ನೇಪಾಳದಲ್ಲಿ ಮತ್ತೆ ಬೆಚ್ಚಿ ಬೀಳಿಸುವ ಪ್ರವಾಹ

Published : Oct 12, 2026, 05:58 AM IST
nepal flood

ಸಾರಾಂಶ

7000ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಕಳೆದ ಆಗಸ್ಟ್‌ ತಿಂಗಳ ಭೀಕರ ಪ್ರವಾಹ ಕಹಿನೆನಪು ಮಾಸುವ ಮುನ್ನವೇ ನೇಪಾಳದಲ್ಲಿ ಮತ್ತೊಂದು ಭೀಕರ ದಿಡೀರ್‌ ಪ್ರವಾಹ ಕಾಣಿಸಿಕೊಂಡಿದೆ. ಬುಧಿ ಗಂಡಕಿ ನದಿಯಲ್ಲಿ ಭಾನುವಾರ ಕಾಣಿಸಿಕೊಂಡ ಹಠಾತ್‌ ಪ್ರವಾಹದಿಂದಾಗಿ ಗೋರ್ಖಾ ಜಿಲ್ಲೆಯಲ್ಲಿ ಭಾರೀ ಅನಾಹುತ ಸಂಭವಿಸಿದೆ.

ಕಾಠ್ಮಂಡು:7000ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಕಳೆದ ಆಗಸ್ಟ್‌ ತಿಂಗಳ ಭೀಕರ ಪ್ರವಾಹ ಕಹಿನೆನಪು ಮಾಸುವ ಮುನ್ನವೇ ನೇಪಾಳದಲ್ಲಿ ಮತ್ತೊಂದು ಭೀಕರ ದಿಡೀರ್‌ ಪ್ರವಾಹ ಕಾಣಿಸಿಕೊಂಡಿದೆ. ಬುಧಿ ಗಂಡಕಿ ನದಿಯಲ್ಲಿ ಭಾನುವಾರ ಕಾಣಿಸಿಕೊಂಡ ಹಠಾತ್‌ ಪ್ರವಾಹದಿಂದಾಗಿ ಗೋರ್ಖಾ ಜಿಲ್ಲೆಯಲ್ಲಿ ಭಾರೀ ಅನಾಹುತ ಸಂಭವಿಸಿದೆ.

ಪ್ರವಾಹದ ಭೀಕರತೆಗೆ 15ಕ್ಕೂ ಹೆಚ್ಚು ಮನೆ, ಸೇತುವೆ ಕೊಚ್ಚಿಹೋಗಿವೆ

ಪ್ರವಾಹದ ಭೀಕರತೆಗೆ 15ಕ್ಕೂ ಹೆಚ್ಚು ಮನೆ, ಸೇತುವೆ ಮತ್ತು 2 ಜಲವಿದ್ಯುತ್‌ ಯೋಜನೆಗಳ ಘಟಕಗಳೇ ಕೊಚ್ಚಿಹೋಗಿವೆ. ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುಮಾರು 50 ಮಂದಿಯನ್ನು ರಕ್ಷಿಸಲಾಗಿದ್ದು, 10ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ನದಿಯಲ್ಲಿ ನೀರು ಭಾರೀ ರಭಸದಿಂದ ಸಾಗಿಬರುತ್ತಿರುವ ಮತ್ತೊಂದು ಎದುರಾದ ವಸ್ತಗಳನ್ನೆಲ್ಲಾ ಆಪೋಶನ ತೆಗೆದುಕೊಂಡು ಮುಂದೆ ಸಾಗುತ್ತಿರುವ ದೃಶ್ಯಗಳು ನೋಡುಗರ ಎದೆ ಝಲ್ಲೆನಿಸಿದೆ. ಈ ನಡುವೆ ಮುನ್ನೆಚ್ಚರಿಕಾ ಕ್ರಮವಾಗಿ ನದಿ ತಟದ ಗ್ರಾಮಗಳ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರ‍ಳುವಂತೆ ಸೂಚಿಸಲಾಗಿದೆ.ಕಳೆದ ಆ.26ರಂದು ಭೋಟೆಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಕಾಣಿಸಿಕೊಂಡ ದಿಢೀರ್‌ ಪ್ರವಾಹದಲ್ಲಿ 7000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

ಬುಧಿ ಗಂಡಕಿ ನದಿಯಲ್ಲೂ ಪ್ರವಾಹ

ಇದರ ಬೆನ್ನಲ್ಲೇ ಇದೀಗ ಬುಧಿ ಗಂಡಕಿ ನದಿಯಲ್ಲೂ ಪ್ರವಾಹ ಕಾಣಿಸಿಕೊಂಡಿದ್ದು, ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ಸ್ಥಳೀಯರ ಪ್ರಕಾರ ಲೋಕ್ಪಾ ಮತ್ತು ಚುಮುಲಿಂಗ್‌ ನಡುವೆ ಗಂಡಕಿ ನದಿಯ ಉಪನದಿಯಾದ ಸ್ಯಾರ್‌ನಲ್ಲಿ ನೀರಿನ ಹರಿವಿಗೆ ತಡೆ ಉಂಟಾಗಿ ದಿಢೀರ್‌ ಪ್ರವಾಹ ಕಾಣಿಸಿಕೊಂಡಿದೆ ಎನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೇನಾ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ರಷ್ಯಾ- ಉಕ್ರೇನ್‌ ಮಧ್ಯೆ ಟ್ರಂಪ್‌ ಇಂಧನ ಕದನ ವಿರಾಮ ಡೀಲ್‌
ಸ್ಟಾರ್‌ ವಾರ್‌: ಅಂಬಾನಿ ವಿರುದ್ಧ ಮತ್ತೆ ಮಸ್ಕ್‌ ಕಿಡಿ