ವಿಶ್ವ ನಂ.1 ಸೂರ್‍ಯಕುಮಾರ್‌ ಐಸಿಸಿ ಟಿ20 ವರ್ಷದ ಕ್ರಿಕೆಟಿಗ

KannadaprabhaNewsNetwork |  
Published : Jan 25, 2024, 02:02 AM ISTUpdated : Jan 25, 2024, 05:38 AM IST
ಸೂರ್ಯಕುಮಾರ್‌ ಯಾದವ್‌ | Kannada Prabha

ಸಾರಾಂಶ

ಭಾರತ ಕ್ರಿಕೆಟ್‌ ತಂಡದ ಸ್ಪೋಟಕ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಸತತ 2ನೇ ಬಾರಿ ಐಸಿಸಿ ಟಿ20 ವರ್ಷದ ಕ್ರಿಕೆಟಿಗ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ದುಬೈ: ಭಾರತ ಕ್ರಿಕೆಟ್‌ ತಂಡದ ಸ್ಪೋಟಕ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಸತತ 2ನೇ ಬಾರಿ ಐಸಿಸಿ ವರ್ಷದ ಟಿ20 ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವಿಶ್ವ ನಂ.1 ಸ್ಥಾನದಲ್ಲಿರುವ ಸೂರ್ಯ ಅವರನ್ನು ಐಸಿಸಿ, ಭಾರತದ ಮಧ್ಯಮ ಕ್ರಮಾಂಕದ ಬೆನ್ನೆಲುಬು ಎಂದು ಬಣ್ಣಿಸಿದೆ. 2023ರಲ್ಲಿ 17 ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿರುವ ಸೂರ್ಯ 5 ಅರ್ಧಶತಕ, 2 ಶತಕಗಳೊಂದಿಗೆ 733 ರನ್‌ ಗಳಿಸಿದ್ದಾರೆ. 

ಹಾರ್ದಿಕ್‌ ಪಾಂಡ್ಯ ಹಾಗೂ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಟಿ20 ತಂಡದ ನಾಯಕತ್ವ ವಹಿಸಿದ್ದ ಅವರು, ಆಸ್ಟ್ರೇಲಿಯಾ ವಿರುದ್ಧ 4-1ರಿಂದ ಸರಣಿ ಗೆಲುವು ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 1-1ರಿಂದ ಸರಣಿ ಸಮಬಲ ಸಾಧಿಸಲು ಯಶಸ್ವಿಯಾಗಿದ್ದರು.

ಇದೇ ವೇಳೆ ಐಸಿಸಿ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿಗೆ ನ್ಯೂಜಿಲೆಂಡ್‌ನ ತಾರಾ ಬ್ಯಾಟರ್‌ ರಚಿನ್‌ ರವೀಂದ್ರ ಭಾಜನರಾಗಿದ್ದಾರೆ. ಏಕದಿನ, ಟೆಸ್ಟ್‌, ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಐಸಿಸಿ ಗುರುವಾರ ಪ್ರಕಟಿಸುವ ಸಾಧ್ಯತೆಯಿದೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ