ಅರುಣಾಚಲ ಪ್ರದೇಶ ನಮ್ಮದು ಎಂದ ಚೀನಾ!

KannadaprabhaNewsNetwork |  
Published : Mar 26, 2024, 01:00 AM ISTUpdated : Mar 26, 2024, 11:27 AM IST
India vs China

ಸಾರಾಂಶ

ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಮತ್ತು ಈ ರಾಜ್ಯ ತನ್ನದು ಎನ್ನುವ ಚೀನಾದ ಹೇಳಿಕೆ ಅಸಂಬದ್ಧ ಎಂದಿರುವ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿಕೆಗೆ ಚೀನಾ ಆಕ್ರೋಶ ವ್ಯಕ್ತಪಡಿಸಿದೆ.

ಪಿಟಿಐ ಬೀಜಿಂಗ್‌

ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಮತ್ತು ಈ ರಾಜ್ಯ ತನ್ನದು ಎನ್ನುವ ಚೀನಾದ ಹೇಳಿಕೆ ಅಸಂಬದ್ಧ ಎಂದಿರುವ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿಕೆಗೆ ಚೀನಾ ಆಕ್ರೋಶ ವ್ಯಕ್ತಪಡಿಸಿದೆ.

 ‘ಜಂಗ್ನನ್‌ (ಅರುಣಾಚಲ ಪ್ರದೇಶಕ್ಕೆ ಚೀನಾದ ಹೆಸರು) ಯಾವತ್ತೂ ಚೀನಾದ್ದಾಗಿತ್ತು. ಅದನ್ನು 1987ರಲ್ಲಿ ಭಾರತ ಅಕ್ರಮವಾಗಿ ವಶಪಡಿಸಿಕೊಂಡಿದೆ. 

ಭಾರತ-ಚೀನಾ ನಡುವಿನ ಗಡಿ ವಿವಾದ ಇನ್ನೂ ಇತ್ಯರ್ಥವಾಗಿಲ್ಲ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್‌ ಜಿಯಾನ್‌ ಹೇಳಿದ್ದಾರೆ. 

ಅದರೊಂದಿಗೆ ಈ ತಿಂಗಳೊಂದರಲ್ಲೇ ನಾಲ್ಕು ಬಾರಿ ಅರುಣಾಚಲ ತಮ್ಮದು ಎಂದು ಚೀನಾ ಅಧಿಕೃತವಾಗಿ ಹೇಳಿದಂತಾಗಿದೆ.

ಇತ್ತೀಚೆಗೆ ಸಿಂಗಾಪುರದಲ್ಲಿ ಮಾತನಾಡುವಾಗ ಜೈಶಂಕರ್‌ ಅವರು ಅರುಣಾಚಲದ ಮೇಲಿನ ಚೀನಾದ ಹಕ್ಕು ಪ್ರತಿಪಾದನೆ ಅಸಂಬದ್ಧ ಎಂದಿದ್ದರು.

ಅದಕ್ಕೆ ಸೋಮವಾರ ಉತ್ತರಿಸಿದ ಲಿನ್‌ ಜಿಯಾನ್‌, ‘ಜಂಗ್ನನ್‌ನಲ್ಲಿ ಚೀನಾದ ಆಡಳಿತವಿತ್ತು. ಅದನ್ನು ಯಾರೂ ಅಲ್ಲಗಳೆಯಲಾಗದು. 1987ರಲ್ಲಿ ಭಾರತ ಈ ಪ್ರದೇಶವನ್ನು ಅಕ್ರಮವಾಗಿ ವಶಪಡಿಸಿಕೊಂಡಿತು. 

ಅದನ್ನು ನಾವು ಸಾಕಷ್ಟು ಬಾರಿ ಕಠಿಣ ಮಾತುಗಳಲ್ಲಿ ಖಂಡಿಸಿದ್ದೇವೆ. ಈ ವಿಷಯದಲ್ಲಿ ಚೀನಾದ ನಿಲುವು ಯಾವತ್ತೂ ಬದಲಾಗದು’ ಎಂದು ಹೇಳಿದರು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

‘ಮೇಡ್‌ ಇನ್‌ ಚೀನಾ’ ಅಸ್ತ್ರಗಳು ಈಗ ವೆನಿಜುವೆಲಾದಲ್ಲೂ ಫೇಲ್‌!
ನಮ್ಮ ಯುದ್ಧ ವಿಮಾನಕ್ಕೆ ಭಾರೀ ಡಿಮ್ಯಾಂಡ್‌, ಸಾಲ ಬೇಡ : ಪಾಕ್‌