ನ್ಯೂಯಾರ್ಕ್: ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ದೂರವಾಗಿದ್ದ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ‘ದ ಅಮೆರಿಕನ್ ಪಾರ್ಟಿ’ ಎಂಬ ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ಘೋಷಣೆ ಮಾಡಿದ್ದಾರೆ. ಅಮೆರಿಕನ್ನರಿಗೆ ಅವರ ಸ್ವಾತಂತ್ರ್ಯವನ್ನು ಮರಳಿಸಲು ಮತ್ತು ದೇಶದಲ್ಲಿನ ಎರಡು ಪಕ್ಷಗಳ ವ್ಯವಸ್ಥೆ ಬದಲಾಯಿಸಲು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಮಸ್ಕ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಘೋಷಿಸಿದ್ದಾರೆ.
ಆದರೆ ಪಕ್ಷವನ್ನು ಯಾವಾಗ? ಎಲ್ಲಿ ನೋಂದಣಿ ಮಾಡಿಸಲಾಗುವುದು ಎಂದು ಅವರು ಮಾಹಿತಿ ನೀಡಿಲ್ಲ. ಸಂವಿಧಾನ ಬದಲಾವಣೆ ಮೂಲಕ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಕಣಕ್ಕೆ ಇಳಿಯಲು ಯೋಜಿಸುತ್ತಿರುವ ಟ್ರಂಪ್ ಮತ್ತು ಅವರ ಡೆಮಾಕ್ರೆಟ್ ಪಕ್ಷಕ್ಕೆ ಈ ಬೆಳವಣಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ರನ್ನು ಬಲವಾಗಿ ಬೆಂಬಲಿಸಿದ್ದ ಮಸ್ಕ್, ಅವರ ಪಕ್ಷಕ್ಕೆ ಸಾವಿರಾರು ಕೋಟಿ ದೇಣಿಗೆ ನೀಡಿದ್ದರು. ಜೊತೆಗೆ ಆಡಳಿತ ಸುಧಾರಣೆ ಇಲಾಖೆಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ ಇತ್ತೀಚೆಗೆ ಟ್ರಂಪ್ ಸರ್ಕಾರ ಅಂಗೀಕರಿಸಿದ ಅಕ್ರಮ ವಲಸಿಗರನ್ನು ದೇಶದಿಂದ ಹೊರದಬ್ಬುವ, ಶ್ರೀಮಂತರ ಮೇಲಿನ ತೆರಿಗೆ ಕಡಿತ ಮಾಡುವ, ಬಡವರ ಮೇಲೆ ಹೆಚ್ಚಿನ ತೆರಿಗೆ ಹೇರುವ ‘ಬಿಗ್ ಬ್ಯೂಟಿಫುಲ್’ ಮಸೂದೆಯನ್ನು ಮಸ್ಕ್ ಬಹುವಾಗಿ ವಿರೋಧಿಸಿದ್ದರು. ಒಂದು ವೇಳೆ ಮಸೂದೆ ಅಂಗೀಕರಿಸಿದರೆ ತಾವು ಹೊಸ ಪಕ್ಷ ಕಟ್ಟುವುದಾಗಿ ಮಸ್ಕ್ ಎಚ್ಚರಿಸಿದ್ದರು.
ಮತ್ತೊಂದೆಡೆ ಇದಕ್ಕೆ ತಿರುಗೇಟು ನೀಡಿದ್ದ ಟ್ರಂಪ್, ಒಂದು ವೇಳೆ ಮಸೂದೆ ವಿರೋಧಿಸಿದರೆ ವಲಸಿಗರಾದ ಮಸ್ಕ್‌ರನ್ನು ಅವರ ತವರು ದೇಶ ಆಫ್ರಿಕಾಕ್ಕೆ ಗಂಟುಮೂಟೆ ಕಟ್ಟಿ ಕಳುಹಿಸಬೇಕಾಗುತ್ತದೆ ಮತ್ತು ಮಸ್ಕ್ ಕಂಪನಿಗೆ ನೀಡುತ್ತಿರುವ ಸಾವಿರಾರು ಕೋಟಿ ರು. ಸಬ್ಸಿಡಿ ರದ್ದು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಈ ಜಟಾಪಟಿ ಬಳಿಕ ವಿವಾದಿತ ಬಳಿಕ ಮಸೂದೆ ಅಂಗೀಕಾರಗೊಂಡಿತ್ತು.
ಅದರ ಬೆನ್ನಲ್ಲೇ ಶನಿವಾರ ಪ್ರತಿಕ್ರಿಯೆ ನೀಡಿರುವ ಮಸ್ಕ್, ‘ನಿಮ್ಮ ಸ್ವಾತಂತ್ರ್ಯವನ್ನು ಮರಳಿ ನಿಮಗೆ ನೀಡಲು ಇಂದು ಅ ಅಮೆರಿಕ ಪಾರ್ಟಿ ಸ್ಥಾಪಿಸಲಾಗಿದೆ. ದುಂದುವೆಚ್ಚ ಮತ್ತು ಭ್ರಷ್ಟಾಚಾರದ ಮೂಲಕ ದೇಶವನ್ನು ದಿವಾಳಿ ಮಾಡಲಾಗುತ್ತಿರುವಾಗ, ನಾವು ಒಂದು ಪಕ್ಷದ ವ್ಯವಸ್ಥೆಯಲ್ಲಿದ್ದೇವೆ ಎಂದು ಹೇಳಬಹುದೇ ಹೊರತೂ ಪ್ರಜಾಪ್ರಭುತ್ವದಲ್ಲಲ್ಲ. ಮುಂದಿನ ವರ್ಷದ ಮಧ್ಯಂತರ ಚುನಾವಣೆ ವೇಳೆಗೆ ನಾವು ಸಕ್ರಿಯ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದ್ದೇವೆ. ಆರಂಭದಲ್ಲಿ ನಾವು ಸೀಮಿತ ಪ್ರಮಾಣದಲ್ಲಿ ಸಂಸತ್ತಿನ ಮೇಲ್ಮನೆ ಮತ್ತು ಕೆಳಮನೆಯ ಸದಸ್ಯರನ್ನು ಬೆಂಬಲಿಸಲಿದ್ದೇವೆ’ ಎಂದು ಹೇಳಿದ್ದಾರೆ.
ದ್ವಿಪಕ್ಷೀಯ ಪದ್ಧತಿಯದೇಶದಲ್ಲಿ 3ನೇ ಪಕ್ಷಕ್ಕೆ ಯಶಸ್ಸು ಸಿಗುತ್ತಾ?
ಅಮೆರಿಕದಲ್ಲಿ ಹಲವು ರಾಜಕೀಯ ಪಕ್ಷಗಳು ಇವೆಯಾದರೂ, 1850ರಲ್ಲಿ ಅಮೆರಿಕ ರಚನೆಯಾದ ಬಳಿಕ ಮತ್ತು 1852ರಲ್ಲಿ ನಡೆದ ಮೊದಲ ಚುನಾವಣೆಯಿಂದ ಹಿಡಿದು ಇಲ್ಲಿಯವರೆಗೆ ಪ್ರತಿ ಚುನಾವಣೆಯನ್ನು ಒಂದೂ ಡೆಮಾಕ್ರೆಟ್ ಪಕ್ಷ ಇಲ್ಲವೇ ರಿಪಬ್ಲಿಕನ್ ಪಕ್ಷಗಳು ಮಾತ್ರವೇ ಗೆದ್ದಿವೆ. ಹೀಗಾಗಿ ಅಮೆರಿಕದಲ್ಲಿ ದ್ವಿಪಕ್ಷೀಯ ರಾಜಕೀಯ ಪಕ್ಷ ಪದ್ಧತಿ ಇದೆ ಎನ್ನಲಾಗುತ್ತಿದೆ. ಮೂರನೇ ಪಕ್ಷ ಸ್ಥಾಪನೆಯ ಹಲವು ಯತ್ನಗಳು ಈವರೆಗೆ ಹಲವು ಬಾರಿ ನಡೆದಿದೆಯಾದರೂ ಅದು ಒಮ್ಮೆಯೂ ಫಲ ಕೊಟ್ಟಿಲ್ಲ.
ಹೊಸ ಪಕ್ಷ ಏಕೆ?-
ಕಳೆದ ವರ್ಷ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಮಸ್ಕ್ ಬೆಂಬಲ ಘೋಷಿಸಿದ್ದರು. ಸಹಸ್ರಾರು ಕೋಟಿ ದೇಣಿಗೆ ನೀಡಿದ್ದರು- ಇದಕ್ಕೆ ಪ್ರತಿಯಾಗಿ, ಗೆದ್ದ ಬಳಿಕ ಆಡಳಿತ ಸುಧಾರಣಾ ಮುಖ್ಯಸ್ಥರನ್ನಾಗಿ ವಿಶ್ವದ ನಂ.1 ಶ್ರೀಮಂತ್ ಮಸ್ಕ್‌ರನ್ನು ಟ್ರಂಪ್ ನೇಮಿಸಿದ್ದರು- ವಲಸಿಗರನ್ನು ದೇಶದಿಂದ ದಬ್ಬುವ, ಶ್ರೀಮಂತರ ತೆರಿಗೆ ಕಡಿತಗೊಳಿಸುವ, ಬಡವರಿಗೆ ತೆರಿಗೆ ಹೇರುವ ಮಸೂದೆಯನ್ನು ಟ್ರಂಪ್ ತಂದಿದ್ದರು- ಇದಕ್ಕೆ ವಿರೋಧ ಸೂಚಿಸಿದ್ದರಿಂದ ಮಸ್ಕ್- ಟ್ರಂಪ್ ಸಂಬಂಧ ಹಳಸಿತ್ತು. ಇಬ್ಬರ ನಡುವೆ ವಾಕ್ಸಮರವೇ ನಡೆದಿತ್ತು. ಈಗ ಅದು ವಿಕೋಪಕ್ಕೆ