ಬೈಡೆನ್ ಜನಪ್ರಿಯತೆ ಕುಸಿದಿರುವುದು ನಿಜ. ಆದರೆ, ಸ್ಪರ್ಧೆ ಅಚಲ. ಅವರು ಗೆದ್ದೇ ಗೆಲ್ಲುತ್ತಾರೆ’ : ಟೀಂ ಬೈಡೆನ್‌

KannadaprabhaNewsNetwork |  
Published : Jul 20, 2024, 12:47 AM ISTUpdated : Jul 20, 2024, 04:16 AM IST
ಬೈಡೆನ್‌ | Kannada Prabha

ಸಾರಾಂಶ

 ಹಾಲಿ ಅಧ್ಯಕ್ಷ ಜೋ ಬೈಡೆನ್ ಜನಪ್ರಿಯತೆ ಕುಸಿದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಹೊತ್ತಲ್ಲಿಯೇ, ‘ಬೈಡೆನ್ ಜನಪ್ರಿಯತೆ ಕುಸಿದಿರುವುದು ನಿಜ. ಆದರೆ, ಸ್ಪರ್ಧೆ ಅಚಲ. ಅವರು ಗೆದ್ದೇ ಗೆಲ್ಲುತ್ತಾರೆ’ ಎಂದು ಬೈಡನ್ ಪ್ರಚಾರ ಸಮಿತಿ ಅಧ್ಯಕ್ಷ ಜೆನ್ ಒ’ಮ್ಯಾಲಿ ಡಿಲಿಯನ್‌ ಹೇಳಿದ್ದಾರೆ.

ವಾಷಿಂಗ್ಟನ್‌: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಕಾವು ಜೋರಾಗಿದ್ದು, ಹಾಲಿ ಅಧ್ಯಕ್ಷ ಜೋ ಬೈಡೆನ್ ಜನಪ್ರಿಯತೆ ಕುಸಿದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಹೊತ್ತಲ್ಲಿಯೇ, ‘ಬೈಡೆನ್ ಜನಪ್ರಿಯತೆ ಕುಸಿದಿರುವುದು ನಿಜ. ಆದರೆ, ಸ್ಪರ್ಧೆ ಅಚಲ. ಅವರು ಗೆದ್ದೇ ಗೆಲ್ಲುತ್ತಾರೆ’ ಎಂದು ಬೈಡನ್ ಪ್ರಚಾರ ಸಮಿತಿ ಅಧ್ಯಕ್ಷ ಜೆನ್ ಒ’ಮ್ಯಾಲಿ ಡಿಲಿಯನ್‌ ಹೇಳಿದ್ದಾರೆ. 

ಶುಕ್ರವಾರ ಮಾತನಾಡಿದ ಅವರು ‘ಬೈಡೆನ್ ಖಂಡಿತವಾಗಿಯು ಚುನಾವಣಾ ಮುನ್ನಡೆ ಸಾಧಿಸಲಿದ್ದಾರೆ. ಟ್ರಂಪ್ ಸೋಲಿಸಲು ಹಲವು ಮಾರ್ಗವಿದೆ. ಬೈಡೆನ್ ವಯಸ್ಸಾಗಿದೆ ನಿಜ. ಆದರೆ ಅವರು ಅಮೆರಿಕದ ಜನರ ಪರವಾಗಿ ಕೆಲಸ ಮಾಡಬಹುದು ಎಂದು ಅಮೆರಿಕದ ಜನರಿಗೆ ತಿಳಿಸಲು ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ಅವರು ಗೆಲುವು ಸಾಧಿಸುತ್ತಾರೆ’ ಎಂದು ಹೇಳಿದ್ದಾರೆ.

ನೀಟ್‌ ಅಕ್ರಮ: ಜಾರ್ಖಂಡ್‌ ಎಂಬಿಬಿಎಸ್‌ ವಿದ್ಯಾರ್ಥಿನಿ ಸೆರೆ

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಶುಕ್ರವಾರ ಜಾರ್ಖಂಡ್‌ನ ವಿದ್ಯಾರ್ಥಿನಿಯೊಬ್ಬರನ್ನು ಬಂಧಿಸಿದೆ.ಬಂಧಿತೆ ಸುರಭಿ ಕುಮಾರಿ ಜಾರ್ಖಂಡ್‌ನ ರಾಂಚಿಯ ರಾಜೇಂದ್ರ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನ (ರಿಮ್ಸ್‌) ಮೊದಲ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿನಿಯಾಗಿದ್ದು, ‘ಇತ್ಯರ್ಥ ತಂಡ’ದ (ಸಾಲ್ವರ್‌ ಮಾಡ್ಯೂಲ್‌) ಸದಸ್ಯೆಯಾಗಿ ಕೆಲಸ ಮಾಡುತ್ತಿದ್ದರು. ಈಕೆ ಕದ್ದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ಉತ್ತರ ಬರೆಯುವ ಕೆಲಸ ಮಾಡುತ್ತಿದ್ದಳು. ಎರಡು ದಿನಗಳ ಸತತ ವಿಚಾರಣೆ ಬಳಿಕ ಈಕೆಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಇದರಿಂದಾಗಿ ಹಗರಣದಲ್ಲಿ ಬಂಧಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಬಾಂಗ್ಲಾ: ಮೃತ ದೀಪು ಇಸ್ಲಾಂ ಅವಹೇಳನಕ್ಕೆ ಸಾಕ್ಷಿಯೇ ಇಲ್ಲ
ಉಗ್ರರಿಗೆ ಹೆದರಿ ಹೊಸ ವರ್ಷಾಚರಣೆಯೇ ರದ್ದು