ಟಿ20 ವಿಶ್ವಕಪ್‌ನಲ್ಲಿ ಉಗಾಂಡಗೆ ಮೊದಲ ಜಯದ ಸಂಭ್ರಮ!

KannadaprabhaNewsNetwork |  
Published : Jun 07, 2024, 12:15 AM ISTUpdated : Jun 07, 2024, 04:27 AM IST
ಪಪುವಾ ನ್ಯೂ ಗಿನಿ ವಿರುದ್ಧ ಗೆಲುವಿನ ಸಂಭ್ರಮದಲ್ಲಿ ಉಗಾಂಡ ತಂಡದ ಆಟಗಾರರು.  | Kannada Prabha

ಸಾರಾಂಶ

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಉಗಾಂಡ ತಂಡಕ್ಕೆ ಮೊದಲ ಗೆಲುವು. ಪಪುವಾ ನ್ಯೂ ಗಿನಿ ವಿರುದ್ಧ ರೋಚಕ ಗೆಲುವು ಸಾಧಿಸಿದ ಉಗಾಂಡ. ಸಂಭ್ರಮದ ಅಲೆಯಲ್ಲಿ ತೇಲಿದ ಆಫ್ರಿಕನ್‌ ರಾಷ್ಟ್ರದ ಆಟಗಾರರು.

ಪ್ರಾವಿಡೆನ್ಸ್‌ (ಗಯಾನ): ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಉಗಾಂಡ ಚೊಚ್ಚಲ ಗೆಲುವು ದಾಖಲಿಸಿದೆ. ಗುರುವಾರ ಇಲ್ಲಿ ನಡೆದ ಪಪುವಾ ನ್ಯೂ ಗಿನಿ ವಿರುದ್ಧದ ಪಂದ್ಯದಲ್ಲಿ ಉಗಾಂಡ 3 ವಿಕೆಟ್‌ಗಳ ಜಯ ಸಾಧಿಸಿತು. ಮೊದಲು ಪಪುವಾ ನ್ಯೂ ಗಿನಿಯನ್ನು 19.1 ಓವರಲ್ಲಿ 77 ರನ್‌ಗೆ ಆಲೌಟ್‌ ಮಾಡಿದ ಉಗಾಂಡ, 18.2 ಓವರಲ್ಲಿ 7 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. 26ಕ್ಕೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರಿಯಾಜತ್‌ ಅಲಿ (33), ಜುಮಾ ಮಿಯಾಗಿ (13) ಆಸರೆಯಾದರು. ಇವರಿಬ್ಬರ ಹೋರಾಟ ತಂಡವನ್ನು ಜಯದ ದಡ ಸೇರಿಸಿತು. ಸ್ಕೋರ್‌: ಪಪುವಾ ನ್ಯೂ ಗಿನಿ 19.1 ಓವರಲ್ಲಿ 77/10 (ಹಿರಿ ಹಿರಿ 15, ಫ್ರಾಂಕ್‌ 2-4), ಉಗಾಂಡ 18.2 ಓವರಲ್ಲಿ 78/7 (ರಿಯಾಜತ್‌ 33, ಅಲೈ ನೊವ 2/16)ಫ್ರಾಂಕ್‌ ಹೊಸ ದಾಖಲೆ

ಟಿ20 ವಿಶ್ವಕಪ್‌ನಲ್ಲಿ ಶ್ರೇಷ್ಠ ಬೌಲಿಂಗ್‌ ಸ್ಪೆಲ್‌ ದಾಖಲೆಯನ್ನು ಉಗಾಂಡದ ಫ್ರಾಂಕ್‌ ಎನ್‌ಸುಬುಗಾ ಬರೆದಿದ್ದಾರೆ. ಪಪುವಾ ನ್ಯೂ ಗಿನಿ ವಿರುದ್ಧ 4 ಓವರಲ್ಲಿ 2 ಮೇಡನ್‌ ಸಹಿತ ಕೇವಲ 4 ರನ್‌ ನೀಡಿ 2 ವಿಕೆಟ್‌ ಕಿತ್ತ ಫ್ರಾಂಕ್‌, ಇದೇ ವಿಶ್ವಕಪ್‌ನಲ್ಲಿ ಲಂಕಾ ವಿರುದ್ಧ 4 ಓವರಲ್ಲಿ 7 ರನ್‌ ನೀಡಿದ್ದ ಆ್ಯನ್ರಿಕ್‌ ನೋಕಿಯ ಅವರ ದಾಖಲೆಯನ್ನು ಮುರಿದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಟಿ20 ವಿಶ್ವಕಪ್‌ ಮುನ್ನ ಭಾರತಕ್ಕೆ ಕೊನೆ ಚಾಲೆಂಜ್‌
ಭಾರತಕ್ಕೆ ಬರದಿದ್ದರೆ ವಿಶ್ವಕಪ್‌ನಿಂದ ಹೊರಕ್ಕೆ : ಬಾಂಗ್ಲಾಗೆ ಐಸಿಸಿ ಎಚ್ಚರಿಕೆ