ಬಾಂಗ್ಲಾ: ಹಿಂದು ಹತ್ಯೆಗೈದು ಶವದ ಮೇಲೆ ಕುಣಿದು ವಿಕೃತ ಹಿಂಸೆ

Published : Jul 14, 2025, 06:15 AM IST
Bangladesh

ಸಾರಾಂಶ

ರಾಜಕೀಯವಾಗಿ ಅಸ್ಥಿರವಾಗಿರುವ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ಮುಂದುವರೆದಿವೆ. ಹಳೆ ಢಾಕಾ ಪ್ರದೇಶದಲ್ಲಿ, ಮಿಟ್ಫೋರ್ಡ್ ಆಸ್ಪತ್ರೆ ಎದುರು ಗುಜರಿ ವ್ಯಾಪಾರಿಯಾದ ಲಾಲ್ ಚಂದ್ ಸೋಹಾಗ್ ಎಂಬುವವರ ಮೇಲೆ ಕಾಂಕ್ರೀಟ್‌ ಸ್ಲ್ಯಾಬ್‌ಗಳನ್ನು ಬಳಸಿ ದಾಳಿ ಮಾಡಿ, ಹತ್ಯೆಗೈಯ್ಯಲಾಗಿದೆ.

ಢಾಕಾ: ರಾಜಕೀಯವಾಗಿ ಅಸ್ಥಿರವಾಗಿರುವ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ಮುಂದುವರೆದಿವೆ. ಹಳೆ ಢಾಕಾ ಪ್ರದೇಶದಲ್ಲಿ, ಮಿಟ್ಫೋರ್ಡ್ ಆಸ್ಪತ್ರೆ ಎದುರು ಗುಜರಿ ವ್ಯಾಪಾರಿಯಾದ ಲಾಲ್ ಚಂದ್ ಸೋಹಾಗ್ ಎಂಬುವವರ ಮೇಲೆ ಕಾಂಕ್ರೀಟ್‌ ಸ್ಲ್ಯಾಬ್‌ಗಳನ್ನು ಬಳಸಿ ದಾಳಿ ಮಾಡಿ, ಹತ್ಯೆಗೈಯ್ಯಲಾಗಿದೆ. ಬಳಿಕ ಹಂತಕರು ಶವದ ಮೇಲೆ ಕುಣಿದಾಡಿ ವಿಕೃತಿ ಮೆರೆದಿದ್ದಾರೆ. ಈ ಸಂಬಂಧ 7 ಜನರನ್ನು ಬಂಧಿಸಲಾಗಿದೆ.

ಸೋಹಾಗ್‌ರ ಸಹೋದರಿ ಮಂಜುರಾ ಬೇಗಂ ಕೊಲೆ ಪ್ರಕರಣ ದಾಖಲಿಸಿದ್ದು, ಅದರಲ್ಲಿ 19 ಆರೋಪಿಗಳನ್ನು ಹೆಸರಿಸಲಾಗಿದೆ. ಪೊಲೀಸರು ಬಂಧಿಸಿರುವ 7 ಜನರ ಪೈಕಿ ಇಬ್ಬರ ಬಳಿ ಅಕ್ರಮ ಬಂದೂಕು ಪತ್ತೆಯಾಗಿದೆ.

ಮಾಜಿ ಪ್ರಧಾನಿ ಖಲೀದಾ ಜಿಯಾರ ಬಿಎನ್‌ಪಿ ಪಕ್ಷದ ಯುವ ಮೋರ್ಚಾದ ಕೆಲ ಕಾರ್ಯಕರ್ತರಿಂದ ಸೋಹಾಗ್‌ ಹತ್ಯೆಯಾಗಿದ್ದಾರೆ ಎಂದು ಬಿಡಿ ನ್ಯೂಸ್‌24 ಮಾಧ್ಯಮ ವರದಿ ಮಾಡಿದೆ. ಕೂಡಲೇ 4 ಆರೋಪಿಗಳನ್ನು ಪಕ್ಷದಿಂದ ಹೊರಹಾಕಲಾಗಿದೆ.

ಭಾರೀ ಪ್ರತಿಭಟನೆ:

ಹಿಂಸಾಚಾರವನ್ನು ತಡೆಯುವಲ್ಲಿ ಮೊಹಮ್ಮದ್‌ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಭಾರೀ ಪ್ರತಿಭಟನೆ ನಡೆದಿದೆ. ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ‘ನಿಮ್ಮಂಥ ರಾಕ್ಷಸರಿಗೆ ಜೀವಹರಣದ ಹಕ್ಕು ನೀಡಿದ್ದು ಯಾರು? ಇಂತಹ ಅಮಾನವೀಯ ಘಟನೆ ನಡೆಯುತ್ತಿದ್ದಾಗ ಸರ್ಕಾರ ಏನು ಮಾಡುತ್ತಿತ್ತು’ ಎಂದು ಪ್ರಶ್ನಿಸಿ ಪ್ರತಿಭಟಿಸಿದ್ದಾರೆ.

ರಾಜಧಾನಿ ಢಾಕಾದಲ್ಲಿ ಇತ್ತೀಚೆಗೆ ಗುಜರಿ ವ್ಯಾಪಾರಿ ಲಾಲ್‌ ಚಂದ್‌ ಸೋಹಾಗ್‌ ಎಂಬಾತ ಮೇಲೆ ಹಲ್ಲೆ

ಕಾಂಕ್ರೀಟ್‌ ಸ್ಲ್ಯಾಬ್‌ ಬಳಸಿ ಭೀಕರವಾಗಿ ಥಳಿಸಿ ಹತ್ಯೆಗೈದು, ಬಳಿಕ ಶವದ ಮೇಲೆ ಕುಣಿದು ಹೀನಕೃತ್ಯ

ಹಿಂದೂಗಳ ಗುರಿ ಮಾಡುತ್ತಿರುವ ಮಾಜಿ ಪ್ರಧಾನಿ ಖಲೀದಾ ಪಕ್ಷದ ಕಾರ್ಯಕರ್ತರಿಂದ ಕೃತ್ಯ ಆರೋಪ

ವಿಕೃತಿ ಖಂಡಿಸಿ ಹಲವೆಡೆ ಭಾರೀ ಪ್ರತಿಭಟನೆ. ಹತ್ಯೆಗೈದ 19 ಜನರ ಪೈಕಿ 7 ಆರೋಪಿಗಳ ಬಂಧನ

PREV
Read more Articles on

Latest Stories

ಇನ್ನು 7 ದಿನ ಶುಭಾಂಶುಗೆ ಪುನಶ್ಚೇತನ ಶಿಬಿರ : ಎದುರಿಸುವ ಸವಾಲುಗಳೇನು ?
ಭುವಿಗೆ ಶುಭಾಂಶು ಸೇರಿ 4 ಯಾನಿಗಳ ಶುಭಾಗಮನ
ಏರ್‌ ಇಂಡಿಯಾ ಪತನಕ್ಕೆ ಇಂಧನ ಸ್ವಿಚ್ಚಾಫ್‌ ಕಾರಣ