ಮಲಿನ ರಾಜಧಾನಿ: ದೆಹಲಿ ವಿಶ್ವದ ನಂ1

KannadaprabhaNewsNetwork |  
Published : Mar 20, 2024, 01:17 AM ISTUpdated : Mar 20, 2024, 12:41 PM IST
ಮಲಿನ ರಾಜಧಾನಿ, | Kannada Prabha

ಸಾರಾಂಶ

ವಿಶ್ವದ ಅತ್ಯಂತ ಮಲಿನ ರಾಜಧಾನಿ, ಮೆಟ್ರೋಪಾಲಿಟನ್‌ ಪ್ರದೇಶಗಳ ಪಟ್ಟಿಯೊಂದು ಬಿಡುಗಡೆಯಾಗಿದ್ದು, ದೆಹಲಿ ವಿಶ್ವದ ಅತ್ಯಂತ ಮಲಿನ ನಗರ, ಬಿಹಾರದ ಬೇಗುಸರಾಯ್‌ ವಿಶ್ವದ ಅತ್ಯಂತ ಮಲಿನ ಮೆಟ್ರೋಪಾಲಿಟನ್‌ ಪ್ರದೇಶವೆಂಬ ಹಣೆಪಟ್ಟಿಗೆ ಪಾತ್ರವಾಗಿದೆ.

ನವದೆಹಲಿ: ವಿಶ್ವದ ಅತ್ಯಂತ ಮಲಿನ ರಾಜಧಾನಿ, ಮೆಟ್ರೋಪಾಲಿಟನ್‌ ಪ್ರದೇಶಗಳ ಪಟ್ಟಿಯೊಂದು ಬಿಡುಗಡೆಯಾಗಿದ್ದು, ದೆಹಲಿ ವಿಶ್ವದ ಅತ್ಯಂತ ಮಲಿನ ನಗರ, ಬಿಹಾರದ ಬೇಗುಸರಾಯ್‌ ವಿಶ್ವದ ಅತ್ಯಂತ ಮಲಿನ ಮೆಟ್ರೋಪಾಲಿಟನ್‌ ಪ್ರದೇಶವೆಂಬ ಹಣೆಪಟ್ಟಿಗೆ ಪಾತ್ರವಾಗಿದೆ.

ಇನ್ನು ವಿಶ್ವದ ಟಾಪ್‌ 10 ಮಲಿನ ನಗರಗಳಲ್ಲಿ ಭಾರತದ 9 ನಗರಗಳು, ಟಾಪ್‌ 50ರಲ್ಲಿ ಭಾರತದ 42 ನಗರಗಳು ಸ್ಥಾನಪಡೆದಿವೆ. ಇನ್ನು ದೇಶಗಳ ಪಟ್ಟಿಯಲ್ಲಿ ಭಾರತ ವಿಶ್ವದ 3ನೇ ಅತ್ಯಂತ ಮಲಿನ ದೇಶವೆಂಬ ಕುಖ್ಯಾತಿಗೆ ಪಾತ್ರವಾಗಿದೆ. 

ಮೊದಲ ಎರಡು ಸ್ಥಾನದಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿವೆ. 2022ರಲ್ಲಿ ಭಾರತ 8ನೇ ಸ್ಥಾನ ಪಡೆದಿತ್ತು.ಸ್ವಿಜರ್ಲೆಂಡ್‌ ಮೂಲ ಐಕ್ಯು ಏರ್‌ ಬಿಡುಗಡೆ ಮಾಡಿರುವ 2023ನೇ ಸಾಲಿನ ವಿಶ್ವ ವಾಯುಗುಣಮಟ್ಟ ವರದಿಯಲ್ಲಿ ಈ ಅಂಶಗಳಿವೆ.

ಸಮಾಧಾನದ ವಿಷಯವೆಂದರೆ ಭಾರತದ ಟಾಪ್‌ 300 ಮಲಿನ ನಗರಗಳ ಪಟ್ಟಿಯಲ್ಲಿ ಕರ್ನಾಟಕ ಯಾವುದೇ ನಗರಗಳು ಕೂಡಾ ಸ್ಥಾನ ಪಡೆದಿಲ್ಲ.

ನಂ.1 ನಗರ: ಬಿಹಾರದ ಬೇಗುಸರಾಯ್‌ ಪ್ರತಿ ಕ್ಯುಬಿಕ್‌ ಮೀಟರ್‌ ಪ್ರದೇಶದಲ್ಲಿ 118.9 ಮೈಕ್ರೋಗ್ರಾಂನಷ್ಟು ಪಿಎಂ (ಪರ್ಟಿಕ್ಯುಲೇಟ್‌ ಮ್ಯಾಟರ್‌) 2.5 ಮಾಲಿನ್ಯಕಾರಕ ಅಂಶಗಳನ್ನು ಹೊಂದುವ ಮೂಲಕ ವಿಶ್ವದ ಅತ್ಯಂತ ಕಳಪೆ ವಾಯಗುಣಮಟ್ಟ ಹೊಂದಿರುವ ಮೆಟ್ರೋಪಾಲಿಟನ್‌ ಪ್ರದೇಶವೆಂಬ ಕುಖ್ಯಾತಿ ಪಡೆದಿದೆ.

ದೆಹಲಿ ನಂ.1: ರಾಜಧಾನಿ ನಗರಗಳ ಪೈಕಿ ದೆಹಲಿ ಪ್ರತಿ ಕ್ಯುಬಿಕ್‌ ಮೀಟರ್‌ಗೆ 92.7 ಮೈಕ್ರೋಗ್ರಾಂನಷ್ಟು ಪಿಎಂ 2.5 ಹೊಂದುವ ಮೂಲಕ ವಿಶ್ವದಲ್ಲೇ ಅತ್ಯಂತ ಕಳಪೆ ವಾಯಗುಣ ಹೊಂದಿದ ರಾಜಧಾನಿಯಾಗಿ ಹೊರಹೊಮ್ಮಿದೆ.ಭಾರತದ 133 ಕೋಟಿ ಜನರು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಸುರಕ್ಷಿತ ಎನ್ನಬಹುದಾದ ಪಿಎಂ 2.5 ಗಿಂತ 7 ಪಟ್ಟು ಹೆಚ್ಚು ಮಾಲಿನ್ಯಕಾರಕ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

ವಿಶ್ವದ ಟಾಪ್‌ 10 ಮೆಟ್ರೋಪಾಲಿಟನ್ ಪ್ರದೇಶ: ಬೇಗುಸರಾಯ್‌118.9, ಗುವಾಹಟಿ 105.4, ದೆಹಲಿ102.1, ಮುಲ್ಲನ್‌ಪುರ 100.4, ಲಾಹೋರ್‌ 99.5, ನವದೆಹಲಿ 92.7, ಸಿವಾನ್‌ 90.6, ಸಹಸ್ರಾ 89.4, ಗೋಶಾಹಿನ್‌ಗಾವ್‌ 89.3, ಕತಿಹಾರ್‌ 88.8.

ಟಾಪ್‌ 3 ದೇಶಗಳು: ಬಾಂಗ್ಲಾದೇಶ, ಪಾಕಿಸ್ತಾನ, ಭಾರತ

ಟಾಪ್‌ 3 ಕಡಿಮೆ ಮಾಲಿನ್ಯದ ದೇಶಗಳು:ಆಸ್ಟ್ರೇಲಿಯಾ, ಎಸ್ಟೋನಿಯಾ, ಫಿನ್ಲೆಂಡ್‌

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಬಾಂಗ್ಲಾದ ಸಂಭಾವ್ಯ ಪ್ರಧಾನಿ ರಹಮಾನ್‌ ತವರಿಗೆ ವಾಪಸ್‌
ಚೀನಾದಲ್ಲಿ 1 ಮಗು ನೀತಿಯ ಜನನಿ ಪೆಂಗ್‌ ಪೆಯುನ್‌ ನಿಧನ