ಲಂಡನ್: ಬ್ರಿಟನ್ ರಾಜಕುವರಿ ಕೇಟ್, ತನಗೆ ಕ್ಯಾನ್ಸರ್ ಇದೆ. ಹೀಗಾಗಿ ಕೀಮೋಥೆರಪಿ ಮಾಡಿಸಿಕೊಳ್ಳುತ್ತಿದ್ದೇನೆ ಎಂದು ಶುಕ್ರವಾರ ರಾತ್ರಿ ಹೇಳಿದ್ದಾರೆ.
ಜನವರಿಯಲ್ಲಿ ನಡೆದ ಹೊಟ್ಟೆ ಸರ್ಜರಿ ಬಳಿಕ ಅವರು ಹೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ ಹಾಗೂ ದಾಂಪತ್ಯದ ಬಗ್ಗೆಯೂ ಊಹಾಪೋಹ ಎದ್ದಿದ್ದವು.
ಈ ನಡುವೆ ವಿಡಿಯೋ ಹೇಳಿಕೆ ನೀಡಿರುವ ಕೇಟ್, ತನಗೆ ಕ್ಯಾನ್ಸರ್ ಇದ್ದು, ಕೀಮೋಥೆರಪಿ ಮಾಡಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.