ಸವಾರನಿಗೆ 62 ರು. ಬದಲು 7.66 ಕೋಟಿ ಉಬರ್‌ ಬಿಲ್‌!

KannadaprabhaNewsNetwork |  
Published : Apr 01, 2024, 12:49 AM ISTUpdated : Apr 01, 2024, 04:14 AM IST
7.66 ಕೋಟಿ ಉಬರ್‌ ಬಿಲ್‌ | Kannada Prabha

ಸಾರಾಂಶ

ನೋಯ್ಡಾದಲ್ಲಿ ಉಬರ್‌ ಆಟೋ ಬುಕ್‌ ಮಾಡಿದ ವ್ಯಕ್ತಿಯೊಬ್ಬರಿಗೆ 62 ರು. ಬದಲಾಗಿ ಭರ್ಜರಿ 7.66 ಕೋಟಿ ರು. ಬಿಲ್‌ ನೀಡಿದ ಘಟನೆ ನಡೆದಿದೆ.

ನವದೆಹಲಿ: ನೋಯ್ಡಾದಲ್ಲಿ ಉಬರ್‌ ಆಟೋ ಬುಕ್‌ ಮಾಡಿದ ವ್ಯಕ್ತಿಯೊಬ್ಬರಿಗೆ 62 ರು. ಬದಲಾಗಿ ಭರ್ಜರಿ 7.66 ಕೋಟಿ ರು. ಬಿಲ್‌ ನೀಡಿದ ಘಟನೆ ನಡೆದಿದೆ.

 ದೀಪಕ್‌ ಎಂಬುವವರುಟೆಂಗುರಿಯಾ ಅವರಿಗೆ ಈ ರೀತಿಯ ಅನುಭವವಾಗಿದೆ. ಉಬರ್‌ ಆಟೋ ಏರಿ ತಾವು ತಲುಪಬೇಕಾದ ಸ್ಥಳಕ್ಕೆ ತಲುಪಿದ ಬಳಿಕ ಅವರಿಗೆ ನಿರೀಕ್ಷಿತ 62 ರು. ಬದಲು 7.66 ಕೋಟಿ ರು.ಬಿಲ್‌ ಮೊತ್ತ ರವಾನೆಯಾಗಿದೆ. 

ಅದರಲ್ಲಿ ಚಾಲನಾ ಶುಲ್ಕ ₹1,67,74,647, ಕಾಯುವಿಕೆ ಶುಲ್ಕ ₹5,99,09,189 ಎಂದು ತೋರಿಸಲಾಗಿದೆ. ಜೊತೆಗೆ ₹75 ಡಿಸ್ಕೌಂಟ್ ಕೂಡ ನೀಡಲಾಗಿದೆ. ಈ ಬಗ್ಗೆ ಅವರು ದೂರು ನೀಡಿದ ಬಳಿಕ ಘಟನೆ ಕುರಿತು ಕ್ಷಮೆಯಾಚಿಸಿರುವ ಕಂಪನಿ ತಾಂತ್ರಿಕ ದೋಷವನ್ನು ಸರಿಪಡಿಸುವುದಾಗಿ ಸ್ಪಷ್ಟನೆ ನೀಡಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಮೈಕ್‌ ಮೂಲಕ ಆಜಾನ್‌ ಕರೆ ನಿಷೇಧಕ್ಕೆ ಡೆನ್ಮಾಕ್‌ ಚಿಂತನೆ
1985ರ ಏರ್‌ ಇಂಡಿಯಾ ಸ್ಫೋಟಕ್ಕೆ ಖಲಿಸ್ತಾನಿಗಳು ಕಾರಣ: ಕೆನಡಾ ಒಪ್ಪಿಗೆ