ಸ್ಕಾಟ್ಲೆಂಡ್‌ ವಿರುದ್ಧ ಪವರ್‌ ಪ್ಲೇನಲ್ಲಿ 113 ರನ್‌ ಸಿಡಿಸಿ ಆಸ್ಟ್ರೇಲಿಯಾ ಟಿ20 ವಿಶ್ವ ದಾಖಲೆ!

KannadaprabhaNewsNetwork |  
Published : Sep 05, 2024, 12:35 AM ISTUpdated : Sep 05, 2024, 03:22 AM IST
ಕೇವಲ 25 ಎಸೆತದಲ್ಲಿ 80 ರನ್‌ ಸಿಡಿಸಿದ ಆಸ್ಟ್ರೇಲಿಯಾದ ಟ್ರ್ಯಾವಿಸ್‌ ಹೆಡ್‌. | Kannada Prabha

ಸಾರಾಂಶ

ಮೊದಲ ಟಿ20 ಪಂದ್ಯದಲ್ಲಿ ಸ್ಕಾಟ್ಲೆಂಡನ್ನು ಚೆಂಡಾಡಿದ ಆಸ್ಟ್ರೇಲಿಯಾ. ಟ್ರ್ಯಾವಿಸ್‌ ಹೆಡ್‌ ರೌದ್ರಾವತಾರ. ಕೇವಲ 25 ಎಸೆತದಲ್ಲಿ 80 ರನ್‌ ಸಿಡಿಸಿದ ಹೆಡ್‌. 157 ರನ್‌ ಗುರಿಯನ್ನು 9.4 ಓವರಲ್ಲಿ ಬೆನ್ನತ್ತಿದ ಆಸೀಸ್‌.

ಎಡಿನ್‌ಬರ್ಗ್: ಸ್ಕಾಟ್ಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿಶ್ವ ದಾಖಲೆ ಬರೆದಿದೆ. ಪವರ್‌-ಪ್ಲೇನಲ್ಲಿ 113 ರನ್‌ ಕಲೆಹಾಕುವ ಮೂಲಕ, ಅಂತಾರಾಷ್ಟ್ರೀಯ ಟಿ20ಯಲ್ಲಿ ಪವರ್‌-ಪ್ಲೇನಲ್ಲಿ ಅತಿಹೆಚ್ಚು ರನ್‌ ಗಳಿಸಿದ ತಂಡ ಎನ್ನುವ ದಾಖಲೆಯನ್ನು ಬರೆಯಿತು. 

ಮೊದಲು ಬ್ಯಾಟ್‌ ಮಾಡಿದ ಸ್ಕಾಟ್ಲೆಂಡ್‌ 20 ಓವರಲ್ಲಿ 9 ವಿಕೆಟ್‌ಗೆ 154 ರನ್‌ ಕಲೆಹಾಕಿತು. ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ಕೇವಲ 9.4 ಓವರಲ್ಲಿ ಗೆಲುವಿನ ನಗೆ ಬೀರಿತು. ಟ್ರ್ಯಾವಿಸ್‌ ಹೆಡ್‌ ಕೇವಲ 25 ಎಸೆತದಲ್ಲಿ 12 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 80 ರನ್‌ ಸಿಡಿಸಿದರು. ಮಿಚೆಲ್‌ ಮಾರ್ಷ್‌ 12 ಎಸೆತದಲ್ಲಿ 39 ರನ್‌ ಚಚ್ಚಿದರೆ, ಜೋಶ್‌ ಇಂಗ್ಲಿಸ್‌ 13 ಎಸೆತದಲ್ಲಿ ಔಟಾಗದೆ 27 ರನ್ ಬಾರಿಸಿದರು.

ಆಸ್ಟ್ರೇಲಿಯಾ ಸತತ 14 ಎಸೆತಗಳಲ್ಲಿ ಬೌಂಡರಿ, ಸಿಕ್ಸರ್‌ ಸಿಡಿಸಿ ದಾಖಲೆ ಬರೆಯಿತು. 4ನೇ ಓವರ್‌ನ ಕೊನೆ 2 ಎಸೆತ, 5 ಹಾಗೂ 6ನೇ ಓವರ್‌ನ ಎಲ್ಲಾ ಎಸೆತಗಳು ಬೌಂಡರಿ ಗೆರೆ ದಾಟಿದವು. 14 ಎಸೆತಗಳಲ್ಲೇ ಆಸೀಸ್‌ 66 ರನ್‌ ಕಲೆಹಾಕಿತು.ಪುರುಷರ ಅಂ.ರಾ.ಟಿ20 ಪವರ್‌-ಪ್ಲೇನಲ್ಲಿ ಗರಿಷ್ಠ ರನ್‌

ರನ್‌ತಂಡವಿರುದ್ಧವರ್ಷ

113/1ಆಸ್ಟ್ರೇಲಿಯಾಸ್ಕಾಟ್ಲೆಂಡ್‌2024

102/0ದ.ಆಫ್ರಿಕಾವಿಂಡೀಸ್‌2023

98/4ವಿಂಡೀಸ್‌ಶ್ರೀಲಂಕಾ2021

93/0ಐರ್ಲೆಂಡ್‌ವಿಂಡೀಸ್‌2020

92/1ವಿಂಡೀಸ್‌ಆಫ್ಘನ್‌2024

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ರೋಲರ್‌ ಸ್ಕೇಟಿಂಗ್‌: ಮಂಗಳೂರು ಮೂಲದ ಅಹ್ಯಾನ್ ಅನ್ವರ್‌ಗೆ ಚಿನ್ನ
ಕ್ರಿಕೆಟಿಂದಲೇ ಪಾಕ್‌ ಹೊರಗಟ್ಟುವ ಟೈಂ ಬಂತಾ?