ಕೆನಡಾ ಎಲೆಕ್ಷನ್ನಲ್ಲಿ ಭಾರತ ಮಧ್ಯಪ್ರವೇಶದ ಆರೋಪ

KannadaprabhaNewsNetwork |  
Published : Jan 26, 2024, 01:45 AM ISTUpdated : Jan 26, 2024, 07:18 AM IST
ಕೆನಡಾ ಪ್ರಧಾನಿ | Kannada Prabha

ಸಾರಾಂಶ

ಕೆನಡಾ ಚುನಾವಣೆಯಲ್ಲಿ ಚೀನಾ, ರಷ್ಯಾ, ಇರಾನ್‌ ಮತ್ತು ಭಾರತ ದೇಶಗಳು ಪ್ರಭಾವ ಬೀರಿರುವ ಕುರಿತು ತನಿಖೆಗೆ ಪ್ರಧಾನಿ ಜಸ್ಟಿನ್‌ ಟ್ರುಡೊ ಆದೇಶಿಸಿದ್ದಾರೆ.

ಕೆನಡಾ: 2019 ಮತ್ತು 2021ರಲ್ಲಿ ಕೆನಡಾದಲ್ಲಿ ನಡೆದ ಚುನಾವಣೆಯಲ್ಲಿ ಅಕ್ರಮವಾಗಿ ಮಧ್ಯಪ್ರವೇಶ ಮಾಡಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಭಾರತದ ಮೇಲೆ ಉಗ್ರ ನಿಜ್ಜರ್‌ ಹತ್ಯೆಯ ಆರೋಪ ಮಾಡಿದ್ದ ಕೆನಡಾ ಇದೀಗ ಮತ್ತೊಂದು ಆರೋಪ ಮಾಡಿದೆ.

ಕೆನಡಾ ಚುನಾವಣೆಯಲ್ಲಿ ಚೀನಾ ಮತ್ತು ರಷ್ಯಾ ದೇಶಗಳು ಮೂಗು ತೂರಿಸಿವೆ ಎಂದು ಈ ಹಿಂದೆ ಆರೋಪ ಮಾಡಲಾಗಿತ್ತು.

ಇದೀಗ ಈ ಪಟ್ಟಿಗೆ ಭಾರತ ಮತ್ತು ಇರಾನ್‌ ದೇಶಗಳನ್ನು ಸಹ ಸೇರ್ಪಡೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಗುಪ್ತಚರ ಇಲಾಖೆಯಿಂದ ಸೋರಿಕೆಯಾಗಿರುವ ದಾಖಲಾತಿಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.

ಈ ದಾಖಲಾತಿಗಳು ಮಾಧ್ಯಮಗಳಿಗೆ ಸೋರಿಕೆಯಾದ ಬಳಿಕ ಈ ಕುರಿತಾಗಿ ತನಿಖೆ ನಡೆಸುವಂತೆ ಪ್ರಧಾನಿ ಜಸ್ಟಿನ್‌ ಟ್ರೂಡೋ ಆದೇಶಿಸಿದ್ದಾರೆ.

PREV

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!