ಮಾಧ್ಯಮ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾದ ಅಮೆರಿಕದ ರೂಪರ್ಟ್ ಮರ್ಡೋಕ್ ಅವರು ತಮ್ಮ 93ರ ‘ಎಳೆವಯಸ್ಸಿನಲ್ಲಿ’ 5ನೇ ಮದುವೆಯಾಗಿದ್ದಾರೆ.
ಲಾಸ್ ಏಂಜಲೀಸ್: ಮಾಧ್ಯಮ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾದ ಅಮೆರಿಕದ ರೂಪರ್ಟ್ ಮರ್ಡೋಕ್ ಅವರು ತಮ್ಮ 93ರ ‘ಎಳೆವಯಸ್ಸಿನಲ್ಲಿ’ 5ನೇ ಮದುವೆಯಾಗಿದ್ದಾರೆ.
ಇವರು ಮಾಲಿಕ್ಯುಲರ್ ಬಯಾಲಜಿಸ್ಟ್ ಎಲೆನಾ ಝುಕೋವಾ (67) ಅವರೊಂದಿಗೆ ಶನಿವಾರ ಹಸೆಮಣೆಗೆ ಏರಿದ್ದಾರೆ. ರೂಪರ್ಟ್ ಮೊದಲು ಆಸ್ಟ್ರೇಲಿಯಾ ಮೂಲದ ಗಗನಸಖಿ ಪ್ಯಾಟ್ರಿಕಾ ಬೂಕರ್‌ರನ್ನು ವಿವಾಹವಾಗಿ, 1960ರಲ್ಲಿ ವಿಚ್ಛೇದನ ಪಡೆದಿದ್ದರು. ನಂತರದಲ್ಲಿ ಆ್ಯನ್ನಾ ಟೋರ್ವ್ ಅವರೊಂದಿಗೆ 30 ವರ್ಷ ಸಂಸಾರ ನಡೆಸಿ ಬಳಿಕ 1999ರಲ್ಲಿ ಬೇರ್ಪಟ್ಟಿದ್ದರು. ಇವರಾದ ಬಳಿಕ ವೆಂಡಿ ದೆಂಗ್ ಎಂಬರೊಂದಿಗೆ ಮದುವೆಯಾಗಿ 2013ರವರೆಗೆ ಜೀವನ ನಡೆಸಿದ್ದರು.
ಕಡೆಯ ಬಾರಿ ಮಾಡೆಲ್ ಜೆರ್ರಿ ಹಾಲ್ ಅವರೊಂದಿಗೆ ಮದುವೆಯಾಗಿದ್ದರು. ಇವರೀಗ ರಷ್ಯಾ ಮೂಲದ ಮಹಿಳೆಯೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.