ಪ್ರೊ ಕಬಡ್ಡಿ: ಸೋಲಿನೊಂದಿಗೆ ಬುಲ್ಸ್‌ ಅಭಿಯಾನ ಕೊನೆ

KannadaprabhaNewsNetwork |  
Published : Dec 25, 2024, 12:47 AM IST
ಕೊನೆಯ ಪಂದ್ಯದಲ್ಲೂ ನಿರಾಸೆ ಮೂಡಿಸಿದ ಬೆಂಗಳೂರು ಬುಲ್ಸ್‌ನ ರೈಡರ್‌ಗಳು.  | Kannada Prabha

ಸಾರಾಂಶ

ಬೆಂಗಳೂರು ಬುಲ್ಸ್‌ಗೆ ಕೊನೆ ಪಂದ್ಯದಲ್ಲೂ ಸೋಲೇ ಗತಿ. 22 ಪಂದ್ಯಗಳಲ್ಲಿ ಒಟ್ಟು 19 ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದ ಬುಲ್ಸ್‌.

ಪುಣೆ: 11ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ ಲೀಗ್‌ ಹಂತ ಮುಕ್ತಾಯಗೊಂಡಿದೆ. ಬೆಂಗಳೂರು ಬುಲ್ಸ್‌ ಸೋಲಿನೊಂದಿಗೆ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ. ಮಂಗಳವಾರ ನಡೆದ 22ನೇ ಹಾಗೂ ಕೊನೆಯ ಪಂದ್ಯದಲ್ಲಿ ಬುಲ್ಸ್‌ 30-44 ಅಂಕಗಳಲ್ಲಿ ಯು.ಪಿ.ಯೋಧಾಸ್‌ಗೆ ಶರಣಾಯಿತು. 19 ಸೋಲು, 2 ಜಯ, 1 ಟೈನೊಂದಿಗೆ ಬುಲ್ಸ್‌ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಿತು.

ಈ ಜಯದೊಂದಿಗೆ ಯೋಧಾಸ್‌ 3ನೇ ಸ್ಥಾನಕ್ಕೇರಿತು. ಮತ್ತೊಂದು ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ 36-27ರಲ್ಲಿ ಗೆದ್ದ ಯು ಮುಂಬಾ 6ನೇ ಸ್ಥಾನಿಯಾಗಿ ಪ್ಲೇ-ಆಫ್‌ ಪ್ರವೇಶಿಸಿತು. ಗುರುವಾರದಿಂದ ಪ್ಲೇ-ಆಫ್‌ ಪಂದ್ಯಗಳು ಆರಂಭಗೊಳ್ಳಲಿವೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ವಿಶ್ವಕಪ್‌ ಪಂದ್ಯ ಬಹಿಷ್ಕಾರಕ್ಕಿದೆ ದೀರ್ಘ ಇತಿಹಾಸ
ರೋಲರ್‌ ಸ್ಕೇಟಿಂಗ್‌: ಮಂಗಳೂರು ಮೂಲದ ಅಹ್ಯಾನ್ ಅನ್ವರ್‌ಗೆ ಚಿನ್ನ