ಕೇರಳದಲ್ಲೀಗ ಡಿಜಿಟಲ್‌ ಸಾಕ್ಷರತೆ: ಶತಾಯುಷಿಗಳು ಮೊಬೈಲ್‌ ಪಂಡಿತರು

Published : Aug 18, 2025, 08:24 AM IST
best mobile phones under Rs 15000

ಸಾರಾಂಶ

ದೇಶದ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಕೇರಳ ಮತ್ತೊಂದು ಸಾಕ್ಷರತೆ ಅಭಿಯಾನವನ್ನು ಯಶಸ್ವಿಯಾಗಿ ಪೂರೈಸಿದೆ. ಹಿರಿಯ ನಾಗರಿಕರಿಗೆ ಮೊಬೈಲ್‌ ಮತ್ತು ಆನ್ಲೈನ್‌ ಜ್ಞಾನವನ್ನು ಕಲಿಸಲು ಅಲ್ಲಿನ ಸರ್ಕಾರ ಡಿಜಿಟಲ್‌ ಸಾಕ್ಷರತೆ ಅಭಿಯಾನವನ್ನು ನಡೆಸಿದೆ.

ತಿರುವನಂತಪುರ: ದೇಶದ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಕೇರಳ ಮತ್ತೊಂದು ಸಾಕ್ಷರತೆ ಅಭಿಯಾನವನ್ನು ಯಶಸ್ವಿಯಾಗಿ ಪೂರೈಸಿದೆ. ಹಿರಿಯ ನಾಗರಿಕರಿಗೆ ಮೊಬೈಲ್‌ ಮತ್ತು ಆನ್ಲೈನ್‌ ಜ್ಞಾನವನ್ನು ಕಲಿಸಲು ಅಲ್ಲಿನ ಸರ್ಕಾರ ಡಿಜಿಟಲ್‌ ಸಾಕ್ಷರತೆ ಅಭಿಯಾನವನ್ನು ನಡೆಸಿದೆ. 

ಈ ಮೂಲಕ ದೇಶದ ಮೊದಲ ಡಿಜಿಟಲ್‌ ಸಾಕ್ಷರತೆಯ ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದರಿಂದಾಗಿ 22 ಲಕ್ಷ ಹಿರಿಯ ನಾಗರಿಕರು ಡಿಜಿಟಲ್‌ ಜ್ಞಾನವನ್ನು ಕರಗತಗೊಳಿಸಿಕೊಂಡಿದ್ದಾರೆ. ಇದೇ ರೀತಿ 104 ವರ್ಷದ ಎಂ.ಎ.ಅಬ್ದುಲ್ಲಾ ಮೌಲ್ವಿ ಎಂಬುವರು ಈಗ ಸ್ವಯಂಪ್ರೇರಿತರಾಗಿ ಯೂಟ್ಯೂಬ್‌ ವೀಕ್ಷಣೆ, ವಿಡಿಯೋ ಕಾಲ್‌ ಮಾಡುವುದನ್ನು ಸಹ ಕಲಿತಿದ್ದಾರೆ. 2022ರಲ್ಲಿ ಜಾರಿಗೆ ತಂದ ಈ ಯೋಜನೆಯಲ್ಲಿ ವಿದ್ಯಾರ್ಥಿಗಳು, ಸ್ವಯಂಸೇವಕರು ಮತ್ತು ಸರ್ಕಾರಿ ಅಧಿಕಾರಿಗಳ ಒಗ್ಗಟ್ಟಿನ ಕೆಲಸದಿಂದಾಗಿ ಈ ಕೀರ್ತಿ ಸಾಕಾರವಾಗಿದೆ ಎಂದು ಅಲ್ಲಿನ ಸ್ಥಳೀಯ ಸ್ವ- ಸರ್ಕಾರ ಇಲಾಖೆ ಸಚಿವ ಎಂ.ಬಿ.ರಾಜೇಶ್‌ ತಿಳಿಸಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ