ಇಸ್ಲಾಮಾಬಾದ್/ಕಾಬೂಲ್: ಅಫ್ಘಾನಿಸ್ತಾನದ ಎರಡು ನಗರಗಳ ಮೇಲೆ ಪಾಕಿಸ್ತಾನ ಸೋಮವಾರ ವೈಮಾನಿಕ ದಾಳಿ ನಡೆಸಿದೆ.
ಇತ್ತೀಚಿಗೆ ಪಾಕಿಸ್ತಾನದ ಕೆಲ ನಗರಗಳಲ್ಲಿ ನಡೆದ ಉಗ್ರ ದಾಳಿಯ ಹಿಂದೆ ಅಫ್ಘಾನಿಸ್ತಾನದಲ್ಲಿ ಬೀಡುಬಿಟ್ಟಿರುವ ಉಗ್ರರ ಕೈವಾಡ ಇದೆ ಎಂಬ ಆರೋಪದ ಮೇಲೆ ಪಾಕ್ ಈ ದಾಳಿ ನಡೆಸಿದೆ.
‘ಪಾಕಿಸ್ತಾನ ಗಡಿಯಲ್ಲಿರುವ ಅಫ್ಘಾನಿಸ್ತಾನ ಪ್ರಾಂತ್ಯದ ಪಾಕ್ತಿಕಾ ಮತ್ತು ಖೋಸ್ಟ್‌ನ ನಾಗರಿಕ ಮನೆಗಳ ಮೇಲೆ ಸೋಮವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ವೈಮಾನಿಕ ದಾಳಿ ನಡೆದಿದೆ.