ಇರಾನ್‌ ಬೆಂಬಲಿತ ಉಗ್ರರ ಡ್ರೋನ್‌ ದಾಳಿ: 3 ಅಮೆರಿಕ ಯೋಧರು ಬಲಿ

KannadaprabhaNewsNetwork |  
Published : Jan 29, 2024, 01:31 AM ISTUpdated : Jan 29, 2024, 06:49 AM IST
ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ | Kannada Prabha

ಸಾರಾಂಶ

ಇರಾನ್‌ ಬೆಂಬಲಿತ ಉಗ್ರರು ಜೋರ್ಡಾನ್‌ ಮೇಲೆ ಭಾನುವಾರ ಡ್ರೋನ್‌ ದಾಳಿ ನಡೆಸಿದ್ದು, ಈ ವೇಳೆ ಅಲ್ಲಿದ್ದ ಮೂವರು ಅಮೆರಿಕ ಯೋಧರು ಸಾವನ್ನಪ್ಪಿದ್ದಾರೆ ಹಾಗೂ ಹಲವು ಯೋಧರು ಗಾಯಗೊಂಡಿದ್ದಾರೆ.

ಕೊಲಂಬಿಯಾ: ಇರಾನ್‌ ಬೆಂಬಲಿತ ಉಗ್ರರು ಜೋರ್ಡಾನ್‌ ಮೇಲೆ ಭಾನುವಾರ ಡ್ರೋನ್‌ ದಾಳಿ ನಡೆಸಿದ್ದು, ಈ ವೇಳೆ ಅಲ್ಲಿದ್ದ ಮೂವರು ಅಮೆರಿಕ ಯೋಧರು ಸಾವನ್ನಪ್ಪಿದ್ದಾರೆ ಹಾಗೂ ಹಲವು ಯೋಧರು ಗಾಯಗೊಂಡಿದ್ದಾರೆ. 

ಇತ್ತೀಚೆಗೆ ಇಸ್ರೇಲ್‌-ಹಮಾಸ್‌ ಯುದ್ಧ ಆರಂಭವಾದ ನಂತರದ ಮೊದಲ ಇಂಥ ಘಟನೆ ಇದಾಗಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ‘ಈ ಕೃತ್ಯಕ್ಕೆ ಯಾರು ಕಾರಣರೋ ಅವರನ್ನು ಸೂಕ್ತ ಸಮಯದಲ್ಲಿ ಹುಡುಕಿ ಪ್ರತೀಕಾರ ಕೈಗೊಳ್ಳಲಾಗುವುದು’ ಎಂದಿದ್ದಾರೆ. 

ಇತ್ತೀಚೆಗೆ ಇರಾನ್‌ ಬೆಂಬಲಿತ ಹೌತಿ ಉಗ್ರರು ಅಮೆರಿಕ ಹಡಗುಗಳ ಮೇಲೆ ಕೆಂಪು ಸಮುದ್ರದಲ್ಲಿ ದಾಳಿ ಮಾಡಿದ್ದರು.

PREV

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!