ಬಿಲಿಯನೇರ್ ಎಲಾನ್‌ ಮಸ್ಕ್‌ - ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಡೇಟಿಂಗ್‌ ವದಂತಿ!

ಸಾರಾಂಶ

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಗೂ ಬಿಲಿಯನೇರ್ ಎಲಾನ್ ಮಸ್ಕ್ ಅವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಅನ್ಯೋನ್ಯವಾಗಿ ಇರುವ ಫೋಟೋ ವೈರಲ್ ಆಗಿದ್ದು, ಇಬ್ಬರೂ ‘ಡೇಟಿಂಗ್’ ನಡೆಸುತ್ತಿದ್ದಾರೆ ಎಂಬ ಅನಿಸಿಕೆಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡತೊಡಗಿವೆ.

ವಾಷಿಂಗ್ಟನ್‌: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಗೂ ಬಿಲಿಯನೇರ್ ಎಲಾನ್ ಮಸ್ಕ್ ಅವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಅನ್ಯೋನ್ಯವಾಗಿ ಇರುವ ಫೋಟೋ ವೈರಲ್ ಆಗಿದ್ದು, ಇಬ್ಬರೂ ‘ಡೇಟಿಂಗ್’ ನಡೆಸುತ್ತಿದ್ದಾರೆ ಎಂಬ ಅನಿಸಿಕೆಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡತೊಡಗಿವೆ. 

ಕಾರ್ಯಕ್ರಮದಲ್ಲಿ ಮಸ್ಕ್‌ ಅವರು ‘ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಹೊಂದಿರವರು’ ಎಂದು ಮೆಲೋನಿಯನ್ನು ಕೊಂಡಾಡಿದ್ದಾರೆ. ಇದಕ್ಕೆ ಮೆಲೋನಿ ಧನ್ಯವಾದ ಸಲ್ಲಿಸಿದ್ದಾರೆ. 

ಇದರ ಬಳಿಕ ಡೇಟಿಂಗ್‌ ವದಂತಿ ಹಬ್ಬಿವೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಮಸ್ಕ್‌, ‘ನಾವು ಡೇಟ್‌ ಮಾಡುತ್ತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಟ್ರಂಪ್‌ ಹಿಂದಿಕ್ಕಿ ಕಮಲಾ ಹ್ಯಾರಿಸ್‌ ಮುನ್ನಡೆ: ಸಿಎನ್‌ಎನ್‌ ಸಮೀಕ್ಷೆ

ವಾಷಿಂಗ್ಟನ್‌: ಅಮೆರಿಕದಲ್ಲಿ ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಕಮಲಾ ಹ್ಯಾರಿಸ್‌ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಪೈಪೋಟಿ ಜೋರಾಗಿದೆ. ಈ ನಡುವೆಯೇ ಕಮಲಾ ಹ್ಯಾರಿಸ್‌ ಅವರು ಟ್ರಂಪ್‌ಗಿಂತ ಮುನ್ನಡೆ ಸಾಧಿಸಬಹುದು ಎಂದು ಸಿಎನ್‌ಎನ್‌/ಎಸ್‌ಎಸ್‌ಅರ್‌ಎಸ್‌ ಸಂಸ್ಥೆ ನಡೆಸಿದ ಸಮೀಕ್ಷೆ ಹೇಳಿದೆ.

ಸಿಎನ್‌ಎನ್‌ ಸೆ. 19 ರಿಂದ 22 ರ ಅವಧಿಯಲ್ಲಿ ಈ ಸಮೀಕ್ಷೆಯನ್ನು ನಡೆಸಿದ್ದು, ಕಮಲಾ ಗೆಲ್ಲುವ ಸಾಧ್ಯತೆ ಶೇ. 48ರಷ್ಟು ಹಾಗೂ ಟ್ರಂಪ್ ಗೆಲ್ಲುವ ಸಾಧ್ಯತೆ ಶೇ.47ರಷ್ಟು ಎಂದಿದೆ. 2,074 ಮತಗಳನ್ನು ಸಿಎನ್‌ಎನ್‌ ಈ ಸಮೀಕ್ಷೆಗೆ ಪರಿಗಣಿಸಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ 6 ವಾರಗಳಷ್ಟೇ ಬಾಕಿ ಉಳಿದಿದೆ.

Share this article