ಐಪಿಎಲ್‌ಗೆ ಮುನ್ನ ಭಾರತಕ್ಕೆ ಮರಳಿ ಬಂದ ವಿರಾಟ್‌ ಕೊಹ್ಲಿ

KannadaprabhaNewsNetwork |  
Published : Mar 18, 2024, 01:47 AM ISTUpdated : Mar 18, 2024, 11:16 AM IST
ವಿರಾಟ್‌ ಕೊಹ್ಲಿ | Kannada Prabha

ಸಾರಾಂಶ

ಕೊಹ್ಲಿ ಶೀಘ್ರದಲ್ಲೇ ಆರ್‌ಸಿಬಿ ತಂಡ ಕೂಡಿಕೊಳ್ಳುವ ನಿರೀಕ್ಷೆಯಿದೆ. ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಗೆ ಕೊಹ್ಲಿ ಅಲಭ್ಯರಾಗಿದ್ದರು. ಇತ್ತೀಚೆಗಷ್ಟೇ ಅವರು 2ನೇ ಗಂಡು ಮಗುವಿನ ತಂದೆಯಾಗಿದ್ದರು.

ನವದೆಹಲಿ: ಭಾರತದ ಸ್ಟಾರ್‌ ಕ್ರಿಕೆಟಿಗ, ರನ್‌ ಮೆಷಿನ್ ವಿರಾಟ್‌ ಕೊಹ್ಲಿ 17ನೇ ಆವೃತ್ತಿ ಇಂಡಿಯನ್‌ ಪ್ರೀಮಿಯರ್ ಲೀಗ್‌(ಐಪಿಎಲ್)ಗೂ ಮುನ್ನ ಭಾರತಕ್ಕೆ ಮರಳಿದ್ದಾರೆ. ಅವರು ಶೀಘ್ರದಲ್ಲೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ.

ಭಾನುವಾರ ಸ್ಟಾರ್‌ಸ್ಪೋರ್ಟ್ಸ್‌ ವಾಹಿನಿಯು ಕೊಹ್ಲಿ ಆಗಮನದ ಬಗ್ಗೆ ಟ್ವೀಟ್ ಮಾಡಿದ್ದು, ‘ಕಿಂಗ್‌ ಕೊಹ್ಲಿ ಭಾರತಕ್ಕೆ ಮರಳಿದ್ದಾರೆ. ಅವರು ಐಪಿಎಲ್‌ ಅಭಿಯಾನ ಆರಂಭಿಸಲು ಸಜ್ಜಾಗಿದ್ದಾರೆ’ ಎಂದಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಗೆ ಕೊಹ್ಲಿ ಅಲಭ್ಯರಾಗಿದ್ದರು. 

ವೈಯಕ್ತಿಕ ಕಾರಣ ನೀಡಿದ್ದ ಅವರು ಬಳಿಕ ಲಂಡನ್‌ನಲ್ಲಿ ಇರುವುದಾಗಿ ಗೊತ್ತಾಗಿತ್ತು. ಇತ್ತೀಚೆಗಷ್ಟೇ ಅವರು 2ನೇ ಗಂಡು ಮಗುವಿನ ತಂದೆಯಾಗಿದ್ದರು.

ಕೊಹ್ಲಿ ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರ 639 ರನ್‌ ಕಲೆಹಾಕಿದ್ದಾರೆ. ಈ ವರ್ಷ ಟಿ20 ವಿಶ್ವಕಪ್‌ ಇರುವುದರಿಂದ ವಿರಾಟ್‌ ಪಾಲಿಗೆ ಐಪಿಎಲ್‌ ಪ್ರದರ್ಶನ ಮಹತ್ವದ್ದೆನಿಸಿದೆ.

ಆರ್‌ಸಿಬಿ ಕಠಿಣ ಅಭ್ಯಾಸ: ಐಪಿಎಲ್‌ಗೆ ಆರ್‌ಸಿಬಿ ಆಟಗಾರರು ಕಠಿಣ ಅಭ್ಯಾಸ ನಡೆಸುತ್ತಿದ್ದು, ತಾರಾ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೂಡಾ ಭಾನುವಾರ ನೆಟ್ಸ್‌ನಲ್ಲಿ ಕಾಣಿಸಿಕೊಂಡರು. ಫಾಫ್‌ ಡು ಪ್ಲೆಸಿ, ಕನ್ನಡಿಗ ವಿಜಯ್‌ಕುಮಾರ್‌ ವೈಶಾಖ್‌ ಸೇರಿದಂತೆ ಹಲವರು 2 ದಿನಗಳ ಹಿಂದೆಯೇ ಅಭ್ಯಾಸ ಆರಂಭಿಸಿದ್ದರು.

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌