ಉಕ್ರೇನ್‌ ಯುದ್ಧ ಕೈದಿಗಳಿದ್ದ ರಷ್ಯಾ ವಿಮಾನ ಪತನ: 74 ಮಂದಿ ಸಾವು

KannadaprabhaNewsNetwork |  
Published : Jan 25, 2024, 02:00 AM ISTUpdated : Jan 25, 2024, 05:39 AM IST
ರಷ್ಯಾ ವಿಮಾನ ಪತನ | Kannada Prabha

ಸಾರಾಂಶ

ಕೈದಿಗಳ ಹಸ್ತಾಂತರಕ್ಕಾಗಿ ಉಕ್ರೇನ್‌ಗೆ ತೆರಳುತ್ತಿದ್ದ ರಷ್ಯಾ ವಿಮಾನ ಪತನಗೊಂಡು 74 ಮಂದಿ ಸಾವನ್ನಪ್ಪಿದ್ದಾರೆ.

ಮಾಸ್ಕೋ: 65 ಉಕ್ರೇನ್‌ ಯುದ್ಧ ಕೈದಿಗಳನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ಸೇನಾ ವಿಮಾನವೊಂದು ಬುಧವಾರ ಅಪಘಾತಕ್ಕೆ ತುತ್ತಾಗಿದೆ. ಈ ಘಟನೆಯಲ್ಲಿ 65 ಕೈದಿಗಳು ಸೇರಿ 74 ಮಂದಿ ಸಾವನ್ನಪ್ಪಿದ್ದಾರೆ.

ರಷ್ಯಾ ಉಕ್ರೇನ್‌ ಗಡಿ ಭಾಗ ಬೆಲ್ಗೊರೋಡ್‌ನಲ್ಲಿ ಈ ಘಟನೆ ನಡೆದಿದ್ದು, ಹಸ್ತಾಂತರಕ್ಕಾಗಿ ಈ ಕೈದಿಗಳನ್ನು ಉಕ್ರೇನ್‌ಗೆ ಕರೆದೊಯ್ಯಲಾಗುತ್ತಿತ್ತು ಎಂದು ರಷ್ಯಾ ಹೇಳಿದೆ.ಬೆಲ್ಗೋರೋಡ್‌ ಬಳಿ ವಿಮಾನ ಪತನಗೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ವಿಮಾನ ಬಿದ್ದ ಸ್ಥಳದಲ್ಲಿ ದೊಡ್ಡದಾಗಿ ಬೆಂಕಿ ಕಾಣಿಸಿಕೊಂಡಿದೆ. 

ಈ ವಿಮಾನದಲ್ಲಿ 65 ಮಂದಿ ಯುದ್ಧಕೈದಿಗಳು, 6 ಮಂದಿ ಸಿಬ್ಬಂದಿ ಮತ್ತು 3 ಮಂದಿ ರಕ್ಷಣಾ ಸಿಬ್ಬಂದಿ ಇದ್ದರು ಎಂದು ರಷ್ಯಾದ ಮಾಧ್ಯಮವೊಂದು ವರದಿ ಮಾಡಿದೆ. 

ಉಕ್ರೇನ್‌ ದಾಳಿಗೆ ವಿಮಾನ ಪತನ: ಗಡಿ ಭಾಗದಲ್ಲಿ ಹಾರಾಡುತ್ತಿದ್ದ ವಿಮಾನದ ಮೇಲೆ ಉಕ್ರೇನ್‌ ಸೇನಾಪಡೆಗಳು ಕ್ಷಿಪಣಿ ಮೂಲಕ ದಾಳಿ ನಡೆಸಿವೆ. ಹೀಗಾಗಿ ವಿಮಾನ ಪತನಗೊಂಡಿದೆ ಎಂದು ರಷ್ಯಾದ ಸಂಸದರು ಆರೋಪಿಸಿದ್ದಾರೆ.

PREV

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!