ಉಷಾ ಭೇಟಿ ರಾಜಕೀಯ ಸ್ಟಂಟ್‌, ಪ್ಯಾರಿಸ್‌ನಲ್ಲಿ ರಾಜಕೀಯ ನಡೆದಿದೆ: ರೆಸ್ಲರ್‌ ವಿನೇಶ್‌ ಆರೋಪ

KannadaprabhaNewsNetwork |  
Published : Sep 12, 2024, 01:58 AM ISTUpdated : Sep 12, 2024, 04:27 AM IST
ವಿನೇಶ್‌ ಜೊತೆ ಉಷಾ ಮಾತುಕತೆ | Kannada Prabha

ಸಾರಾಂಶ

ಉಷಾ ಮೇಡಂ ಆಸ್ಪತ್ರೆಗೆ ಬಂದು, ನನ್ನಲ್ಲಿ ಕೇಳದೆ ಫೋಟೋ ಕ್ಲಿಕ್ಕಿಸಿ ತೆರಳಿದರು. ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡು, ನಾವು ಜೊತೆಗಿದ್ದೇವೆ ಎಂದರು. ಆದರೆ ನನಗೆ ಯಾರೂ ಬೆಂಬಲ ನೀಡಿಲ್ಲ ಎಂದ ವಿನೇಶ್‌

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ ವೇಳೆ ತಾವು ಆಸ್ಪತ್ರೆಗೆ ದಾಖಲಾಗಿದ್ದಾಗ ಕ್ಲಿಕ್ಕಿಸಿದ ಫೋಟೋವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಕ್ಕೆ ಭಾರತೀಯ ಒಲಿಂಪಿಕ್‌ ಸಂಸ್ಥೆ (ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ವಿರುದ್ಧ ಕುಸ್ತಿಪಟು ವಿನೇಶ್‌ ಫೋಗಟ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ನನಗೆ ಸರಿಯಾದ ಬೆಂಬಲ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ.ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ವಿನೇಶ್‌, ‘ಉಷಾ ಮೇಡಂ ಆಸ್ಪತ್ರೆಗೆ ಬಂದು, ನನ್ನಲ್ಲಿ ಕೇಳದೆ ಫೋಟೋ ಕ್ಲಿಕ್ಕಿಸಿ ತೆರಳಿದರು. ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡು, ನಾವು ಜೊತೆಗಿದ್ದೇವೆ ಎಂದರು. ಆದರೆ 4 ಗೋಡೆಗಳ ಮಧ್ಯೆ ತುಂಬಾ ರಾಜಕೀಯ ನಡೆಯುತ್ತಿದೆ. ಪ್ಯಾರಿಸ್‌ನಲ್ಲೂ ರಾಜಕೀಯ ನಡೆದಿದೆ. ಇದರಿಂದಾಗಿಯೇ ನನ್ನ ಹೃದಯ ಒಡೆದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂಬೈನಿಂದ ಲಖನೌಗೆ ಇರಾನಿ ಕಪ್ ಪಂದ್ಯ ಶಿಫ್ಟ್‌

ಲಖನೌ: ಅ.1ರಿಂದ ಆರಂಭಗೊಳ್ಳಲಿರುವ ಇರಾನಿ ಕಪ್‌ ಪ್ರಥಮ ದರ್ಜೆ ಪಂದ್ಯವನ್ನು ಬಿಸಿಸಿಐ ಮುಂಬೈನಿಂದ ಲಖನೌಗೆ ಸ್ಥಳಾಂತರಿಸಿದೆ. ಹಾಲಿ ರಣಜಿ ಚಾಂಪಿಯನ್‌ ಮುಂಬೈ ಹಾಗೂ ರೆಸ್ಟ್‌ ಆಫ್‌ ಇಂಡಿಯಾ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಪಂದ್ಯ ಮೊದಲು ಮುಂಬೈನಲ್ಲಿ ನಿಗದಿಯಾಗಿತ್ತಾದರೂ, ನಗರದಲ್ಲಿ ಭಾರಿ ಮಳೆ ಮುನ್ಸೂಚನೆ ಇರುವ ಕಾರಣ ಲಖನೌ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಇದೇ ಮೊದಲ ಬಾರಿ ಲಖನೌದಲ್ಲಿ ಇರಾನಿ ಕಪ್‌ ಪಂದ್ಯ ನಡೆಯಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಬೆಂಗಳೂರಲ್ಲೇ ಐಪಿಎಲ್‌ ಉದ್ಘಾಟನೆ : ಮಾ.28ಕ್ಕೆ ಆರ್‌ಸಿಬಿ vs ಸನ್‌ರೈಸರ್ಸ್‌
ಟಿ20 ವಿಶ್ವಕಪ್‌ ವಿಜೇತ ಭಾರತಕ್ಕೆ ಬಿಸಿಸಿಐ ₹ 131 ಕೋಟಿ ಬಂಪರ್‌!