4ನೇ ಬಾರಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಗೆದ್ದ ವಿರಾಟ್

KannadaprabhaNewsNetwork | Updated : Jan 26 2024, 07:27 AM IST

ಸಾರಾಂಶ

ಭಾರತದ ತಾರಾ ಆಟಗಾರ ವಿರಾಟ್‌ ಕೊಹ್ಲಿ 4ನೇ ಬಾರಿ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದುಬೈ: ಭಾರತದ ತಾರಾ ಆಟಗಾರ ವಿರಾಟ್‌ ಕೊಹ್ಲಿ 4ನೇ ಬಾರಿ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ವಿರಾಟ್‌ ಏಕದಿನ ವಿಶ್ವಕಪ್‌ ಸೇರಿದಂತೆ ವಿವಿಧ ಸರಣಿಗಳಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿದ್ದು, 2023ರಲ್ಲಿ 6 ಶತಕ ಸೇರಿದಂತೆ 1377 ರನ್‌ ಕಲೆಹಾಕಿದ್ದಾರೆ. 

ಕೊಹ್ಲಿ ಈ ಮೊದಲು 2012, 2017, 2018ರಲ್ಲೂ ಏಕದಿನ ಕ್ರಿಕೆಟಿಗ ಪ್ರಶಸ್ತಿ ಪಡೆದಿದ್ದರು. ಒಟ್ಟಾರೆ ಇದು ಅವರಿಗೆ 7ನೇ ವೈಯಕ್ತಿಕ ಐಸಿಸಿ ಪ್ರಶಸ್ತಿ. 

2018ರಲ್ಲಿ ವರ್ಷದ ಟೆಸ್ಟ್‌ ಕ್ರಿಕೆಟಿಗ, 2017, 2018ರಲ್ಲಿ ವರ್ಷದ ಪುರುಷ ಕ್ರಿಕೆಟಿಗ ಪ್ರಶಸ್ತಿಯನ್ನೂ ಕೊಹ್ಲಿ ತಮ್ಮದಾಗಿಸಿಕೊಂಡಿದ್ದರು.

ಇದೇ ವೇಳೆ ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ 2023ರ ವರ್ಷದ ಪುರುಷ ಕ್ರಿಕೆಟಿಗ, ಉಸ್ಮಾನ್‌ ಖವಾಜ ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಖವಾಜ 2023ರಲ್ಲಿ ಟೆಸ್ಟ್‌ನಲ್ಲಿ 1000+ ರನ್‌ ಗಳಿಸಿದ ಏಕೈಕ ಕ್ರಿಕೆಟಿಗ.

2ನೇ ಅನಧಿಕೃತ ಟೆಸ್ಟ್‌: ಭಾರತ ಬೃಹತ್‌ ಮೊತ್ತ
ಅಹಮದಾಬಾದ್‌: ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಇಲ್ಲಿ ನಡೆಯುತ್ತಿರುವ 2ನೇ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ‘ಎ’ ತಂಡ ಬೃಹತ್‌ ಮುನ್ನಡೆ ಸಾಧಿಸಿದೆ.

ಇಂಗ್ಲೆಂಡ್‌ನ 152 ರನ್‌ಗೆ ಉತ್ತರವಾಗಿ ಭಾರತ 2ನೇ ದಿನದಂತ್ಯಕ್ಕೆ 489 ರನ್‌ಗೆ ಆಲೌಟ್‌ ಆಗಿದೆ. 

ಮೊದಲ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 150 ರನ್‌ ಗಳಿಸಿದ್ದ ಭಾರತ, ಸರ್ಫರಾಜ್‌ ಖಾನ್‌(161), ದೇವದತ್‌ ಪಡಿಕ್ಕಲ್‌(105) ಅಮೋಘ ಶತಕ ಹಾಗೂ ಸೌರಭ್‌ ಕುಮಾರ್‌(77), ವಾಷಿಂಗ್ಟನ್‌ ಸುಂದರ್‌ (57), ಅಭಿಮನ್ಯು (58) ಅರ್ಧಶತಕದಾಟದ ನೆರವಿನಿಂದ 331 ರನ್‌ ಗಳ ಮುನ್ನಡೆ ದಾಖಲಿಸಿದೆ. ಇಂಗ್ಲೆಂಡ್‌ ಪರ ಮ್ಯಾಥ್ಯೂ ಪೊಟ್ಸ್‌ 6 ವಿಕೆಟ್‌ ಪಡೆದು ಮಿಂಚಿದರು.

 

Share this article