ಗಾಜಾ ಸಿಲುಕಿದ್ದ ವಿದೇಶಿಗರಿಗೆ ಸ್ಥಳ ಬಿಡಲು ಅವಕಾಶ

KannadaprabhaNewsNetwork |  
Published : Oct 15, 2023, 12:45 AM IST

ಸಾರಾಂಶ

ಕಳೆದೊಂದು ವಾರದಿಂದ ನಡೆಯುತ್ತಿರುವ ಇಸ್ರೇಲ್‌-ಹಮಾಸ್‌ ಸಂಘರ್ಷದ ಹಿನ್ನೆಲೆಯಲ್ಲಿ ಗಾಜಾ ಪಟ್ಟಿ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ವಿದೇಶಿಯರಿಗೆ ಗಾಜಾ ತೊರೆಯಲು ಕೊನೆಗೂ ಅವಕಾಶ ಮಾಡಿಕೊಡಲಾಗಿದೆ.

ಜೆರುಸಲೇಂ: ಕಳೆದೊಂದು ವಾರದಿಂದ ನಡೆಯುತ್ತಿರುವ ಇಸ್ರೇಲ್‌-ಹಮಾಸ್‌ ಸಂಘರ್ಷದ ಹಿನ್ನೆಲೆಯಲ್ಲಿ ಗಾಜಾ ಪಟ್ಟಿ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ವಿದೇಶಿಯರಿಗೆ ಗಾಜಾ ತೊರೆಯಲು ಕೊನೆಗೂ ಅವಕಾಶ ಮಾಡಿಕೊಡಲಾಗಿದೆ. 24 ಗಂಟೆಯೊಳಗೆ ಉತ್ತರ ಗಾಜಾದ 11 ಲಕ್ಷ ಜನರಿಗೆ ಸ್ಥಳ ತೆರವು ಮಾಡಲು ಇಸ್ರೇಲ್‌ ಸೇನೆ ಸೂಚನೆ ನೀಡಿದ ಬೆನ್ನಲ್ಲೇ ಈ ಅವಕಾಶ ಕಲ್ಪಿಸಲಾಗಿದೆ. ಈ ತೆರವು ಕಾರ್ಯಾಚರಣೆಗೆ ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ಕಡೆಯಿಂದ ಅನುಮತಿ ಸಿಕ್ಕಿದೆ. ಒಪ್ಪಂದ ಪ್ರಕ್ರಿಯೆಯಲ್ಲಿ ಈಜಿಪ್ಟ್‌, ಅಮೆರಿಕ ಹಾಗೂ ಖತಾರ್‌ ಕೂಡ ಪಾಲ್ಗೊಂಡಿವೆ. ಗಾಜಾಕ್ಕೆ ಪ್ರವೇಶ ಮಾಡಲು ಮತ್ತು ಅಲ್ಲಿಂದ ಹೊರಗೆ ಹೋಗಲು ಇರುವುದು ಎರಡೇ ಸ್ಥಳ. ಈ ಪೈಕಿ ಉತ್ತರ ಭಾಗದಲ್ಲಿರುವ ‘ಇರೇಜ್‌ ಚೆಕ್‌ಪಾಯಿಂಟ್‌’ ಇಸ್ರೇಲ್‌ ನಿಗಾದಲ್ಲಿದ್ದರೆ, ದಕ್ಷಿಣದ ‘ರಫಾ ಚೆಕ್‌ಪಾಯಿಂಟ್‌’ ಈಜಿಪ್ಟ್‌ ವಶದಲ್ಲಿದೆ. ಎರಡೂ ಚೆಕ್‌ಪಾಯಿಂಟ್‌ಗಳನ್ನು ಶನಿವಾರದಿಂದಲೇ ಮುಕ್ತಗೊಳಿಸಲಾಗಿದೆ. ಈ ಎರಡೂ ಚೇಕ್‌ಪಾಯಿಂಟ್‌ಗಳತ್ತ ದಾಳಿ ನಡೆಸುವುದಿಲ್ಲ ಎಂದು ಇಸ್ರೇಲ್‌ ಭರವಸೆ ನೀಡಿದೆ. ಹೀಗಾಗಿ ಗಾಜಾದಲ್ಲಿ ಸಿಕ್ಕಿಹಾಕಿಕೊಂಡಿದ್ದ ವಿದೇಶಿಯರು ಎರಡೂ ಚೆಕ್‌ಪಾಯಿಂಟ್‌ಗಳಿಂದ ತರಾತುರಿಯಲ್ಲಿ ದೇಶ ತೊರೆಯುತ್ತಿದ್ದಾರೆ. ಇತ್ತೀಚೆಗೆ ಭಾರತ ಸರ್ಕಾರ ಗಾಜಾದಲ್ಲಿ 4 ಹಾಗೂ ವೆಸ್ಟ್‌ ಬ್ಯಾಂಕ್‌ನಲ್ಲಿ 12 ಭಾರತೀಯರು ಸಿಲುಕಿದ್ದಾರೆ ಎಂದಿತ್ತು. ಈಗ ಒಪ್ಪಂದದಿಂದ ಇವರ ಸುರಕ್ಷಿತ ಸ್ಥಳಾಂತರಕ್ಕೂ ಅವಕಾಶ ಲಭಿಸಲಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಪಾಕ್‌ನಲ್ಲಿ ಲಷ್ಕರ್‌ ಕಮಾಂಡರ್‌ ನಿಗೂಢ ಸಾವು
ಪಾಕಿಸ್ತಾನ ಮೇಲೆ ದಾಳಿ ಆದರೆ ಬೆಂಬಲಕ್ಕೆ ಇನ್ನು ಸೌದಿ, ಟರ್ಕಿ!