ಇಂಗ್ಲೆಂಡ್‌ ವಿರುದ್ಧ ಮೊದಲ 2 ಟೆಸ್ಟ್‌ಗಿಲ್ಲ ವಿರಾಟ್‌ ಕೊಹ್ಲಿ

KannadaprabhaNewsNetwork |  
Published : Jan 23, 2024, 01:46 AM ISTUpdated : Jan 23, 2024, 02:24 PM IST
Virat-Kohli-will-not-play-to-test-against-England-due-to-personal-reason

ಸಾರಾಂಶ

ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಮಹತ್ವದ ಟೆಸ್ಟ್‌ ಸರಣಿಗೂ ಮುನ್ನ ಭಾರತಕ್ಕೆ ಆಘಾತ ಎದುರಾಗಿದ್ದು, ತಾರಾ ಬ್ಯಾಟರ್‌ ವಿರಾಟ್‌ ಕೊಹ್ಲಿ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಮಹತ್ವದ ಟೆಸ್ಟ್‌ ಸರಣಿಗೂ ಮುನ್ನ ಭಾರತಕ್ಕೆ ಆಘಾತ ಎದುರಾಗಿದ್ದು, ತಾರಾ ಬ್ಯಾಟರ್‌ ವಿರಾಟ್‌ ಕೊಹ್ಲಿ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. 

ಈ ಬಗ್ಗೆ ಬಿಸಿಸಿಐ ಸೋಮವಾರ ಮಾಹಿತಿ ನೀಡಿದ್ದು, ಕೊಹ್ಲಿ ವೈಯಕ್ತಿಕ ಕಾರಣಗಳಿಂದಾಗಿ ಮೊದಲ 2 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದಿದೆ.‘ವೈಯಕ್ತಿಕ ಕಾರಣಕ್ಕೆ ಕೊಹ್ಲಿ 2 ಪಂದ್ಯ ಆಡುವುದಿಲ್ಲ. 

ಈ ಬಗ್ಗೆ ಅವರು ನಾಯಕ ರೋಹಿತ್‌ ಶರ್ಮಾ, ಆಯ್ಕೆ ಸಮಿತಿ ಮತ್ತು ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿದ್ದಾರೆ’ ಎಂದು ತಿಳಿಸಿದೆ.

ಅಲ್ಲದೆ ಈ ಸಮಯದಲ್ಲಿ ವಿರಾಟ್ ಕೊಹ್ಲಿಯ ಖಾಸಗಿತನವನ್ನು ಗೌರವಿಸುವಂತೆ ಮತ್ತು ಅವರ ವೈಯಕ್ತಿಕ ಕಾರಣಗಳ ಬಗ್ಗೆ ಊಹಾಪೋಹ ಹರಡದಂತೆ ಮಾಧ್ಯಮಗಳು ಮತ್ತು ಅಭಿಮಾನಿಗಳಿಗೆ ಬಿಸಿಸಿಐ ಮನವಿ ಮಾಡಿದೆ. ಆದರೆ ಕೊಹ್ಲಿ ಬದಲಿ ಆಟಗಾರನನ್ನು ಬಿಸಿಸಿಐ ಘೋಷಿಸಿಲ್ಲ.

ಟೀಂ ಇಂಡಿಯಾ ಆಟಗಾರರು ಜ.20ರಂದು ಹೈದರಾಬಾದ್‌ಗೆ ಆಗಮಿಸಿದ್ದು, ಅಭ್ಯಾಸ ನಿರತರಾಗಿದ್ದಾರೆ. ಕೊಹ್ಲಿ ಕೂಡಾ ಹೈದ್ರಾಬಾದ್‌ಗೆ ಆಗಮಿಸಿ ತಂಡ ಕೂಡಿಕೊಂಡಿದ್ದರು.

ರಜತ್‌, ಸರ್ಫರಾಜ್‌, ಪೂಜಾರ ರೇಸ್‌ನಲ್ಲಿ: ಕೊಹ್ಲಿಯಿಂದ ತೆರವಾಗಿರುವ ಸ್ಥಾನಕ್ಕೆ ಮೂವರ ನಡುವೆ ಪೈಪೋಟಿ ಏರ್ಪಟ್ಟಿದೆ. ಹಿರಿಯ ಬ್ಯಾಟರ್‌ ಚೇತೇಶ್ವರ್‌ ಪೂಜಾರ ಕಮ್‌ಬ್ಯಾಕ್‌ ನಿರೀಕ್ಷೆಯಲ್ಲಿದ್ದರೆ, ಯುವ ಬ್ಯಾಟರ್‌ಗಳಾದ ರಜತ್‌ ಪಾಟೀದಾರ್‌, ಸರ್ಫರಾಜ್‌ ಖಾನ್‌ ಕೂಡಾ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ