ಅಟ್ಮೋರ್ (ಅಮೆರಿಕ): ಹತ್ಯೆ ಪ್ರಕರಣದ ದೋಷಿಯೊಬ್ಬನಿಗೆ ಅಮೆರಿಕದಲ್ಲಿ ನೈಟ್ರೋಜನ್ ಗ್ಯಾಸ್ ನೀಡಿ ಮರಣದಂಡನೆ ಶಿಕ್ಷೆ ಜಾರಿ ಮಾಡಲಾಗಿದೆ. ಅಲ್ಬಾಮಾ ರಾಜ್ಯದಲ್ಲಿ ನಡೆದ ಈ ಬೆಳವಣಿಗೆ ವಿಶ್ವದಲ್ಲೇ ಇಂಥ ಮೊದಲ ಪ್ರಕರಣವಾಗಿದೆ.
1982ರಲ್ಲಿ ಎಲಿಜಬೆತ್ ಎಂಬ ಮಹಿಳೆಯನ್ನು ಕೊಲೆ ಮಾಡಲು ಕೆನ್ನೆತ್ ಸ್ಮಿತ್ ಸುಪಾರಿ ಪಡೆದುಕೊಂಡು ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.
ಆತನಿಗೆ ವಿಷಯ ಇಂಜೆಕ್ಷನ್ ನೀಡಿ ಶಿಕ್ಷೆ ಜಾರಿ ಮಾಡುವ ಪ್ರಯತ್ನ 2022ರಲ್ಲಿ ನಡೆದಿತ್ತಾದರೂ ಈ ವೇಳೆ ನಡೆದ ಸಣ್ಣ ಎಡವಟ್‌ನಿಂದಾಗಿ ಬಚಾವ್ ಆಗಿದ್ದ. ಇದೀಗ ಆತನಿಗೆ ನೈಟ್ರೋಜನ್ ಗ್ಯಾಸ್ ನೀಡಿ ಶಿಕ್ಷೆ ಜಾರಿಗೊಳಿಸಲಾಗಿದೆ.
1982 ಬಳಿಕ ಹೊಸ ವಿಧಾನ:ಅಮೆರಿದಲ್ಲಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ವಿಷದ ಇಂಜೆಕ್ಷನ್ ನೀಡುವ ವಿಧಾನವನ್ನು 1982ರಿಂದಲೂ ಅನುಸರಿಸಲಾಗುತ್ತಿದೆ.
ಆದರೆ ಇಂಜೆಕ್ಷನ್ ನೀಡುವಾಗ ಕೆನ್ನೆತ್ ಬದುಕುಳಿದ ಕಾರಣ ಹೊಸ ವಿಧಾನ ಅನುಸರಿಸಿ ಮರಣದಂಡನೆ ವಿಧಿಸಲಾಗಿದೆ.
ಮರಣದಂಡನೆ ವಿಧಿಸಿದ್ದು ಹೇಗೆ?
ನೈಟ್ರೋಜನ್ ಗ್ಯಾಸ್ ಮೂಲಕ ಮರಣದಂಡನೆ ವಿಧಿಸುವುದು ಹಲವು ನಿಮಿಷಗಳ ಪಕ್ರಿಯೆಯಾಗಿದ್ದು, ಸ್ಮಿತ್ ಮುಖಕ್ಕೆ ಮಾಸ್ಕ್ ಹಾಕಿ ಅದರ ಮೂಲಕ ನೈಟ್ರೋಜನ್ ಹಾಯಿಸಲಾಯಿತು.
ಇದರಿಂದ ಶ್ವಾಸಕೋಶದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಸ್ಮಿತ್ ಬಹಳಷ್ಟು ಸಮಯ ನೆಲದ ಮೇಲೆ ಬಿದ್ದು ಹೊರಳಾಡಿ, 22 ನಿಮಿಷಗಳ ಬಳಿಕ ಸಾವನ್ನಪ್ಪಿದ.