ವಾಷಿಂಗ್ಟನ್: ವಿವಿಧ ನರರೋಗಗಳಿಂದ ಬಳಲುತ್ತಿರುವವರ ಮೆದುಳಿಗೆ ಚಿಪ್ ಅಳವಡಿಸುವ ಎಲಾನ್ ಮಸ್ಕ್‌ರ ನ್ಯೂರಾಲಿಂಕ್ ಯೋಜನೆಗೆ ಮತ್ತೊಂದು ಯಶಸ್ಸು ಸಿಕ್ಕಿದೆ.
ಇತ್ತೀಚೆಗೆ ಶಸ್ತ್ರಚಿಕಿತ್ಸೆ ಮೂಲಕ ಮೆದುಳಿಗೆ ಚಿಪ್ ಅಳವಡಿಸಿಕೊಂಡಿದ್ದ ನೋಲ್ಯಾಂಡ್ ತನ್ನ ಮೆದುಳಿನಲ್ಲಿ ಯೋಚಿಸುವ ಮೂಲಕವೇ ಎದುರಿಗಿದ್ದ ಕಂಪ್ಯೂಟರ್‌ನೊಂದಿಗೆ ಚೆಸ್ ಆಡಿದ್ದಾನೆ.
ಅಪಘಾತವೊಂದರ ಬಳಿಕ ನೋಲ್ಯಾಂಡ್‌ನ ಭುಜದ ಕೆಳಗಿನ ಪೂರ್ಣ ಭಾಗ ಸ್ವಾಧೀನ ಕಳೆದುಕೊಂಡಿತ್ತು. ಹೀಗಾಗಿ ಆತ ಸ್ವಯಂ ಯಾವುದೇ ಕೆಲಸ ಮಾಡುವಂತಿರಲಿಲ್ಲ. ಹೀಗಾಗಿ ಪ್ರಾಯೋಗಿಕ ಯೋಜನೆಯಡಿ ಆತನ ಮೆದುಳಿನಲ್ಲಿ ಚಿಪ್ ಅಳವಡಿಸಲಾಗಿತ್ತು.
ನೋಲ್ಯಾಂಡ್ ತಾನು ಏನು ಮಾಡಬೇಕು ಎಂದು ಯೋಚಿಸುತ್ತಿದ್ದಂತೆ ಆ ವಿಷಯ ಮೆದುಳಿನಲ್ಲಿರುವ ಚಿಪ್ ಮೂಲಕ ಕಂಪ್ಯೂಟರ್‌ನ ಮೌಸ್‌ಗೆ ಸಂದೇಶ ರವಾನಿಸಿತ್ತು. ಅದರಂತೆ ಮೌಸ್‌ನ ಕರ್ಸರ್ ಅತ್ತಿಂದಿತ್ತ ಓಡಾಡಿ ಕಂಪ್ಯೂಟರ್‌ನಲ್ಲಿನ ಚೆಸ್ ಕಾಯಿನ್‌ಗಳ ಸ್ಥಾನ ಬದಲಾವಣೆ ಮಾಡಿದೆ.