್ತೊಬ್ಬ ಪ್ರಮುಖ ಆಟಗಾರರಾಗಿದ್ದಾರೆ.ಭಾರತದ ಮಹಿಳಾ ಆಟಗಾರ್ತಿಯರ ತಂಡದಲ್ಲಿ 17 ವರ್ಷದ ಮಾಯಾ ರಾಜೇಶ್ವರನ್ ರೇವತಿ ಮತ್ತು ಶ್ರಿವಳ್ಳಿ ರಶ್ಮಿಕಾ ಭಾಮಿದಿಪಾಟಿ ಮತ್ತೆ ಕಣಕ್ಕಿಳಿಯಲಿದ್ದಾರೆ. ಕಳೆದ ಆವೃತ್ತಿಯಲ್ಲೂ ಇವರಿಬ್ಬರು ಲೀಗ್ನಲ್ಲಿ ಭಾಗವಹಿಸಿದ್ದರು. ಭಾರತದ ಯುವ ಟೆನಿಸ್ ಪ್ರತಿಭೆಗಳಲ್ಲಿ ಒಬ್ಬರಾಗಿರುವ ಮಾಯಾ, ಸಾನಿಯಾ ಮಿರ್ಜಾ ಬಳಿಕ ಡಬ್ಲ್ಯುಟಿಎ ಟೂರ್ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ಸಾಧನೆ ಮಾಡಿದ್ದಾರೆ.ಇವರೊಂದಿಗೆ, 2023ರ ಏಷ್ಯನ್ ಗೇಮ್ಸ್ನಲ್ಲಿ ರೋಹನ್ ಬೋಪಣ್ಣ ಅವರೊಂದಿಗೆ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ರುತುಜಾ ಭೋಸಲೆ ಮತ್ತು…